For Quick Alerts
  ALLOW NOTIFICATIONS  
  For Daily Alerts

  ಆರ್.ಆರ್ ನಗರ ಬಿಜೆಪಿ ಅಭ್ಯರ್ಥಿಯಾಗಿ 'ಕುರುಕ್ಷೇತ್ರ' ನಿರ್ಮಾಪಕ ಮುನಿರತ್ನ ಹೆಸರು ಪ್ರಕಟ

  |

  ಕನ್ನಡದ ಖ್ಯಾತ ನಿರ್ಮಾಪಕ ಹಾಗೂ ರಾಜರಾಜೇಶ್ವರಿ ನಗರದ ಮಾಜಿ ಶಾಸಕ ಮುನಿರತ್ನ ಅವರಿಗೆ ಕೊನೆಗೂ ಬಿಜೆಪಿಯಿಂದ ಟಿಕೆಟ್ ಖಚಿತವಾಗಿದೆ. ಇಂದು ಸಂಜೆ ಬಿಜೆಪಿ ಹೈಕಮಾಂಡ್ ಅಧಿಕೃತವಾಗಿ ಮುನಿರತ್ನ ಹೆಸರನ್ನು ಪ್ರಕಟಿಸಿದೆ.

  ನವೆಂಬರ್ 3 ರಂದು ನಡೆಯಲಿರುವ ಆರ್ ಆರ್ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ 'ಕುರುಕ್ಷೇತ್ರ' ನಿರ್ಮಾಪಕ ಮುನಿರತ್ನ ಅವರು ಸ್ಪರ್ಧೆ ಮಾಡಲಿದ್ದಾರೆ.

  ಮುನಿರತ್ನ ಜೊತೆಗಿನ ಗೆಳೆತನ ಗುಟ್ಟು ಬಿಚ್ಚಿಟ್ಟ ಎಚ್‌ಡಿಕೆ!

  ಆರ್ ಆರ್ ನಗರದ ಶಾಸಕರಾಗಿದ್ದ ಮುನಿರತ್ನ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಬಿಜೆಪಿ ಸೇರ್ಪಡೆಯಾಗಿದ್ದರು. ಮುನಿರತ್ನ ರಾಜೀನಾಮೆಯಿಂದ ತೆರವಾಗಿದ್ದ ಆರ್ ಆರ್ ನಗರ ಕ್ಷೇತ್ರಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ.

  ಬಿಜೆಪಿ ಪಕ್ಷದಲ್ಲಿ ಆರ್ ಆರ್ ನಗರದ ಅಭ್ಯರ್ಥಿ ವಿಚಾರದಲ್ಲಿ ಭಾರಿ ಗೊಂದಲ ಉಂಟಾಗಿತ್ತು. ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ತುಳಸಿ ಮುನಿರಾಜು ಅವರಿಗೆ ಮತ್ತೆ ಟಿಕೆಟ್ ನೀಡಬಹುದು ಎಂಬ ಸುದ್ದಿಯೂ ಕೇಳಿ ಬಂದಿತ್ತು. ಹಾಗಾಗಿ, ಮುನಿರತ್ನ ಅವರಿಗೆ ಟಿಕೆಟ್ ಕೈ ತಪ್ಪಬಹುದು ಎಂಬ ಆತಂಕ ಕಾಡಿತ್ತು. ಅಂತಿಮವಾಗಿ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚಿಸುವಲ್ಲಿ ನೆರವಾಗಿದ್ದ ಮುನಿರತ್ನ ಅವರಿಗೆ ಹೈಕಮಾಂಡ್ ಮಣೆ ಹಾಕಿದೆ.

  Recommended Video

  ಇದು Darshan ಪತ್ನಿ ಮಾಡಿದ ಸಾಧನೆ | Filmibeat Kannada

  ರಾಜಕೀಯದ ಜೊತೆಗೆ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಮುನಿರತ್ನ ಅವರು ಕೊನೆಯದಾಗಿ ದರ್ಶನ್ ನಟಿಸಿದ್ದ 'ಕುರುಕ್ಷೇತ್ರ' ಸಿನಿಮಾ ನಿರ್ಮಿಸಿದ್ದರು. ಇದಕ್ಕೂ ಮುಂಚೆ ರಕ್ತ ಕಣ್ಣೀರು, ಅನಾಥರು, ಕಠಾರವೀರ ಸುರಸುಂದರಾಂಗಿ, ಆಂಟಿ ಪ್ರೀತ್ಸೆ ಎಂಬ ಚಿತ್ರಗಳನ್ನು ನಿರ್ಮಿಸಿದ್ದಾರೆ.

  English summary
  BJP announces candidates for Karnataka Bypolls. Ex Mla and Film Producer Munirathna named Rajarajeshwari Nagar Bjp candidate.
  Wednesday, October 14, 2020, 10:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X