For Quick Alerts
  ALLOW NOTIFICATIONS  
  For Daily Alerts

  ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಪುನೀತ್‌ಗೆ ನಮನ

  |

  ಪುನೀತ್ ರಾಜ್‌ಕುಮಾರ್ ಅಗಲಿಕೆಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಚಿತ್ರರಂಗಕ್ಕೆ ಪುನೀತ್ ಅಗಲಿಕೆ ನಿಜಕ್ಕೂ ತುಂಬಲಾರದ ನಷ್ಟ. ಅದೆಷ್ಟೋ ಸಿನಿಮಾಗಳನ್ನು ಪುನೀತ್ ಮಾಡಬೇಕಿತ್ತು. ಅದೆಷ್ಟೋ ಸಿನಿ ಪ್ರೇಮಿಗಳನ್ನ ರಂಜಿಸಬೇಕಿತ್ತು. ಸಾಲು-ಸಾಲು ಸಾಮಾಜಿಕ ಕಳಕಳಿ ಇರುವ ಸಿನಿಮಾ ಮಾಡಲು ಪುನೀತ್ ಎದುರು ನೋಡುತ್ತಿದ್ದರು. ಇದೆಲ್ಲಾ ಕನಸುಗಳು, ಆಸೆಗಳಿಗೆ ಪೂರ್ಣ ವಿರಾಮ ಕೊಟ್ಟು ಪುನೀತ್ ಎಲ್ಲರನ್ನು ದುಃಖದ ಮಡುವಿನಲ್ಲಿ ಬಿಟ್ಟು ತೆರಳಿದ್ದಾರೆ.

  Recommended Video

  ಸುಮಾರು 650ಕ್ಕು ಹೆಚ್ಚು ಥಿಯೇಟರ್‌ಗಳಲ್ಲಿ ಪುನೀತ್ ಸ್ಮರಣೆ

  ಪುನೀತ್ ಸಾವಿಗೀಡಾಗಿ 10 ದಿನಗಳೇ ಆದರು ಇನ್ನೂ ಪುನಿತ್ ನಮ್ಮ ಸುತ್ತಲೇ ಇದ್ದಾರೆ. ಇದೆಲ್ಲಾ ಕೆಟ್ಟ ಕನಸುಗಳು ಎಂದೇ ಇನ್ನೂ ನಂಬುತ್ತಿದ್ದಾರೆ. ಅಭಿಮಾನಿಗಳಂತೂ ಪುನೀತ್ ಸಾವಿಗೆ ಈಗಲೂ ದುಃಖತಪ್ತರಾಗೇ ಇದ್ದಾರೆ. ಪುನೀತ್ ಅವರಿಗೆ ಚಿತ್ರರಂಗದಿಂದ ಅಪ್ಪು ನಮನ ಕಾರ್ಯಕ್ರಮಗಳು ನಡೆಸಲು ತಯಾರಿಗಳು ನಡೆದಿದೆ. ಇದಕ್ಕೂ ಮುಂಚಿತವಾಗಿ ಈಗ ಥಿಯೇಟರ್ ಒಕ್ಕೂಟಗಳು ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

  ಇಂದು ಸಂಜೆ 6 ಗಂಟೆಗೆ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಪುನೀತ್ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಇದಕ್ಕಾಗಿ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಚಿತ್ರ ಪ್ರದರ್ಶಕರ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಸುಮಾರು 600ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪುನೀತ್ ಅವರಿಗೆ ನಮನ ಸಲ್ಲಿಸಲಾಗುತ್ತಿದೆ. ಇದಕ್ಕಾಗಿ ಹೇಗೆ ಯಾವ ಸಮಯಕ್ಕೆ ಕಾರ್ಯಕ್ರಮ ಆರಂಭಿಸಬೇಕು ಎನ್ನುವ ಬಗ್ಗೆ ತಯಾರಿಗಳು ನಡೆದಿದೆ.

  ಥಿಯೇಟರ್‌ಗಳಲ್ಲಿ ಮೌನಾಚರಣೆ ಮಾಡೋ ಮೂಲಕ ಹಾಗೂ ಕ್ಯಾಂಡಲ್ ಹಚ್ಚಿ ಪುನೀತ್ ಭಾವಚಿತ್ರಕ್ಕೆ ಇಂದು ಸಂಜೆ ನಮನ ಸಲ್ಲಿಸಲು ಎಲ್ಲಾ ತಯಾರಿಗಳು ನಡೆದಿದೆ. ಜೊತೆಗೆ ಸಂಗೀತ ನಿರ್ದೇಶಕ ನಾಗೇಂದ್ರ ಪ್ರಸಾದ್ ರಚಿಸಿರುವ ಹಾಡಿನ ಮೂಲಕ ಗೀತನಮನ ಕೂಡ ಸಲ್ಲಿಸಲು ಮುಂದಾಗಿದೆ ಥಿಯೇಟರ್ ಒಕ್ಕೂಟ. ಈ ಸಂದರ್ಭದಲ್ಲಿ ಥಿಯೇಟರ್ ಸಿಬ್ಬಂದಿ ಹಾಗೂ ಅಭಿಮಾನಿಗಳು ಕೂಡ ಭಾಗಿಯಾಗಲಿದ್ದಾರೆ. ಈ ಮೂಲಕ ತಮ್ಮನ್ನಗಲಿರೊ ನಟಸಾರ್ವಭೌಮನಿಗೆ ಶ್ರದ್ಧಾಂಜಲಿ ಸಲ್ಲಿಸಲು ಥಿಯೇಟರ್ ಒಕ್ಕೂಟ ತಯಾರಿ ನಡೆಸಿದೆ.

  ಇನ್ನು ಅರಮನೆ ನಗರಿ ಮೈಸೂರಿನಲ್ಲೂ ಪುನೀತ್‌ ರಾಜ್‌ಕುಮಾರ್‌ಗೆ ನಮನ ಸಲ್ಲಿಸಲು ಸುಮಾರು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತಯಾರಿ ನಡೆಸಿದ್ದಾರೆ. ಗೀತನಮನ ಹಾಗೂ ದೀಪ ನಮನ ಸಲ್ಲಿಸಲು ಮುಂದಾಗಿದ್ದಾರೆ. ದೊಡ್ಡ ದೊಡ್ಡ ಕಟೌಟ್‌ಗಳು, ಬ್ಯಾನರ್‌ಗಳು ಕೂಡ ತಲೆ ಎತ್ತಲಿದ್ದು, ಏಕಕಾಲದಲ್ಲಿ ಎಲ್ಲಾ ಕಡೆ ಪುನೀತ್‌ ರಾಜ್‌ಕುಮಾರ್‌ಗೆ ಶ್ರದ್ಧಾಂಜಲಿ ಕಾರ್ಯಕ್ರಮ ನೆರವೇರಲಿದೆ.

  ಇನ್ನೂ ಚಿತ್ರರಂಗದ ಕಡೆಯಿಂದಲೂ ಅಪ್ಪು ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನವೆಂಬರ್ 16 ರಂದು ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ 'ಪುನೀತ್ ನಮನ' ಕಾರ್ಯಕ್ರಮ ನಡೆಯಲಿದೆ. ಫಿಲ್ಮ್ ಚೇಂಬರ್‌ನ ಸದಸ್ಯರು ತೆಲುಗು, ತಮಿಳು, ದಕ್ಷಿಣ ಭಾರತದ ಚಿತ್ರರಂಗ ಹಾಗೂ ರಾಜಕೀಯ ಮುಖಂಡರಿಗೆ ಆಹ್ವಾನ ನೀಡಲಾಗುತ್ತಿದೆ.

  ನಗರದ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯಲಿರುವ ಪುನೀತ್ ನಮನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಕೇವಲ ಚಿತ್ರರಂಗ ಹಾಗೂ ರಾಜಕೀಯ ವಲಯದ ಗಣ್ಯರಿಗಷ್ಟೇ ಆಹ್ವಾನ ನೀಡಲಾಗಿದೆ. ನಿಯಂತ್ರಣ ಕಷ್ಟ ಆಗುತ್ತೆ ಅನ್ನುವ ಕಾರಣಕ್ಕೆ ಸಾರ್ವಜನಿಕರಿಗೆ ಆಹ್ವಾನ ನೀಡಿಲ್ಲ. ಆದರೆ, ಮಾಧ್ಯಮಗಳಲ್ಲಿ ಹಾಗೂ ಯೂಟ್ಯೂಬ್ ಚಾನೆಲ್‌ಗಳಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಅವಕಾಶ ನೀಡಲಾಗಿದ್ದು, ಟಿವಿ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ ಎಂದು ನಿರ್ಮಾಪಕ ಸಾರಾ ಗೋವಿಂದು ತಿಳಿಸಿದ್ದಾರೆ.

  ಪುನೀತ್ ನಮನ ಕಾರ್ಯಕ್ರಮಕ್ಕೆ ಕರ್ನಾಟಕ ಅಷ್ಟೇ ಅಲ್ಲದೆ ದಕ್ಷಿಣ ಭಾರತದ ಗಣ್ಯರನ್ನು ಆಹ್ವಾನಿಸಲಾಗಿದೆ. ಚಿತ್ರರಂಗ ಸೇರಿದಂತೆ, ಪುನೀತ್ ಆತ್ಮೀಯರಿಗೆ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಸುಮಾರು ಒಂದು ಸಾವಿರ ಗಣ್ಯರು ಪುನೀತ್ ನಮನ ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆಯಿದೆ. ಈ ಕಾರ್ಯಕ್ರಮದಲ್ಲಿ ಕೇವಲ ಗಣ್ಯರ ಮಾತು ಹಾಗೂ ಗೀತೆಯೊಂದಿಗೆ ನಮನ ಸಲ್ಲಿಸಲು ಅವಕಾಶ ನೀಡಲಾಗಿದೆ.

  ಹೀಗೆ ಸಾಲು ಸಾಲಾಗಿ ಪುನೀತ್ ಸಾವಿಗೆ ಕಂಬನಿ ಮಿಡಿದಿರೋ ಅದೆಷ್ಟೋ ಮಂದಿ ತಮಗೆ ತೋಚಿದಂತೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಚಿತ್ರರಂಗದವರು ಇದೀಗ ದೊಡ್ಡ ಮಟ್ಟದಲ್ಲಿ ಅಪ್ಪು ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಮೂಲಕ ಪುನೀತ್‌ ರಾಜ್‌ಕುಮಾರ್‌ಗೆ ನಮನ ಸಲ್ಲಿಸಲು ಮುಂದಾಗಿದ್ದಾರೆ.

  English summary
  Karnataka film distributors decided to pay tribute to Puneeth Rajkumar.
  Sunday, November 7, 2021, 16:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X