For Quick Alerts
  ALLOW NOTIFICATIONS  
  For Daily Alerts

  CCL T10: ಪಂಜಾಬ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್

  |

  ಸಿಸಿಎಲ್ ಟಿ 10 ಲೀಗ್ ನ ಮೂರನೇ ಪಂದ್ಯದಲ್ಲಿ ಪಂಜಾಬ್ ದಿ ಶೇರ್ ತಂಡದ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಜಯ ದಾಖಲಿಸಿದೆ.

  ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ ಹತ್ತು ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 84 ರನ್ ಕಲೆ ಹಾಕಿತ್ತು. 85 ರನ್ ಗಳ ಗುರಿ ಬೆನ್ನತ್ತಿದ ಕರ್ನಾಟಕ ತಂಡ ಬುಲ್ಡೋಜರ್ಸ್ ತಂಡ ಪ್ರದೀಪ್ ಅವರ ಆಕರ್ಷಕ ಆಟದ ನೆರವಿನಿಂದ 5.4 ಒವರ್ ಗಳಲ್ಲಿಯೇ ಗುರಿ ಮುಟ್ಟಿ ಜಯ ಕಂಡಿತು.

  'ಕರ್ನಾಟಕ ಬುಲ್ಡೋಜರ್ಸ್' ತಂಡದ ಹೊಸ ಕ್ಯಾಪ್ಟನ್ ಗೆ ಶುಭ ಕೋರಿದ ಸುದೀಪ್

  ಕರ್ನಾಟಕದ ಪರ 18 ಎಸೆತಗಳಲ್ಲಿ 34 ಬಾರಿಸಿದ ಪ್ರದೀಪ್ ಪಂದ್ಯ ಪರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. ಪ್ರದೀಪ್ ಗೆ ಸಾಥ್ ನೀಡಿದ ಕೃಷ್ಣ 14 ಬಾರಿಸಿ ಔಟ್ ಆದ್ರೆ, ನಂತರ ಬಂದ ರಾಜೀವ್ 1 ಗಳಿಸಿ ನಾಟ್ ಔಟ್ ಆಗಿ ಉಳಿದರು.

  ಅದಕ್ಕೂ ಮುಂಚೆ ಬೌಲಿಂಗ್ ಮಾಡಿದ್ದ ಕರ್ನಾಟಕ ತಂಡದ ಪರ ಕಾರ್ತಿಕ್ ಜಯರಾಂ, ಪ್ರಸನ್ನ, ಚಂದನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

  CCL ಟೂರ್ನಿಗೆ ಮುಹೂರ್ತ ಫಿಕ್ಸ್: ಕರ್ನಾಟಕ ತಂಡದಲ್ಲಿ ಮಹತ್ವದ ಬದಲಾವಣೆ?

  ಸೋನು ಸೂದ್ ನಾಯಕತ್ವದ ಪಂಜಾಬ್ ತಂಡ 37 ಹೆಚ್ಚುವರಿ ರನ್ ಗಳನ್ನ ನೀಡಿ ಸಲುಭವಾಗಿ ಕರ್ನಾಟಕ ತಂಡಕ್ಕೆ ಶರಣಾಯಿತು. ನಾಯಕತ್ವ ತೊರೆದು ಸುದೀಪ್ ಆಟಗಾರನಾಗಿ ಮೊದಲ ಪಂದ್ಯವಾಡಿದ್ದು ವಿಶೇಷ. ಈ ಪಂದ್ಯದಲ್ಲಿ ಗಣೇಶ್ ಮತ್ತು ಸುದೀಪ್ ತಲಾ ಒಂದೊಂದು ಓವರ್ ಬೌಲಿಂಗ್ ಮಾಡಿದರು.

  ಮುಂದಿನ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡದ ಎದುರು ಇಂದು (4pm) ತನ್ನ ಎರಡನೇ ಪಂದ್ಯವನ್ನ ಕರ್ನಾಟಕ ತಂಡ ಆಡಲಿದೆ. ಅದಾದ ಬಳಿಕ 8pm ಗಂಟೆಗೆ ಮೂರನೇ ಪಂದ್ಯವನ್ನ ಬೆಂಗಾಲ್ ಟೈಗರ್ಸ್ ವಿರುದ್ಧ ಆಡಲಿದೆ.

  English summary
  Karnataka Bulldozers on thursday won their first match of CCL 2019 against Punjab De Sher by nine wickets.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X