»   » ಅಯೋಧ್ಯೆಪುರಂ ಶೀರ್ಷಿಕೆಗೆ ಮುಸ್ಲಿಂರ ವಿರೋಧ

ಅಯೋಧ್ಯೆಪುರಂ ಶೀರ್ಷಿಕೆಗೆ ಮುಸ್ಲಿಂರ ವಿರೋಧ

Posted By:
Subscribe to Filmibeat Kannada

ಸಂಪೂರ್ಣ ಹೊಸಬರೇ ತಯಾರಿಸುತ್ತಿರುವ ಚಿತ್ರ 'ಅಯೋಧ್ಯೆಪುರಂ'. ಈಗ ಚಿತ್ರಕ್ಕೆ ಶೀರ್ಷಿಕೆ ವಿವಾದ ಸುತ್ತಿಕೊಂಡಿದೆ. ಚಿತ್ರದ ಶೀರ್ಷೆಕೆಯನ್ನು ಬದಲಿಸುವಂತೆ ಮುಸ್ಲಿಂ ಸಂಘಟನೆಯೊಂದು ಕರ್ನಾಟಕ ಅಲ್ಪಸಂಖ್ಯಾತರ ಆಯೋಗಕ್ಕೆ ದೂರು ನೀಡಿದೆ.

ಚಿತ್ರದ ಶೀರ್ಷಿಕೆ ಹಿಂದು-ಮುಸ್ಲಿಂರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ. ಕೋಮು ಭಾವನೆಗಳನ್ನು ಕೆರಳಿಸುವಂತಿದೆ. ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಿ ಎಂದು 'ಬಜೀಮ್ ಇ ಕಾಫೀಮ್ ಮುಸ್ಲಿಂ ಯೂತ್ ಫಾರ್ಮ್' ಸಂಘಟನೆ ದೂರು ನೀಡಿತ್ತು.

Karnataka Ayodhyepuram

ಈ ಸಂಬಂಧ ಚಿತ್ರದ ನಿರ್ಮಾಪಕರು ಹಾಗೂ ಫಿಲಂ ಚೇಂಬರ್ ವಿವರಣೆ ಕೇಳಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ರಾಜ್ಯ ಅಲ್ಪ ಸಂಖ್ಯಾತರ ಆಯೋಗ ಪತ್ರ ಬರೆದಿದೆ. ಆದರೆ ಚಿತ್ರದ ಶೀರ್ಷಿಕೆಯನ್ನು ಯಾವುದೇ ಕಾರಣಕ್ಕೂ ಬದಲಾಯಿಸಲ್ಲ ಎಂದಿದ್ದಾರೆ ನಿರ್ದೇಶಕ ವಿ.ಲವ.

ವರ್ಷದ ಹಿಂದೆಯೇ ಶೀರ್ಷಿಕೆಯನ್ನು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿಕೊಂಡಿದ್ದೇವೆ. ಈಗ ಬದಲಾಯಿಸಿ ಎಂದರೆ ಹೇಗೆ? ನಮಗೆ ನಷ್ಟ ಉಂಟಾಗುತ್ತದೆ. ನ್ಯಾಯಕ್ಕಾಗಿ ನಾವು ಕೋರ್ಟ್ ಮೆಟ್ಟಿಲೇರುತ್ತೇವೆ ಎಂದಿದ್ದಾರೆ ಚಿತ್ರದ ನಿರ್ದೇಶಕರು.

ನಮ್ಮ ಚಿತ್ರದಲ್ಲಿ ಕೋಮು ಭಾವನೆಗಳನ್ನು ಕೆರಳಿಸುವಂತಹ ಯಾವುದೇ ದೃಶ್ಯ, ಸಂಭಾಷಣೆಗಳಿಲ್ಲ. 'ಅಯೋಧ್ಯೆಪುರಂ' ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆ ಇದು. ಚಿತ್ರಕ್ಕೆ ಸೆನ್ಸಾರ್ ಆದ ಮೇಲೆ ಮುಸ್ಲಿಂ ಸಂಘಟನೆಗೂ ತಮ್ಮ ಚಿತ್ರವನ್ನು ತೋರಿಸುತ್ತೇವೆ ಎಂದಿದ್ದಾರೆ.

ಅಯೋಧ್ಯೆ ಹಾಗೂ ಅಯೋಧ್ಯೆಪುರಂ ಶೀರ್ಷಿಕೆಗೂ ಅವಕಾಶ ಮಾಡಿಕೊಟ್ಟಿರಲಿಲ್ಲ. ಕಡೆಗೆ 'ಕರ್ನಾಟಕ ಅಯೋಧ್ಯೆಪುರಂ' ಎಂದು ಶೀರ್ಷಿಕೆ ಇಟ್ಟುಕೊಂಡೆವು. ಈಗ ಏಕಾಏಕಿ ಶೀರ್ಷಿಕೆ ಬದಲಾಯಿಸಿ ಎಂದರೆ ನಮಗೆ ಭಾರಿ ಹೊಡೆತ ಬೀಳುತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು. ರಾಕೇಶ್ ಅಡಿಗ ಮತ್ತು ನಯನಾ ಚಿತ್ರದ ಪ್ರಮುಖ ಪಾತ್ರಧಾರಿಗಳು. (ಏಜೆನ್ಸೀಸ್)

English summary
Muslim organization raised an objection about the title Karnataka Ayodhyepuram starring Rakesh and Nayana Krishna. The organization strongly demanding change over the movie title. A movie directed by Lava. Casting Rakesh Adiga and Nayana.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada