For Quick Alerts
  ALLOW NOTIFICATIONS  
  For Daily Alerts

  ಇಂದು ನಡೆಯಲಿದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ

  By Naveen
  |
  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣಾ ಕಣದಲ್ಲಿ ಪೂಜಾ ಗಾಂಧಿ, ದಿನಕರ್ ತೂಗುದೀಪ..!!

  ಕರ್ನಾಟಕ ಚಲನ‌ಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಇಂದು ಮಧ್ಯಾಹ್ನ ನಡೆಯಲಿದೆ. ಅಧ್ಯಕ್ಷ, ಉಪಾದ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಸ್ಥಾನಗಳ ಆಯ್ಕೆಗೆ ಮತದಾನ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ 6 ಗಂಟೆವರೆಗೆ ಮತದಾನ ಪ್ರಕ್ರಿಯೆ ಇರಲಿದೆ.

  ಅಧ್ಯಕ್ಷ ಸ್ಥಾನಕ್ಕೆ ಪಾರ್ವತಮ್ಮ ರಾಜ್ ಕುಮಾರ್ ಸಹೋದರ ಹಾಗೂ ನಿರ್ಮಾಪಕರಾದ ಚಿನ್ನೇಗೌಡ ಸ್ಪರ್ಧೆ ಮಾಡಿದ್ದಾರೆ. ಇವರ ಎದುರಾಳಿಯಾಗಿ ವಿತರಕ ಮಾರ್ಸ್ ಸುರೇಶ್ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಎಲ್ಲಾ ವಲಯಗಳಿಂದ 1500 ಕ್ಕೂ ಹೆಚ್ಚು ಜನರು ಮತದಾನ ಮಾಡಲಿದ್ದಾರೆ. ಇವುಗಳಲ್ಲಿ 800 ವಿತರಕ 300 ಪ್ರದರ್ಶನರ ಮತಗಳ ಇವೆ.

  ವಿವಿಧ ವಿಭಾಗಗಳಿಗೆ ನಟ ದರ್ಶನ್ ಸಹೋದರ, ನಿರ್ದೇಶಕ ದಿನಕರ್ ತೂಗುದೀಪ್ ಹಾಗೂ ನಟಿ ಪೂಜಾ ಗಾಂಧಿ ಕೂಡ ಕಣಕ್ಕಿಳಿದಿದ್ದಾರೆ.

  ಹಾಲಿ ಅಧ್ಯಕ್ಷರಾದ ಸಾ.ರಾ ಗೋವಿಂದು ಅವರ ಅಧಿಕಾರ ಅವಧಿ ಮುಗಿದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಬಳಿಕ ಇದೀಗ ಚುನಾವಣೆ ನಡೆಯುತ್ತಿದೆ. ಬೆಂಗಳೂರಿನ ಫಿಲ್ಮ್ ಛೆಂಬರ್ ಕಛೇರಿ ಪಕ್ಕದಲ್ಲಿ ಇರುವ ಗುರು ರಾಜ ಕಲ್ಯಾಣ ಮಂಟಪದಲ್ಲಿ ಮತದಾನ ನಡೆಯಲಿದೆ. ಇಂದು ಸಂಜೆ ಏಳು ಗಂಟೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದ್ದು, ನೂತನ ಅಧ್ಯಕ್ಷರ ಆಯ್ಕೆ ಆಗಲಿದೆ.

  English summary
  Karnataka Film Chamber of Commerce election will be held Today. Producer Chinne Gowda and Distributor Mars Suresh are contesting for president .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X