»   » ಕಾರ್ಗಿಲ್ ನಲ್ಲಿ ಮಡಿದ ವೀರ ಯೋಧರಿಗೆ ತಾರೆಯರ ಟ್ವೀಟ್ ನಮನ

ಕಾರ್ಗಿಲ್ ನಲ್ಲಿ ಮಡಿದ ವೀರ ಯೋಧರಿಗೆ ತಾರೆಯರ ಟ್ವೀಟ್ ನಮನ

Posted By:
Subscribe to Filmibeat Kannada

ಇಂದು ಕಾರ್ಗಿಲ್ ವಿಜಯೋತ್ಸವದ ದಿನ (ಜುಲೈ 26). ರಕ್ತ ಹೆಪ್ಪುಗಟ್ಟಿಸುವ ಹಿಮದ ರಾಶಿಯ ನಡುವೆ ನಮ್ಮ ದೇಶದ ಸೈನಿಕರು ಪಾಕ್ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ, ಮಾತೃಭೂಮಿಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ, ಜೀವದ ಹಂಗು ತೊರೆದು ಕಾದಾಡಿ ವಿಜಯ ತಂದುಕೊಟ್ಟ ಪುಣ್ಯ ದಿನ.

ಈ ದಿನ ಇಡೀ ದೇಶದ ಜನತೆಯ ಮನದಲ್ಲೂ ಅಮರವಾಗಿ ಉಳಿದಿರುವ 'ಕಾರ್ಗಿಲ್ ದಿನ'. ನಾವೆಲ್ಲರೂ ಈ ದಿನವನ್ನು ಬಹಳ ನೋವಿನಿಂದ ಆಚರಿಸುತ್ತೇವೆ. 1999ರ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಯೋಧರ ಸ್ಮರಣಾರ್ಥವಾಗಿ ಈ ದಿನವನ್ನು 'ಕಾರ್ಗಿಲ್ ವಿಜಯ್ ದಿವಸ' ಎಂದು ಕರೆಯಲಾಗುತ್ತದೆ.[ಚಿತ್ರಗಳಲ್ಲಿ: ಕಾರ್ಗಿಲ್ ವೀರ ಯೋಧರಿಗೆ ನಮನ]

ಈ ಅಪೂರ್ವ 'ಕಾರ್ಗಿಲ್ ವಿಜಯ' ದಿನವನ್ನು ಚಿತ್ರರಂಗದ ತಾರೆಯರು ಟ್ವೀಟ್ ಮಾಡುವ ಮೂಲಕ ಹೆಮ್ಮೆ ಮತ್ತು ಅಭಿಮಾನದಿಂದ ಆಚರಿಸಿದ್ದಾರೆ. ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್ ಸೇರಿದಂತೆ ಟಾಲಿವುಡ್ ನ ನಟ-ನಟಿಯರು ಟ್ವೀಟ್ ಮಾಡುವ ಮೂಲಕ ಮಡಿದ ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ. [ಯುವ ಬ್ರಿಗೇಡ್ ನಿಂದ 'ಕಾರ್ಗಿಲ್ ವಿಜಯ ದಿವಸ್' ಆಚರಣೆ] ಟ್ವೀಟ್ ಕಲೆಕ್ಷನ್ ಕೆಳಗಿನ ಸ್ಲೈಡ್ಸ್ ಗಳಲ್ಲಿ...

ಚಿತ್ರರಂಗದ ನಟ-ನಟಿಯರ ಟ್ವೀಟ್ ನಮನ

ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಚಿತ್ರರಂಗದ ನಟ-ನಟಿಯರು ಟ್ವೀಟ್ ಮಾಡುವ ಮೂಲಕ ನಮನ ಸಲ್ಲಿಸಿದ್ದಾರೆ.

ಕನ್ನಡ ನಟಿ ಪಾರುಲ್ ಯಾದವ್

"ನಮ್ಮನ್ನು ಸುರಕ್ಷಿತವಾಗಿರಿಸಲು ನಿಸ್ವಾರ್ಥ ಹೋರಾಟ ಮಾಡಿ ಹುತಾತ್ಮರಾದ ನಮ್ಮ ಕೆಚ್ಚೆದೆಯ ಸೈನಿಕರಿಗೆ ನನ್ನದೊಂದು ಸೆಲ್ಯೂಟ್. ನಿಮ್ಮ ತ್ಯಾಗವನ್ನು ನಾವೆಂದು ಮರೆಯಲು ಸಾಧ್ಯವಿಲ್ಲ, ಜೈ ಹಿಂದ್" ಎಂದು ನಟಿ ಪಾರುಲ್ ಯಾದವ್ ಅವರು ಟ್ವೀಟ್ ಮಾಡುವ ಮೂಲಕ ಮಡಿದ ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ.

ನಟಿ ರಾಗಿಣಿ ದ್ವಿವೇದಿ

'ಭಾರತೀಯ ಸೇನಾ ನಾಯಕರಿಗೆ ನನ್ನದೊಂದು ಸೆಲ್ಯೂಟ್' ಎಂದು ನಟಿ ರಾಗಿಣಿ ದ್ವಿವೇದಿ ಟ್ವೀಟ್ ಮಾಡಿದ್ದಾರೆ.

ನಟಿ ರವೀನಾ ಟಂಡನ್

"ಕಾರ್ಗಿಲ್ ಗೆ ಭೇಟಿ ಮಾಡಿದ ಸಂದರ್ಭ, ಚಿತ್ರಗಳು ಅಷ್ಟು ಸ್ಪಷ್ಟವಾಗಿಲ್ಲ, ಕೆಚ್ಚೆದೆಯ ವೀರರನ್ನು ಭೇಟಿ ಮಾಡಿದ್ದೆ. ಮರೆಯಲಾರದ ನೆನಪುಗಳು" ಎಂದು ನಟಿ ರವೀನಾ ಟಂಡನ್ ಟ್ವೀಟ್ ನಮನ ಮಾಡಿದ್ದಾರೆ.

ಬಾಲಿವುಡ್ ನಟ ಅನುಪಮ್ ಖೇರ್

'ಕಾರ್ಗಿಲ್ ವಿಜಯ್ ದಿನ, ವಿಜಯದ ದಿನ, ಗೆಲುವು ಮತ್ತು ದೇಶಭಕ್ತಿಯ ದಿನ. ಈ ದಿನ ಹಲವಾರು ನಷ್ಟ, ತ್ಯಾಗ ಮತ್ತು ಅನಾಹುತಕ್ಕೆ ಕಾರಣವಾಯ್ತು. ಜೈ ಹಿಂದ್ ಎಂದು ನಟ ಅನುಪಮ್ ಖೇರ್ ಅವರು ಟ್ವೀಟ್ ನಮನ ಸಲ್ಲಿಸಿದ್ದಾರೆ.

ಟಾಲಿವುಡ್ ನಟ ಪ್ರಭಾಸ್

"ನಮ್ಮ ದೇಶದ ರಿಯಲ್ ಹೀರೋಗಳಿಗೆ ಸೆಲ್ಯೂಟ್" ಎಂದು ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಟ್ವೀಟ್ ನಮನ ಸಲ್ಲಿಸಿದ್ದಾರೆ.

ಬಾಲಿವುಡ್ ನಟಿ ನೇಹಾ ಧೂಪಿಯ

'ಕಾರ್ಗಿಲ್ ವಿಜಯ್ ದಿನ' ನೆನಪಿಸಿದ ನನ್ನ ಕಾರ್ಗಿಲ್ ದಿನಗಳು. ನಮ್ಮ ದೇಶದ ಕೆಚ್ಚೆದೆಯ ಸಿಂಹಗಳು ಮಿಲಿಟರಿ ಸಮವಸ್ತ್ರದಲ್ಲಿ. ನಿಮ್ಮೆಲ್ಲರಿಗೂ ನನ್ನ ಸೆಲ್ಯೂಟ್" ಎಂದು ನಟಿ ನೇಹಾ ಧೂಪಿಯ ಟ್ವೀಟ್ ನಮನ ಸಲ್ಲಿಸಿ, ಕಾರ್ಗಿಲ್ ನಲ್ಲಿ ಸೈನಿಕರ ಜೊತೆ ತೆಗೆಸಿಕೊಂಡ ಫೋಟೋ ಶೇರ್ ಮಾಡಿದ್ದಾರೆ.

ಅಭಿಷೇಕ್ ಬಚ್ಚನ್

'ಕಾರ್ಗಿಲ್ ವಿಜಯ್ ದಿವಸ್. ತುಂಬಾ ಹೆಮ್ಮೆ ಇದೆ. ನಮ್ಮ ದೇಶದ ಸೈನಿಕರ ಮೇಲೆ ಪ್ರೀತಿ ಮತ್ತು ಗೌರವ ಸದಾ ಇದೆ. ಮರೆಯಲು ಸಾಧ್ಯವಿಲ್ಲ, ಜೈ ಹಿಂದ್" ಎಂದು ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಟ್ವೀಟ್ ನಮನ ಸಲ್ಲಿಸಿದ್ದಾರೆ.

ಬಿಗ್ ಬಿ ಅಮಿತಾಭ್ ಬಚ್ಚನ್

ನಮ್ಮ ದೇಶದ ನಾಯಕರು ಮತ್ತು ಉದ್ಧಾರಕರಿಗೆ ನನ್ನ ಸೆಲ್ಯೂಟ್" ಎಂದು ಬಿಗ್ ಬಿ ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.

English summary
Kargil Vijay Diwas: Celebrities Messages and Memory in twitter on fallen soldiers. Here is the twitter reaction of Film Industry Celebrities check it out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada