»   » ಸೆ.9ಕ್ಕೆ ಕರ್ನಾಟಕ ಬಂದ್: 'ಮುಂಗಾರು ಮಳೆ-2' ಚಿತ್ರ ಬಿಡುಗಡೆ ಯಾವಾಗ?

ಸೆ.9ಕ್ಕೆ ಕರ್ನಾಟಕ ಬಂದ್: 'ಮುಂಗಾರು ಮಳೆ-2' ಚಿತ್ರ ಬಿಡುಗಡೆ ಯಾವಾಗ?

Posted By:
Subscribe to Filmibeat Kannada

'ಮುಂಗಾರು ಮಳೆ'ಯಲ್ಲಿ ನೆನೆದ ಸಿನಿ ಪ್ರೇಕ್ಷಕರು 'ಮುಂಗಾರು ಮಳೆ-2' ಚಿತ್ರ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಸೆಪ್ಟೆಂಬರ್ 9 ಯಾವಾಗ ಆಗುತ್ತೋ ಅಂತ ದಿನಗಳನ್ನ ಎಣಿಸುತ್ತಿರುವ ಗಣೇಶ್ ಅಭಿಮಾನಿಗಳ ಸಂಖ್ಯೆ ಅದೆಷ್ಟೋ.!

ಸ್ಯಾಂಡಲ್ ವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿರುವ 'ಮುಂಗಾರು ಮಳೆ-2' ಚಿತ್ರ ಇದೇ ಶುಕ್ರವಾರ ಗ್ರ್ಯಾಂಡ್ ರಿಲೀಸ್ ಆಗ್ಬೇಕಿತ್ತು. ಆದ್ರೆ, ಆಗುತ್ತಿಲ್ಲ.! ಕಾರಣ 'ಕರ್ನಾಟಕ ಬಂದ್'.['ನೀರ್ ದೋಸೆ'ಗೆ ಬಂಪರ್ ಹೊಡೆದ್ಹಾಗೆ 'ಮುಂಗಾರು ಮಳೆ-2'ಗಾಗೋದು ಡೌಟು!]


ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಹಿನ್ನಲೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಸೆಪ್ಟೆಂಬರ್ 9 ರಂದು 'ಕರ್ನಾಟಕ ಬಂದ್'ಗೆ ಕರೆ ನೀಡಿದೆ.


ಕನ್ನಡ ಚಿತ್ರೋದ್ಯಮ ಬೆಂಬಲ ನೀಡಿದೆ

ಕನ್ನಡ ಪರ ಸಂಘಟನೆಗಳು, ಹೋರಾಟಗಾರರು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಪೂರ್ಣ ಬೆಂಬಲ ನೀಡಿದೆ.


'ಮುಂಗಾರು ಮಳೆ-2' ಚಿತ್ರ ಬಿಡುಗಡೆ ಆಗುತ್ತಿಲ್ಲ!

ಕನ್ನಡ ಚಿತ್ರೋದ್ಯಮದ ಎಲ್ಲಾ ಕಾರ್ಯ ಚಟುವಟಿಕೆಗಳು ಸೆಪ್ಟೆಂಬರ್ 9 ರಂದು ಸ್ಥಗಿತವಾಗುತ್ತಿರುವ ಕಾರಣ 'ಮುಂಗಾರು ಮಳೆ-2' ಚಿತ್ರ ಶುಕ್ರವಾರ ಬಿಡುಗಡೆ ಆಗುತ್ತಿಲ್ಲ.


ಹಾಗಾದ್ರೆ, ರಿಲೀಸ್ ಯಾವಾಗ?

ಶುಕ್ರವಾರ (ಸೆಪ್ಟೆಂಬರ್ 9) ಬದಲು ಶನಿವಾರ (ಸೆಪ್ಟೆಂಬರ್ 10) 'ಮುಂಗಾರು ಮಳೆ-2' ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲಿದೆ.


ಹೆಮ್ಮೆಯ ಮಾತಾಡಿದ ಗಣೇಶ್

''ನಾಡು, ನುಡಿ, ಜಲ ವಿಷಯ ಬಂದಾಗ ನಾನು ಸದಾ ಹೋರಾಟಕ್ಕೆ ಸಿದ್ಧ. ರೈತರ ಪರವಾಗಿ ಶುಕ್ರವಾರ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಇದಕ್ಕೆ ನನ್ನ ಬೆಂಬಲ ಕೂಡ ಇದೆ. ಹೀಗಾಗಿ 'ಮುಂಗಾರು ಮಳೆ-2' ಚಿತ್ರವನ್ನ ಶುಕ್ರವಾರ ಬಿಡುಗಡೆ ಮಾಡುತ್ತಿಲ್ಲ'' ಅಂತ ನಟ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದಾರೆ.


ನಿರ್ದೇಶಕ ಶಶಾಂಕ್ ಏನಂತಾರೆ?

''ನನಗೆ ನನ್ನ ಸಿನಿಮಾಗಿಂತ ಇಡೀ ಕರ್ನಾಟಕ ರಾಜ್ಯ ಮತ್ತು ರೈತರು ಮುಖ್ಯ. ಕರ್ನಾಟಕ ಬಂದ್ ಗೆ ನಮ್ಮ ಚಿತ್ರದ ಕಡೆಯಿಂದ ಖಂಡಿತ ಬೆಂಬಲ ನೀಡ್ತೀವಿ. ಶುಕ್ರವಾರ ಬದಲು ಶನಿವಾರ 'ಮುಂಗಾರು ಮಳೆ-2' ಚಿತ್ರವನ್ನ ಬಿಡುಗಡೆ ಮಾಡ್ತೀವಿ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಶಶಾಂಕ್ ತಿಳಿಸಿದರು.


ಮುಖ್ಯ ಚಿತ್ರಮಂದಿರ ಯಾವುದು?

ಬೆಂಗಳೂರಿನ ಕಪಾಲಿ ಸೇರಿದಂತೆ ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಸೆಪ್ಟೆಂಬರ್ 10 ರಂದು 'ಮುಂಗಾರು ಮಳೆ-2' ಚಿತ್ರ ಬಿಡುಗಡೆ ಆಗಲಿದೆ.[ನೀರಿಗಾಗಿ ಎಂಥ ಹೋರಾಟಕ್ಕೂ ಸಿದ್ಧ ಎಂದ ಕನ್ನಡ ತಾರೆಯರು]


English summary
Kannada Film Industry is supporting Karnataka Bandh on September 9th to protest against the Supreme Court order to release 15,000 cusecs Cauvery water to Tamil Nadu for 10 days. Hence, Ganesh starrer 'Mungaru Male-2' movie will release on Sept 10th, Saturday.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X