For Quick Alerts
  ALLOW NOTIFICATIONS  
  For Daily Alerts

  ಈ ದಿನದಂದು ಬೆಂಗಳೂರಿನಲ್ಲಿ ಲೈವ್ ಕಾರ್ಯಕ್ರಮ ನಡೆಸಲಿದೆ 'ವರಾಹ ರೂಪಂ' ಮೇಲೆ ಕೇಸ್ ಹಾಕಿದ ಥೈಕುಡಂ ಬ್ರಿಡ್ಜ್!

  |

  ಇಷ್ಟು ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಅಬ್ಬರಿಸಿ ಅಸಾಮಾನ್ಯ ಸಾಧನೆ ಮಾಡಿದ ಕಾಂತಾರ ಚಿತ್ರ ಈಗ ಓಟಿಟಿಗೆ ಬಂದಿದ್ದು ಮೊದಲ ಬಾರಿಗೆ ಚಿತ್ರ ನೋಡಿದ ಸಿನಿ ರಸಿಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ ಹಾಗೂ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿದ್ದ ಪ್ರೇಕ್ಷಕರು ಅಸಾಮಾಧಾನ ಹೊರಹಾಕಿದ್ದಾರೆ.

  ಇದಕ್ಕೆ ಕಾರಣ ಚಿತ್ರದ ಅಂತ್ಯದಲ್ಲಿ ಬರುವ ವರಾಹ ರೂಪಂ ಹಾಡು. ಹೌದು, ಚಿತ್ರಮಂದಿರದಲ್ಲಿ ಈ ಹಾಡು ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಿತ್ತು. ರೋಮಾಂಚನಗೊಳಿಸಿದ್ದ ಈ ಹಾಡನ್ನು ಚಿತ್ರಮಂದಿರಗಳಿಂದ ಹೊರಬಂದ ನಂತರವೂ ಪ್ರೇಕ್ಷಕರು ಆನ್‌ಲೈನ್‌ ಮೂಲಕ ಕೇಳಿ ಆನಂದಿಸಿದ್ದರು. ಇಷ್ಟರ ಮಟ್ಟಿಗೆ ಸದ್ದು ಮಾಡಿದ್ದ ಹಾಡು ಓಟಿಟಿಯಲ್ಲಿ ಬಿಡುಗಡೆಯಾದ ಕಾಂತಾರ ಚಿತ್ರದಲ್ಲಿಲ್ಲ.

  ತಮ್ಮ ನವರಸಮ್ ಹಾಡಿನ ರಾಗದ ಕೃತಿಚೌರ್ಯ ಮಾಡಿ ಕಾಂತಾರದ ವರಾಹ ರೂಪಂ ಹಾಡನ್ನು ಸಂಯೋಜಿಸಲಾಗಿದೆ ಎಂದು ಥೈಕ್ಕುಡಂ ಬ್ರಿಡ್ಜ್ ದಾಖಲಿಸಿದ್ದ ದೂರಿನ ಕಾರಣ ವರಾಹ ರೂಪಂ ಹಾಡನ್ನು ಬದಲಿಸಲಾಗಿದೆ. ಹೀಗೆ ಹಾಡು ಬದಲಾದ ಕಾರಣದಿಂದ ಕೋಪಗೊಂಡಿರುವ ಕರ್ನಾಟಕದ ಕೆಲ ನೆಟ್ಟಿಗರು ಇದೀಗ ಥೈಕುಡಂ ಬ್ರಿಡ್ಜ್ ವಿರುದ್ಧ ತಿರುಗಿ ಬಿದ್ದಿದ್ದು ಬೆಂಗಳೂರಿನಲ್ಲಿ ನಡೆಯಲಿರುವ ಅವರ ಕಾರ್ಯಕ್ರಮಕ್ಕೆ ಅಡ್ಡಿ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.

   ಮಲ್ಲುಗಳನ್ನು ಕುಣಿಯಲು ಬಿಡುವುದಿಲ್ಲ

  ಮಲ್ಲುಗಳನ್ನು ಕುಣಿಯಲು ಬಿಡುವುದಿಲ್ಲ

  ಥೈಕುಡಂ ಬ್ರಿಡ್ಜ್ ಕಳೆದ ತಿಂಗಳಿನಿಂದ ದೇಶದ ಹಲವು ಪ್ರಮುಖ ನಗರಗಳಲ್ಲಿ ಲೈವ್ ಹಾಡಿನ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಅದರಂತೆ ಡಿಸೆಂಬರ್ 19ರಂದು ಈ ತಂಡ ಬೆಂಗಳೂರಿನಲ್ಲಿ ಲೈವ್ ಕಾನ್ಸರ್ಟ್ ನಡೆಸಲಿದೆ. ಕಾಪಿರೈಟ್ ಹಾಕಿ ಕಾಂತಾರ ತಂಡಕ್ಕೆ ಹಿನ್ನಡೆ ಉಂಟುಮಾಡಿದ ಇವರನ್ನು ನಮ್ಮ ನೆಲದಲ್ಲಿ ಕುಣಿಯಲು ಬಿಡಬಾರದು ಎಂದು ಸದ್ಯ ಕೆಲ ನೆಟ್ಟಿಗರು ಟ್ವೀಟ್ ಮಾಡುವ ಮೂಲಕ ಅಭಿಯಾನ ಆರಂಭಿಸಿದ್ದಾರೆ.

   ಕಾಪಿ ಕಾಪಿನೇ.. ಇಂತಹ ವಿರೋಧ ಬೇಡ

  ಕಾಪಿ ಕಾಪಿನೇ.. ಇಂತಹ ವಿರೋಧ ಬೇಡ

  ಇನ್ನು ಕೆಲ ಕನ್ನಡಿಗರು ಈ ನಿರ್ಧಾರಕ್ಕೆ ಸಮ್ಮತಿಸಿದ್ದರೆ, ಇನ್ನೂ ಕೆಲ ಕನ್ನಡಿಗರು ಕಾಪಿ ಯಾರೂ ಮಾಡಿದ್ರೂ ಕಾಪಿನೇ, ಇಲ್ಲಿ ಭಾಷೆಯ ವಿಚಾರ ತರುವುದು ಬೇಡ, ಕಷ್ಟ ಪಟ್ಟು ಸಂಗೀತ ಮಾಡಿದ್ದಾರೆ ಹೀಗಾಗಿ ದೂರು ಕೊಟ್ಟಿದ್ದಾರೆ, ಇದನ್ನು ವಿರೋಧಿಸುವುದು ಸರಿಯಲ್ಲ ಎಂದಿದ್ದಾರೆ.

  ಕೇಸ್ ಅಪ್ಡೇಟ್

  ಕೇಸ್ ಅಪ್ಡೇಟ್

  ಚಿತ್ರ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ದೇಶಾದ್ಯಂತ ಖ್ಯಾತಿ ಪಡೆದ ಕಾಂತಾರ ಚಿತ್ರದ ಈ 'ವರಾಹ ರೂಪಂ' ಹಾಡು ತಾವು ಸಂಯೋಜಿಸಿದ್ದ 'ನವರಸಮ್' ಹಾಡಿನ ಕಾಪಿ ಎಂದು ಮಲಯಾಳಂನ ಬ್ಯಾಂಡ್ ಸಂಸ್ಥೆ ಥೈಕ್ಕುಡಂ ಬ್ರಿಡ್ಜ್ ದೂರು ದಾಖಲಿಸಿತ್ತು. ಹೀಗಾಗಿ ಕಾಂತಾರ ಚಿತ್ರದಲ್ಲಿ ಮತ್ತು ಆಡಿಯೋ ಅಪ್ಲಿಕೇಶನ್‌ಗಳಲ್ಲಿ ಎಲ್ಲಿಯೂ ಸಹ 'ವರಾಹ ರೂಪಂ' ಹಾಡನ್ನು ಬಳಸಬಾರದು ಎಂದು ಕೇರಳದ ಕೋಯಿಕೋಡ್ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಹೊಂಬಾಳೆ ಫಿಲ್ಮ್ಸ್ ಕೇರಳ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ ಹೊಂಬಾಳೆ ಫಿಲ್ಮ್ಸ್‌ ಅರ್ಜಿಯನ್ನು ವಜಾಗೊಳಿಸಿದ ಕೇರಳ ಹೈಕೋರ್ಟ್ ಕಾನೂನಿನ ಪ್ರಕಾರ ಹಾಡನ್ನು ಬಳಸದೇ ಪರ್ಯಾಯ ಹಾದಿಯನ್ನು ಕಂಡುಕೊಳ್ಳಬೇಕೆಂದು ತೀರ್ಪು ನೀಡಿತು. ಅದರಂತೆ ಓಟಿಟಿಯಲ್ಲಿ ಕಾಂತಾರ ಚಿತ್ರದ ಹಾಡನ್ನು ಬದಲಿಸಲಾಗಿದೆ.

  English summary
  Karnataka netizens trying to ban Thaikudam Bridge's Bengaluru live concert which is scheduled on December 19 . Taka a look
  Thursday, November 24, 2022, 16:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X