For Quick Alerts
  ALLOW NOTIFICATIONS  
  For Daily Alerts

  ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ಮೂರು ದಿನಗಳ 'ಸಿನಿ ಸಂಭ್ರಮ'

  By Bharath Kumar
  |

  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದೊಂದಿಗೆ ಆಗಸ್ಟ್ 1 ರಿಂದ 3 ರವರೆಗೆ "ಸಿನಿ ಸಂಭ್ರಮ" ಬೆಳ್ಳಿ ತೆರೆಯ ವರ್ತಮಾನ ಎಂಬ ಕಾರ್ಯಕ್ರಮವನ್ನು ನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಮ್ಮಿಕೊಂಡಿದೆ.

  ಆಗಸ್ಟ್ 1 ರಂದು ಸಂಜೆ 4.00 ಗಂಟೆಗೆ ನಿರ್ಮಾಪಕ ಬಿ.ಎಸ್. ಚಂದ್ರಶೇಖರ್ ಹಾಗೂ ರವೀಂದ್ರ ವೆಂಶಿ ನಿರ್ದೇಶನದ "ಪುಟಾಣಿ ಸಫಾರಿ" ಎಂಬ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಈ ಸಂದರ್ಭದಲ್ಲಿ ಮಾಧ್ಯಮ ತಜ್ಞ ಜಿ.ಎನ್. ಮೋಹನ್ ಅವರಿಂದ ಸಿನಿ ಸಂಭ್ರಮ ಕುರಿತು ಮಾತನಾಡಲಿದ್ದಾರೆ. ಚಲನಚಿತ್ರ ನಿರ್ದೇಶಕ ಮಂಜುನಾಥ್ ಎಸ್. (ಮಂಸೋರೆ) ಹಾಗೂ ಕನ್ನಡಪ್ರಭ ಸಾಪ್ತಾಹಿಕ ಸಂಪಾದಕರು ಸಿನಿಮಾ ಕುರಿತು ವಿಶ್ಲೇಷಣೆ ಮಾಡುವರು.

  ಆಗಸ್ಟ್ 2 ರಂದು ಸಂಜೆ 4.00 ಗಂಟೆಗೆ ನಿರ್ಮಾರ್ಪಕ ಕೆ. ಸುಧಾಕರ್ ಹಾಗೂ ಅನೂಪ್ ಆಂಟೋನಿ ನಿರ್ದೇಶನದ "ಕಥಾ ವಿಚಿತ್ರ" ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಈ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಹಾಗೂ ಪ್ರಜಾವಾಣಿ ಮುಖ್ಯ ಉಪಸಂಪಾದಕ ಚ.ಹ. ರಘುನಾಥ್ ಅವರು ಸಿನಿಮಾ ಕುರಿತು ವಿಶ್ಲೇಷಣೆ ಮಾಡುವರು.

  ಆಗಸ್ಟ್ 3 ರಂದು ಸಂಜೆ 4.00 ಗಂಟೆಗೆ ನಿರ್ಮಾಪಕ ರಾಮಕೃಷ್ಣ ನಿಗಡೆ ಹಾಗೂ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ "ಹೊಂಬಣ್ಣ" ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಈ ಸಂದರ್ಭದಲ್ಲಿ ಹಿರಿಯ ಚಲನಚಿತ್ರ ನಿರ್ದೇಶಕ ಎಸ್. ನಾರಾಯಣ್ ಹಾಗೂ ವಿಜಯ ಕರ್ನಾಟಕದ ಸಿನಿಮಾ ಸಂಪಾದಕ ಶರಣ್ ಹುಲ್ಲೂರು ಅವರಿಂದ ಸಿನಿಮಾ ಕುರಿತು ವಿಶ್ಲೇಷಣೆ.

  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಈ ಸಿನಿ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.

  English summary
  karnataka vartha ilake Organizing 3 days of 'Cini Sambrama' starts from august 1st to 3rd. Hombanna, Putani Safari and katha vichitra Movies are screening in the Cini Sambrama event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X