For Quick Alerts
  ALLOW NOTIFICATIONS  
  For Daily Alerts

  2023 ಹೊಸವರ್ಷಕ್ಕೆ ಚಂದನವನದ ತಾರೆಯರು ವಿಷ್ ಮಾಡಿದ್ದು ಹೀಗೆ

  |

  2022ರಲ್ಲಿ ಅದ್ಭುತ ಸಾಧನೆ ಮಾಡಿದ ಕನ್ನಡ ಚಿತ್ರರಂಗ 2023ಕ್ಕೆ ಕಾಲಿಟ್ಟಿದೆ. ಈ ವರ್ಷ ಗಣ ರಾಜ್ಯೋತ್ಸವದಂದು ಬಿಡುಗಡೆಯಾಗಲಿರುವ ಕ್ರಾಂತಿ ಚಿತ್ರ ಸೇರಿದಂತೆ ಹಲವಾರು ಬಹು ನಿರೀಕ್ಷಿತ ಚಿತ್ರಗಳು ಹಾಗೂ ಯುವ ತಂಡಗಳ ಚಿತ್ರಗಳು ಈ ವರ್ಷ ಬಿಡುಗಡೆಯಾಗಲಿವೆ.

  ಈ‌ ಸಲುವಾಗಿ ಹೊಸ ವರ್ಷದ ಪ್ರಯುಕ್ತ ಹಲವಾರು ಚಿತ್ರಗಳ ಪೋಸ್ಟರ್ ಬಿಡುಗಡೆಗೊಂಡಿವೆ ಹಾಗೂ ಈ ವಿಶೇಷ ದಿನದಂದು ಹಲವು ಚಿತ್ರಗಳ ಮಾಹಿತಿಗಳು ಹೊರಬಿದ್ದಿವೆ‌. ಸೆಲೆಬ್ರಿಟಿಗಳು ಈ ಕೆಳಕಂಡಂತೆ ಟ್ವೀಟ್ ಮಾಡಿದ್ದಾರೆ.

  ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಹೊಸ ವರ್ಷದ ಪ್ರತಿಕ್ಷಣವೂ ಸಂತಸದಿಂದ ಕೂಡಿರಲಿ. ಇನ್ನು ಹೆಚ್ಚು ಆತ್ಮವಿಶ್ವಾಸದೊಂದಿಗೆ ನಿಮ್ಮ ಕನಸುಗಳೆಲ್ಲಾ ಈಡೇರಲಿ. ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಕ್ರಾಂತಿ ಚಿತ್ರದ ಟ್ರೈಲರ್ ಜನವರಿ 7ಕ್ಕೆ ಬಿಡುಗಡೆಯಾಗಲಿದೆ ಗುರುತು ಮಾಡಿ ಇಟ್ಟುಕೊಳ್ಳಿ' ಎಂದು ಪೋಸ್ಟ್ ಮಾಡಿದ್ದಾರೆ.

  ನಟ ಕಿಚ್ಚ ಸುದೀಪ್ 'ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು, ಬದುಕಿ ಹಾಗೂ ಬದುಕಲು ಬಿಡಿ, ಪ್ರೀತಿ ಕೊಟ್ಟು ಸಂಪಾದಿಸಿ. ಎಲ್ಲವನ್ನೂ ಮರೆತು ಸಂತಸದಿಂದಿರಿ. ನಿಮಗೆಲ್ಲರಿಗೂ ಧನ್ಯವಾದಗಳು' ಎಂದು ಟ್ವೀಟ್ ಮಾಡಿದ್ದಾರೆ.

  'ಹಿಂದಿರುಗಿ ನೋಡಿದರೆ ನಾನೆಷ್ಟು ದೂರ ಬಂದಿದ್ದೇನೆ ಎಂಬುದನ್ನು ಕಾಣಬಲ್ಲೆ. ಮುಂದೆ ನೋಡಿದರೆ ಇನ್ನೂ ಎಷ್ಟು ದೂರ ತೆರಳಬೇಕು ಎಂಬುದನ್ನು ಕಾಣಬಲ್ಲೆ. ಅದ್ಭುತ ವರ್ಷ ನೀಡಿದ ಎಲ್ಲರಿಗೂ ಧನ್ಯವಾದಗಳು. 2023 ಅದ್ಭುತವಾಗಿರಲಿ' ಎಂದು ಯಶ್ ಬರೆದುಕೊಂಡಿದ್ದಾರೆ.

  ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರಿರುವ ನಟಿ ರಶ್ಮಿಕಾ ಮಂದಣ್ಣ ಸಂತಸದಿಂದ, ಆರೋಗ್ಯದಿಂದ ಹಾಗೂ ಸುರಕ್ಷಿತರಾಗಿರಿ ಎಂದು ಬರೆದುಕೊಂಡಿದ್ದಾರೆ‌.

  English summary
  Karnataka celebrities wishes for New Year 2023
  Sunday, January 1, 2023, 23:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X