For Quick Alerts
  ALLOW NOTIFICATIONS  
  For Daily Alerts

  ಫಿಲಂ ಚೇಂಬರ್‌ಗೆ ಮತದಾನ ಮುಕ್ತಾಯ, ಫಲಿತಾಂಶಕ್ಕೆ ಕ್ಷಣಗಣನೆ

  |

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯುತ್ತಿದ್ದು, ಮತದಾನ ಪ್ರಕ್ರಿಯೆ ಮುಗಿದಿದ್ದು, ಮತ ಎಣಿಕೆ ಪ್ರಾರಂಭವಾಗಿದೆ. ಕೆಲವೇ ನಿಮಿಷಗಳಲ್ಲಿ ಫಲಿತಾಂಶ ಘೋಷಣೆ ಸಹ ಆಗಲಿದೆ.

  ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಮತದಾನ ಪ್ರಕ್ರಿಯೆ ನಡೆದಿದ್ದು, ಖ್ಯಾತನಾಮ ನಿರ್ಮಾಪಕರು, ವಿತರಕರು, ನಟ-ನಟಿಯರು ಆಗಮಿಸಿ ಮತದಾನ ಮಾಡಿದ್ದಾರೆ.

  ನಿರ್ಮಾಪಕರ ವಲಯದಿಂದ 910 ವೋಟ್ ಆಗಿವೆ, ವಿತರಕರಿಂದ 200ಆಸುಪಾಸು ವೋಟ್ ಆಗಿವೆ, ಪೇಪರ್ ಹರಿಯದೇ ಮತ ಏಣಿಕೆ ಮಾಡ್ತೀವಿ, 8 ಆಫೀಸರ್ ಈ ಕೆಲಸ ಮಾಡ್ತಾರೆ, ಯಾರಿಗೆ ಎಷ್ಟು ವೋಟ್ ಬರುತ್ತೆ ಅಂತ ಗ್ರಾಫ್ ಮೂಲಕ ಗೊತ್ತಾಗುತ್ತೆ, ಒಳಗೆ ಸ್ಪರ್ಧಿಸಿರೋ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶವಿರುತ್ತೆ, 10:30ಕ್ಕೆ ಫಲಿತಾಂಶ ಪ್ರಕಟವಾಗುತ್ತೆ ಎಂದು ಚುನಾವಣಾಧಿಕಾರಿ ಥಾಮಸ್ ಹೇಳಿದ್ದಾರೆ.

  7 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಿದೆ, ಮೂರು ವಲಯಗಳ ಮತಎಣಿಕೆ ನಡೆಸಲಾಗುತ್ತಿದೆ. ಮತ ಎಣಿಕೆ ನಂತರ ಅಧ್ಯಕ್ಷರ ಆಯ್ಕೆಯಾಗುತ್ತದೆ. ಫಿಲಂ ಚೇಂಬರ್ ಚುನಾವಣೆಯ ಇತಿಹಾಸದಲ್ಲೇ ದಾಖಲೆ ಮತದಾನ ಈ ಬಾರಿ ಆಗಿದ್ದು, ಒಟ್ಟು 86% ರಷ್ಟು ಮತದಾನವಾಗಿದೆ.

  ರಾಘವೇಂದ್ರ ರಾಜ್ ಕುಮಾರ್, ವಿಜಯ್ ರಾಘವೇಂದ್ರ, ನಾದಬ್ರಹ್ಮ ಹಂಸಲೇಖ, ನಾಗೇಂದ್ರ ಪ್ರಸಾದ್, ಇಂದ್ರಜಿತ್ ಲಂಕೇಶ್, ಸೃಜನ್ ಲೋಕೇಶ್, ಹಿರಿಯ ನಟಿ ಲೀಲಾವತಿ ಸೇರಿದಂತೆ ಅನೇಕ ನಟರು, ನಿರ್ದೇಶಕರು, ನಿರ್ಮಾಪಕರು ಆಗಮಿಸಿ ಮತದಾನ ಮಾಡಿದ್ದಾರೆ. ''ಯಾರಿಗೆ ಅದೃಷ್ಟ, ಅರ್ಹತೆ ಇದೆಯೋ ಅವರು ಗೆಲ್ಲುತ್ತಾರೆ'' ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದಾರೆ.

  ಚುನಾವಣೆಗೆ ಸ್ಪರ್ಧಿಸಿರುವ ಬಾ.ಮಾ.ಹರೀಶ್ ಮಾತನಾಡಿ, ''ಹೊಸ ಬದಲಾವಣೆಯ ಸಂಕೇತ ಇದು, ವಾತಾವರಣ ನಮ್ಮ ಪರವಾಗಿದೆ, ಜಿದ್ದಾಜಿದ್ದಿ ಏನಿಲ್ಲ, ಫಲಿತಾಂಶ ಬರಲಿ, ನಿರ್ಮಾಪಕರ ವಲಯದಲ್ಲಿ ಸ್ಪರ್ಧೆ ಸಹಜ, ಕಂಪಿಟೇಷನ್ ಇರಲೇಬೇಕು, ವೋಟಿಂಗ್ ನಲ್ಲೂ ಈ ಬಾರಿ ತುಂಬಾ ಸ್ಪೆಷಲ್, ರಾಕ್ ಲೈನ್ ವೆಂಕಟೇಶ್, ಜಯಮಾಲಾ ಸೇರಿದಂತೆ ಎಲ್ಲರ ಬೆಂಬಲ ನನಗಿದೆ, ಉತ್ಸಾಹಿ ತಂಡವೊಂದು ನನ್ನ ಶಕ್ತಿ. ಈ ಬಾರಿ ಗೆಲುವು ನಮ್ಮದೇ'' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

  English summary
  Karnataka Film chamber of commerce voting completes. 86 percent vote has been casted. Result will be out by 10:30 pm.
  Saturday, May 28, 2022, 21:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X