»   » ಮತ್ತೆ ಚಿತ್ರ ಪ್ರದರ್ಶನ ಶುರು : ಯು ಎಫ್ ಓ, ಕ್ಯೂಬ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ

ಮತ್ತೆ ಚಿತ್ರ ಪ್ರದರ್ಶನ ಶುರು : ಯು ಎಫ್ ಓ, ಕ್ಯೂಬ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ

Posted By:
Subscribe to Filmibeat Kannada

ಯು ಎಫ್ ಓ, ಕ್ಯೂಬ್ ಸಮಸ್ಯೆಗೆ ಈಗ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಪ್ರತಿ ವಾರದಂತೆ ಈ ಶುಕ್ರವಾರ ಸಹ ಹೊಸ ಸಿನಿಮಾಗಳು ಬಿಡುಗಡೆಯಾಗಲಿವೆ. ಯು ಎಫ್ ಓ ಮತ್ತು ಕ್ಯೂಬ್ ಸಂಸ್ಥೆಯ ವಿರುದ್ಧ ದಕ್ಷಿಣ ಭಾರತದ ಚಿತ್ರ ನಿರ್ಮಾಪಕರು ನಡೆಸುತ್ತಿದ್ದ ಹೋರಾಟಕ್ಕೆ ಸದ್ಯ ಬ್ರೇಕ್ ಬಿದ್ದಿದೆ. ಡಿಜಿಟಲ್ ಸರ್ವಿಸ್ ಪ್ರೊವೈಡರ್ಸ್ 15 ದಿನಗಳ ಕಾಲ ಕಾಲಾವಕಾಶ ನೀಡಿದ್ದು, ಸದ್ಯಕ್ಕೆ ಸಿನಿಮಾಗಳನ್ನು ಬಿಡುಗಡೆ ಮಾಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧಾರ ಮಾಡಿದೆ.

ಯುಎಫ್ ಓ ಮತ್ತು ಕ್ಯೂಬ್ ಸಮಸ್ಯೆಯಿಂದ ಕೆಲವು ಸಿನಿಮಾಗಳು ಬಿಡುಗಡೆ ಮುಂದಕ್ಕೆ ಹೋಗಿತ್ತು. ಈಗ ಅಂತಹ ಚಿತ್ರಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ನಟಿ ಪೂಜಾ ಗಾಂಧಿ ನಟನೆಯ '3' (ದಂಡುಪಾಳ್ಯ 3), ಹೊಸಬರ 'ಇದಂ ಪ್ರೇಮಂ ಜೀವನಂ' ಹಾಗೂ 'ನನ್ನಿಷ್ಟ' ಚಿತ್ರಗಳು ಈ ಶುಕ್ರವಾರ ಬಿಡುಗಡೆಯಾಗಲಿವೆ. ಚಿತ್ರ ನಿರ್ಮಾಪಕರಿಗೆ ತೊಂದರೆ ಆಗಬಾರದು ಎಂದು ಅವರ ಹಿತ ದೃಷ್ಟಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಜೊತೆಗೆ ಈ ವಿಷಯವಾಗಿ ಇಂದು ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷ ಸಾ.ರಾ.ಗೋವಿಂದು ಪತ್ರಿಕಾಗೋಷ್ಟಿ ಏರ್ಪಡಿಸಿದ್ದಾರೆ.

ಕರ್ನಾಟಕದಲ್ಲಿ ಹೊಸ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ: ಸಾರಾ ಗೋವಿಂದು

Karnataka film chamber of commerce has withdraw the ufo and qube protest

ಏನಿದು ಯುಎಫ್ ಓ ಮತ್ತು ಕ್ಯೂಬ್ ಸಮಸ್ಯೆ?

ಯು.ಎಫ್.ಓ ಹಾಗೂ ಕ್ಯೂಬ್ ಸಿನಿಮಾವನ್ನು ಚಿತ್ರಮಂದಿರದಲ್ಲಿ ಡಿಜಿಟಲ್ ಆಗಿ ಪ್ರದರ್ಶನ ಮಾಡುವ ಸಂಸ್ಥೆಗಳು. ಈ ಹಿಂದೆ ರೀಲ್ ಇದ್ದ ಕಾಲದಲ್ಲಿ ಪ್ರತಿ ಚಿತ್ರಮಂದಿರಕ್ಕೂ ಸಿನಿಮಾದ ಪ್ರಿಂಟ್ ಇರುವ ರೀಲ್ ತಲುಪಿಸಬೇಕಾಗಿತ್ತು. ಆದರೆ ಮಾರುಕಟ್ಟೆಗೆ ಯು.ಎಫ್.ಓ ಹಾಗೂ ಕ್ಯೂಬ್ ಬಂದ ಮೇಲೆ ಅದರಲ್ಲಿ ಸಿನಿಮಾ ಅಪ್ ಲೋಡ್ ಮಾಡಿದರೆ ನೇರವಾಗಿ ಚಿತ್ರಮಂದಿರದಲ್ಲಿ ಸಿನಿಮಾವನ್ನು ಪ್ರದರ್ಶನ ಮಾಡಬಹುದಾಗಿದೆ. ಇಲ್ಲಿಯವರೆಗೆ ಎಲ್ಲ ಸಿನಿಮಾಗಳು ಇದೇ ಪದ್ಧತಿಯನ್ನು ಅನುಸರಿಸುತ್ತಿದೆ.

ಮುಂದಿನವಾರ ತೆರೆ ಕಾಣಬೇಕಿದ್ದ ಸಿನಿಮಾಗಳಿಗೆ ತಡೆ

ಡಿಜಿಟಲ್​ ಅಪ್​ಲೋಡ್​ಗೆ ಒಂದು ಥಿಯೇಟರ್​ಗೆ ಯು.ಎಫ್.ಓ ಹಾಗೂ ಕ್ಯೂಬ್ ಸಂಸ್ಥೆಗಳು 2 ಸಾವಿರದವರೆಗೆ ಹಣ ಪಡೆಯುತ್ತಿದ್ದವು. ಆದರೆ ಈಗ ಈ ಎರಡು ಸಂಸ್ಥೆಗಳು ಮರ್ಜ್ ಆಗಿದ್ದು, ಒಂದು ಥಿಯೇಟರ್​ಗೆ 15 ಸಾವಿರ ರೂಪಾಯಿ ಡಿಮ್ಯಾಂಡ್ ಮಾಡುತ್ತಿದೆ. ಇದು ನಿರ್ಮಾಪಕರಿಗೆ ದೊಡ್ಡ ಹೊರೆ ಆಗುತ್ತದೆ ಎಂದು ಇದನ್ನು ಇಡೀ ದಕ್ಷಿಣ ಭಾರತದ ಚಿತ್ರರಂಗ ವಿರೋಧಿಸಿತ್ತು.

English summary
Karnataka film chamber of commerce has now reportedly agreed to withdraw the ufo and qube protest, which included withholding the theatrical release of new movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada