For Quick Alerts
  ALLOW NOTIFICATIONS  
  For Daily Alerts

  ಫಿಲಂ ಚೇಂಬರ್ ಚುನಾವಣೆ: ಸಾ.ರಾ.ಗೋವಿಂದು-ಬಾ.ಮಾ.ಹರೀಶ್ ನಡುವೆ ಸ್ಪರ್ಧೆ

  |

  ಇಂದು (ಮೇ 28) ರಂದು ಪ್ರತಿಷ್ಠಿತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯುತ್ತಿದ್ದು, ಬಾಮಾ ಹರೀಶ್ ಹಾಗೂ ಸಾ.ರಾ.ಗೋವಿಂದು ಬಣಗಳ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

  ಬೆಳಿಗ್ಗೆ 10 ಗಂಟೆಯಿಂದ ಸರ್ವ ಸದಸ್ಯರ ಸಭೆ ನಡೆಯಲಿದೆ. ಮಧ್ಯಾಹ್ನ 2 ಗಂಟೆ ಬಳಿಕ 6 ಗಂಟೆ ವರೆಗೆ ಮತದಾನ ನಡೆಯಲಿದೆ. ಬ್ಯಾಲೆಟ್ ಪತ್ರದ ಮೂಲಕ ಮತದಾನ ನಡೆಯಲಿದ್ದು, ಬ್ಯಾಲೆಟ್‌ನಲ್ಲಿ ಅಭ್ಯರ್ಥಿಗಳ ಫೋಟೊ ಸಹ ಮುದ್ರಿಸಲಾಗಿದೆ.

  1700 ಕ್ಕೂ ಹೆಚ್ಚು ಮಂದಿ ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದು, ವಾಣಿಜ್ಯ ಮಂಡಳಿ ಕಟ್ಟಡದ ಬಳಿ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಚುನಾವಣೆ ನಡೆಯಲಿದೆ. ಇಂದು ರಾತ್ರಿಯೇ ಮತ ಎಣಿಕೆ ಪ್ರಾರಂಭವಾಗಲಿದ್ದು, ನಾಳೆ (ಮೇ 29) ಮುಂಜಾನೆ ವೇಳೆಗೆ ಫಲಿತಾಂಶ ಹೊರಬೀಳಲಿದೆ.

  ಥಾಮಸ್ ಎಂಬುವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚುನಾವಣೆಗೆ ಮಾಡಿಕೊಂಡಿರುವ ಸಿದ್ಧತೆ ಬಗ್ಗೆ ಮಾಧ್ಯಮದೊಟ್ಟಿಗೆ ಮಾತನಾಡಿರುವ ಅವರು, ''ಬ್ಯಾಲೆಟ್ ಪೇಪರ್ ಮುಖಾಂತರ ಚುನಾವಣೆ ನಡೆಯಲಿದ್ದು, ಮತದಾನ ನಡೆಯಲಿರುವ ಕಲ್ಯಾಣ ಮಂಟಪದ ಎಲ್ಲ ದ್ವಾರಗಳನ್ನು ಬಂದ್ ಮಾಡಿ ಒಂದನ್ನು ಮಾತ್ರವೇ ತೆರೆದಿಡಲಾಗಿದೆ. ಕೇವಲ ಐಡಿ ಕಾರ್ಡ್ ಇದ್ದವರಿಗೆ ಮಾತ್ರವೇ ಮತಕೇಂದ್ರದ ಒಳಗೆ ಪ್ರವೇಶ ಇರುತ್ತದೆ'' ಎಂದಿದ್ದಾರೆ.

  ನಿರ್ಮಾಪಕ, ಪ್ರದರ್ಶಕ, ವಿತರಕ ವಿಭಾಗಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ, ಕಾರ್ಯದರ್ಶಿ ಹಾಗೂ ಇನ್ನು ಕೆಲವು ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಸುಮಾರು 1700 ಕ್ಕೂ ಹೆಚ್ಚು ಮಂದಿ ಮತದಾನ ಮಾಡಲಿದ್ದಾರೆ. ನಿರ್ಮಾಪಕ, ಪ್ರದರ್ಶನ, ವಿತರಕ ವಿಭಾಗಗಳಿಗೆ ಮತದಾನ ಮಾಡಲು ಪ್ರತ್ಯೇಕ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.

  ಮತಗಟ್ಟೆ ಪ್ರವೇಶಿಸಿದ ಮತದಾರರ ಐಡಿ ಕಾರ್ಡ್ ನೋಡಿ, ಅವರು ಸಂಘದ ಸದಸ್ಯರೇ, ಮತದಾನಕ್ಕೆ ಅರ್ಹರೆ ಎಂದು ಪರಿಶೀಲನೆ ನಡೆಸಿದ ಬಳಿಕವಷ್ಟೆ ಮತದಾನ ಮಾಡಲು ಅವರಿಗೆ ಅವಕಾಶ ನೀಡಲಾಗುತ್ತದೆ.

  ಫಿಲಂ ಚೇಂಬರ್ ಚುನಾವಣೆಯಲ್ಲಿ ಹಲವರು ಸ್ಪರ್ಧಿಸಿದ್ದಾರೆ. ಆದರೆ ನೇರ ಸ್ಪರ್ಧೆ ಬಾಮಾ ಹರೀಶ್ ಹಾಗೂ ಸಾ.ರಾ.ಗೋವಿಂದು ನಡುವೆ ಇದೆ ಎನ್ನಲಾಗುತ್ತಿದೆ. ಸಾ.ರಾ.ಗೋವಿಂದು ಈ ಹಿಂದೆಯೂ ಅಧ್ಯಕ್ಷರಾಗಿದ್ದರು, ಆದರೆ ಮತ್ತೊಮ್ಮೆ ಅಧ್ಯಕ್ಷರಾಗುವ ಆಸೆಯಿಂದ ಚುನಾವಣೆ ಕಣಕ್ಕೆ ಇಳಿದಿದ್ದಾರೆ.

  English summary
  Karnataka Film Chamber Of Commerce Election is on May 28. Voting will start from May 28 afternoon 2 o'clock.
  Saturday, May 28, 2022, 12:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X