»   » ವಿವಾದ ಮುಕ್ತ 'ಕರ್ನಾಟಕ ಅಯೋಧ್ಯೆಪುರಂ' ತೆರೆಗೆ

ವಿವಾದ ಮುಕ್ತ 'ಕರ್ನಾಟಕ ಅಯೋಧ್ಯೆಪುರಂ' ತೆರೆಗೆ

Posted By:
Subscribe to Filmibeat Kannada

ಈ ವರ್ಷದ ಬಹು ನಿರೀಕ್ಷಿತ ಚಿತ್ರ 'ಕರ್ನಾಟಕ ಅಯೋಧ್ಯೆಪುರಂ' ಈ ವಾರ ತೆರೆಕಾಣುತ್ತಿದೆ. 2014 ಹೊಸ ವರ್ಷದಲ್ಲಿ ಹೊಸ ನಿರ್ದೇಶಕ ಲವ ಹಾಗೂ ನಿರ್ಮಾಪಕರ ಆಗಮನ ಆಗುತ್ತಿದೆ. ನಿರ್ದೇಶಕ ಲವ ಹಾಗೂ ನಿರ್ಮಾಪಕ ಮಧುಸೂದನ್ ಅವರ ಚೊಚ್ಚಲ ಪ್ರಯತ್ನ ಇದು.

'ಕರ್ನಾಟಕ ಅಯೋಧ್ಯಪುರ' ಚಿತ್ರ ಮರುಪರಿಶೀಲನೆ (ರಿವೈಸಿಂಗ್) ಕಮಿಟಿ ಇಂದ ಅರ್ಹತಾ ಪತ್ರ ಪಡೆದಿದ್ದು ಒಂದು ಲೋಕಲ್ ಹುಡುಗನ ಹೈ ಕ್ಲಾಸ್ ಲವ್ ಸ್ಟೋರಿ ಆಗಿದೆ. ಹಿಂದೂ ಹುಡುಗನಾಗಿ ರಾಕೇಶ್, ಮುಸ್ಲಿಂ ಹುಡುಗಿಯಾಗಿ ನಯನಾ ಅಭಿನಯಿಸಿದ್ದಾರೆ. ರಾಕೇಶ್ ಅವರಿಗೆ ಇದು ಮೊದಲ ಪೂರ್ಣ ಪ್ರಮಾಣದ ನಾಯಕನ ಪಾತ್ರ. [ರಿವೈಸಿಂಗ್ ಕಮಿಟಿ ಬಾಗಿಲು ತಟ್ಟಿದ 'ಅಯೋಧ್ಯಪುರ']


ಸಾಗರ್ ನಾಗಭೂಷಣ್ ಅವರ ಸಂಗೀತ, ವಿಲಿಯಂ ಅವರ ಛಾಯಾಗ್ರಹಣ, ಅಲ್ಟಿಮೇಟ್ ಶಿವು ಅವರ ಸಹಾಸ ಈ ಚಿತ್ರಕ್ಕಿದೆ. ಕೆ ಆರ್ ಮಧುಸೂದನ್, ಕೆ ಟಿ ವೆಂಕಟರಾಮು ಅವರು ಕೆ ಕೆ ವೆಂಚರ್ಸ್ ಅಡಿಯಲ್ಲಿ ನಿರ್ಮಿಸಿರುವ ಚಿತ್ರ.

ಅಚ್ಯುತ್ ಕುಮಾರ್, ಸ್ವಸ್ತಿಕ್ ಶಂಕರ್, ಬುಲ್ಲೆಟ್ ಪ್ರಕಾಶ್, ಮೋಹನ್ ಜುನೇಜ, ಅಕ್ಷಯ್, ಹರೀಶ್ ಹಾಗೂ ಇನ್ನಿತರರು ಪಾತ್ರವರ್ಗದಲ್ಲಿ ಇದ್ದಾರೆ. ಇದೇ ವಾರ ಮಾಲಾಶ್ರೀ ಅಭಿನಯದ ಘರ್ಷಣೆ ಚಿತ್ರವೂ ತೆರೆಕಾಣುತ್ತಿದೆ. ಒಟ್ಟಾರೆಯಾಗಿ ಎರಡು ಚಿತ್ರಗಳ ನಡುವೆ ಬಾಕ್ಸ್ ಆಫೀಸಲ್ಲಿ ಬಿಗ್ ಫೈಟ್ ನಿರೀಕ್ಷಿಸಲಾಗಿದೆ. (ಒನ್ಇಂಡಿಯಾ ಕನ್ನಡ)

English summary
The much expected movie of 2014 Karnataka Ayodhyapuram all set to release on 3rd January, 2014. The movie gets clean chit from the Revising Committee. Rakesh and Nayana are playing a Hindu boy and Muslim girl in the film.
Please Wait while comments are loading...