For Quick Alerts
  ALLOW NOTIFICATIONS  
  For Daily Alerts

  ಹೊಸ ವಿವಾದದಲ್ಲಿ ಕರ್ನಾಟಕ ಅಯೋಧ್ಯೆಪುರಂ ಚಿತ್ರ

  By Rajendra
  |

  2014ನೇ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಚಿತ್ರ 'ಕರ್ನಾಟಕ ಅಯೋಧ್ಯೆಪುರಂ'ಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಈ ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾಗಿದೆ. ಈ ಮೂಲಕ ಕನ್ನಡ ಚಿತ್ರರಂಗ ಹೊಸ ವರ್ಷದಲ್ಲಿ ವಿವಾದ ಮೂಲಕವೇ ಖಾತೆ ತೆರೆದಂತಾಗಿದೆ.

  ಹೊಸಬರ ಚಿತ್ರವಾದ ಕಾರಣ ಚಿತ್ರತಂಡ ಮಲ್ಟಿಫ್ಲೆಕ್ಸ್ ಪ್ರೇಕ್ಷಕರನ್ನು ನೆಚ್ಚಿಕೊಂಡಿದೆ. ಈಗ ಚಿತ್ರವನ್ನು ಮಲ್ಟಿಫ್ಲೆಕ್ಸ್ ಗಳಲ್ಲಿ ಪ್ರದರ್ಶಿಸಬಾರದು ಎಂದು ಪೊಲೀಸರು ಮೌಖಿಕ ಆದೇಶ ನೀಡಿದ್ದಾರೆ ಎಂದು ಚಿತ್ರದ ನಿರ್ದೇಶಕ ಲವ ತಿಳಿಸಿದ್ದಾರೆ.

  ರಾಜ್ಯದಾದ್ಯಂತ ಸರಿಸುಮಾರು ಹತ್ತು ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ 'ಕರ್ನಾಟಕ ಅಯೋಧ್ಯೆಪುರಂ' ಪ್ರದರ್ಶನಕ್ಕೆ ವಿರೋಧ ವ್ಯಕ್ತವಾಗಿದೆ. ಇಷ್ಟಕ್ಕೂ ಮಲ್ಟಿಫ್ಲೆಕ್ಸ್ ಗಳಲ್ಲಿ ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾಗಲು ಕಾರಣ ಏನು ಎಂಬುದು ಮಾತ್ರ ನಿಗೂಢವಾಗಿದೆ.

  ಸೆನ್ಸಾರ್ ಮಂಡಳಿಯಿಂದ ಎ ಸರ್ಟಿಫಿಕೇಟ್

  ಸೆನ್ಸಾರ್ ಮಂಡಳಿಯಿಂದ ಎ ಸರ್ಟಿಫಿಕೇಟ್

  ಈಗಾಗಲೆ ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ನೀಡಿದೆ. ಚಿತ್ರ ರಿವೈಸಿಂಗ್ ಕಮಿಟಿಗೂ ಹೋಗಿ ಅರ್ಹತಾ ಪತ್ರ ಪಡೆದುಕೊಂಡು ಬಂದಿದೆ. ವಿಷಯ ಹೀಗಿದ್ದರೂ ಚಿತ್ರ ಪ್ರದರ್ಶನಕ್ಕೆ ಪೊಲೀಸರು ಹಾಗೂ ಚಲನಚಿತ್ರ ವಾಣಿಜ್ಯ ಮಂಡಲಿ ಯಾಕೆ ಮೂಗು ತೂರಿಸುತ್ತಿದೆಯೋ ಗೊತ್ತಾಗುತ್ತಿಲ್ಲ.

  ಚಿತ್ರದ ನಿರ್ದೇಶಕ ಲವ ತೀವ್ರ ಬೇಸರ

  ಚಿತ್ರದ ನಿರ್ದೇಶಕ ಲವ ತೀವ್ರ ಬೇಸರ

  ತಮ್ಮ ಚಿತ್ರಕ್ಕೆ ಈಗಾಗಲೆ ಸೆನ್ಸಾರ್ ಮಂಡಳಿ ಅಂಗೀಕಾರ ನೀಡಿದೆ. ಆದರೂ ಪೊಲೀಸರು ಹಾಗೂ ಫಿಲಂ ಚೇಂಬರ್ ಗೆ ಚಿತ್ರವನ್ನು ಯಾಕೆ ತೋರಿಸಬೇಕು ಎಂದು ತೀವ್ರ ಬೇಸರದಿಂದ ಕೇಳಿದ್ದಾರೆ ಚಿತ್ರದ ನಿರ್ದೇಶಕ ಲವ.

  ಹತ್ತು ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ವಿರೋಧ

  ಹತ್ತು ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ವಿರೋಧ

  ಬೆಂಗಳೂರು ಯಶವಂತಪುರದ ಓರಿಯನ್ ಮಾಲ್, ಬಿಜಾಪುರದ ಡ್ರೀಮ್ ಲ್ಯಾಂಡ್ ಸೇರಿದಂತೆ ಹತ್ತು ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕರ್ನಾಟಕ ಅಯೋಧ್ಯೆಪುರಂ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ ಎನ್ನುತ್ತದೆ ಚಿತ್ರತಂಡ.

  ಒಂದು ಲೋಕಲ್ ಹುಡುಗನ ಹೈ ಕ್ಲಾಸ್ ಲವ್ ಸ್ಟೋರಿ

  ಒಂದು ಲೋಕಲ್ ಹುಡುಗನ ಹೈ ಕ್ಲಾಸ್ ಲವ್ ಸ್ಟೋರಿ

  ಒಂದು ಲೋಕಲ್ ಹುಡುಗನ ಹೈ ಕ್ಲಾಸ್ ಲವ್ ಸ್ಟೋರಿ ಆಗಿದೆ. ಹಿಂದೂ ಹುಡುಗನಾಗಿ ರಾಕೇಶ್, ಮುಸ್ಲಿಂ ಹುಡುಗಿಯಾಗಿ ನಯನಾ ಅಭಿನಯಿಸಿದ್ದಾರೆ. ರಾಕೇಶ್ ಅವರಿಗೆ ಇದು ಮೊದಲ ಪೂರ್ಣ ಪ್ರಮಾಣದ ನಾಯಕನ ಪಾತ್ರ.

  ಅಲ್ಟಿಮೇಟ್ ಶಿವು ಅವರ ಸಹಾಸ ಈ ಚಿತ್ರಕ್ಕಿದೆ

  ಅಲ್ಟಿಮೇಟ್ ಶಿವು ಅವರ ಸಹಾಸ ಈ ಚಿತ್ರಕ್ಕಿದೆ

  ಸಾಗರ್ ನಾಗಭೂಷಣ್ ಅವರ ಸಂಗೀತ, ವಿಲಿಯಂ ಅವರ ಛಾಯಾಗ್ರಹಣ, ಅಲ್ಟಿಮೇಟ್ ಶಿವು ಅವರ ಸಹಾಸ ಈ ಚಿತ್ರಕ್ಕಿದೆ. ಕೆ ಆರ್ ಮಧುಸೂದನ್, ಕೆ ಟಿ ವೆಂಕಟರಾಮು ಅವರು ಕೆ ಕೆ ವೆಂಚರ್ಸ್ ಅಡಿಯಲ್ಲಿ ನಿರ್ಮಿಸಿರುವ ಚಿತ್ರ.

  ಇದೇ ವಾರ ಮಾಲಾಶ್ರೀ ಅಭಿನಯದ ಘರ್ಷಣೆ

  ಇದೇ ವಾರ ಮಾಲಾಶ್ರೀ ಅಭಿನಯದ ಘರ್ಷಣೆ

  ಅಚ್ಯುತ್ ಕುಮಾರ್, ಸ್ವಸ್ತಿಕ್ ಶಂಕರ್, ಬುಲ್ಲೆಟ್ ಪ್ರಕಾಶ್, ಮೋಹನ್ ಜುನೇಜ, ಅಕ್ಷಯ್, ಹರೀಶ್ ಹಾಗೂ ಇನ್ನಿತರರು ಪಾತ್ರವರ್ಗದಲ್ಲಿ ಇದ್ದಾರೆ. ಇದೇ ವಾರ ಮಾಲಾಶ್ರೀ ಅಭಿನಯದ ಘರ್ಷಣೆ ಚಿತ್ರವೂ ತೆರೆಕಾಣುತ್ತಿದೆ. ಒಟ್ಟಾರೆಯಾಗಿ ಎರಡು ಚಿತ್ರಗಳ ನಡುವೆ ಬಾಕ್ಸ್ ಆಫೀಸಲ್ಲಿ ಬಿಗ್ ಫೈಟ್ ನಿರೀಕ್ಷಿಸಲಾಗಿದೆ.

  English summary
  Kannada movie Karnataka Ayodhyapuram lands in fresh controversy. Karnataka police has asked multiplex theaters across the state not to screen Ayodhyapuram movie as the content will disturb the law and order.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X