»   » ಕರ್ನಾಟಕದ ಅಭಿಷಿಕ್ತಾ ಮಿಸ್ ಸೌತ್ ಇಂಡಿಯಾ

ಕರ್ನಾಟಕದ ಅಭಿಷಿಕ್ತಾ ಮಿಸ್ ಸೌತ್ ಇಂಡಿಯಾ

Posted By:
Subscribe to Filmibeat Kannada

2014ನೇ ಸಾಲಿನ 'ಮಿಸ್ ಸೌತ್ ಇಂಡಿಯಾ' ಟೈಟಲ್ ಕರ್ನಾಟಕದ ಅಭಿಷಿಕ್ತಾ ಎಸ್.ಶೆಟ್ಟಿ ಕೊರಳಿಗೆ ಬಿದ್ದಿದೆ. ಎರಡನೇ ಹಾಗೂ ಮೂರನೇ ರನ್ನರ್ ಅಪ್ ಪ್ರಶಸ್ತಿಗಳು ಕ್ರಮವಾಗಿ ಕರ್ನಾಟಕದ ಪಾಲಾಗಿವೆ.

ಭಾನುವಾರ (ಜ.19) ಕೊಯಮತ್ತೂರಿನ ಲಾ ಮೆರೆಡಿಯನ್ ಹೋಟೆಲ್ ನಲ್ಲಿ ನಡೆದ 11ನೇ ಆವೃತ್ತಿಯ ಸ್ಪರ್ಧೆಯಲ್ಲಿ ಅದಿತಿ ಶೆಟ್ಟಿ ಹಾಗೂ ಮೇಘನಾ ಶೆಟ್ಟಿ ಕ್ರಮವಾಗಿ ಮೊದಲ ಹಾಗೂ ಮೂರನೇ ರನ್ನರ್ ಅಪ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. [ಮೋಸ್ಟ್ ಸೆಕ್ಸಿಯಸ್ಟ್ ಮಹಿಳೆಯಾಗಿ ಸ್ಕಾರ್ಲೆಟ್]

Abhishikta S Shetty

2013ನೇ ಸಾಲಿನ ಮಿಸ್ ಸೌತ್ ಇಂಡಿಯಾ ಸ್ಪರ್ಧಿ ಅನುಶಾ ವೆಂಕಟರಾಮನ್ ಅವರು ಅಭಿಷಿಕ್ತಾ ಅವರಿಗೆ ಕಿರೀಟ ತೊಡಿಸುವ ಮೂಲಕ 2014ನೇ ಸಾಲಿನ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಉಳಿದಂತೆ ದರ್ಶಿತ್ಮಿತಾ ಗೌಡ ಅವರಿಗೆ 'ಮಿಸ್ ಕ್ವೀನ್ ಕರ್ನಾಟಕ', ಆರ್.ರಕ್ಷ್ಮಿ ಮಿಸ್ 'ಕ್ವೀನ್ ಆಂಧ್ರಪ್ರದೇಶ', ಅರ್ಚನಾ ಜಯಕೃಷ್ಣನ್ 'ಮಿಸ್ ಕ್ವೀನ್ ಕೇರಳ' ಹಾಗೂ ಶರೀ ಇರಾ ಅವರು 'ಮಿಸ್ ಕ್ವೀನ್ ತಮಿಳುನಾಡು' ಪ್ರಶಸ್ತಿಯನ್ನು ಪಡೆದರು.

2008ರಲ್ಲಿ ಆರಂಭವಾದ ಈ ಸ್ಪರ್ಧೆಗೆ ದಕ್ಷಿಣದ ಆಂಧ್ರಪ್ರದೇಶ, ಕೇರಳ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ಬೆಡಗಿಯರ ನಡುವೆ ಬಿರುಸಿನ ಸ್ಪರ್ಧೆ ನಡೆಯುತ್ತಿದೆ. ಕೇರಳದ ಪಾರ್ವತಿ ಓಮನಕುಟ್ಟನ್ ಅವರು ಮೊದಲ ಮಿಸ್ ಸೌತ್ ಇಂಡಿಯಾ ವಿನ್ನರ್. (ಏಜೆನ್ಸೀಸ್)

English summary
Abhishikta S Shetty of Karnataka has been crowned Miss South India 2014 in Coimbatore on Sunday. Aditi Shetty and Meghana Shetty, also from Karnataka, were adjudged the first and second runners-up at the 11th Edition of Miss South India Pageant organised by Pegasus here last night.
Please Wait while comments are loading...