»   » ವಿಜಯಲಕ್ಷ್ಮಿ-ದರ್ಶನ್ ಕೇಸನ್ನು ಕೈಗೆತ್ತಿಕೊಂಡ ಮಹಿಳಾ ಆಯೋಗ

ವಿಜಯಲಕ್ಷ್ಮಿ-ದರ್ಶನ್ ಕೇಸನ್ನು ಕೈಗೆತ್ತಿಕೊಂಡ ಮಹಿಳಾ ಆಯೋಗ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಆಧರಿಸಿ ನಟ ದರ್ಶನ್ ಅವರ ವಿರುದ್ಧ ರಾಜ್ಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡಿದೆ.

ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರ ಬಳಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವರದಿಯನ್ನು ಕೇಳಿದ್ದೇವೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಪಬ್ಲಿಕ್ ಟಿವಿಗೆ ಮಾಹಿತಿ ಕೊಟ್ಟಿದ್ದಾರೆ.[ಬಾಯ್ ಫ್ರೆಂಡ್ ಇದ್ದಾನಾ? ದರ್ಶನ್ ಪತ್ನಿ ವಿಜಯಲಕ್ಷ್ಮಿ ಏನಂದ್ರು ಗೊತ್ತಾ?]

ನಟ ದರ್ಶನ್ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಾಗಿದ್ದು, ಈ ಬಗ್ಗೆ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಏನು ಹೇಳಿದ್ದಾರೆ?. ಓದಿ ಕೆಳಗಿನ ಸ್ಲೈಡುಗಳಲ್ಲಿ....

ಮಂಜುಳಾ ಮಾನಸ

ಸಿನಿಮಾ ನಟರು ಎಂದ ಮೇಲೆ ಅವರಿಗೆ ಲಕ್ಷಾಂತರ ಜನ ಅಭಿಮಾನಿಗಳು ಹಾಗೂ ಹಿಂಬಾಲಕರು ಇರುತ್ತಾರೆ. ಅವರಿಗೆ ಏನು ಮೆಸೇಜ್ ಕೊಡ್ತಾರೆ ಇವರೆಲ್ಲಾ ಅಂತ ನನಗೆ ಗೊತ್ತಾಗುತ್ತಿಲ್ಲ. ಹೀಗೆ ಮನೆ ಮುಂದೆ ಹೋಗಿ ಗಲಾಟೆ ಮಾಡೋದು, ಮೊದಲು ಒಂದು ಬಾರಿ ಘಟನೆ ನಡೆದಿದೆ ಅದೇ ಥರ ಮತ್ತೆ ಇದು ಮುಂದುವರಿದಿದೆ. ನನಗೆ ಭದ್ರತೆ ಬೇಕು ಅಂತ ಕೇಳುತ್ತಾರೆ.-ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ.[ನನ್ನ ಹೆಂಡ್ತಿ ವಿಜಯಲಕ್ಷ್ಮಿಗೆ ಪ್ರಿಯಕರನಿದ್ದಾನೆ ಎಂದ ದರ್ಶನ್]

ರಿಯಾಲಿಟಿ ಚೆಕ್

ಒಬ್ಬ ಸೆಲೆಬ್ರಿಟಿಯ ಪತ್ನಿಗೆ ಭದ್ರತೆ ಇಲ್ಲಾಂದ್ರೆ ಹೇಗೆ ಅಂತ ನಾವು ಕ್ರಮ ಕೈಗೊಂಡಿದ್ದೇವೆ. ಮೊದಲು ಒಂದು ರಿಯಾಲಿಟಿ ಚೆಕ್ ಆಗಬೇಕು, ದರ್ಶನ್ ಅವರ ತಪ್ಪಿದೆಯಾ? ಅಥವಾ ವಿಜಯಲಕ್ಷ್ಮಿ ಅವರ ತಪ್ಪಿದೆಯಾ? ಅನ್ನೋದು ಕ್ಲೀಯರ್ ಆಗಬೇಕು. ಒಟ್ನಲ್ಲಿ ಯುವ ಜನತೆಗೆ ಒಂದು ಮೆಸೇಜ್ ಕೂಡ ಪಾಸ್ ಆಗಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು.- ಮಂಜುಳಾ ಮಾನಸ [ನಟ ದರ್ಶನ್-ವಿಜಯಲಕ್ಷ್ಮಿ ಸಂಸಾರದಲ್ಲಿ ಮತ್ತೆ ಸುಂಟರಗಾಳಿ]

ಸ್ವಯಂ ಪ್ರೇರಿತ ಕೇಸ್

ಇದೀಗ ಮಾಧ್ಯಮದ ವರದಿಯ ಆಧಾರದ ಮೇಲೆ ಸುಮೋಟೋ ಕೇಸ್ ದಾಖಲಿಸಿದ್ದೇವೆ. ವಿಚಾರಣೆಗಾಗಿ ನಿರ್ದೇಶನ ಕೊಟ್ಟಿದ್ದೇವೆ. ವಿಜಯಲಕ್ಷ್ಮಿ ಅವರೇ ಪರವಾಗಿಯೇ ನಾವು ನಿಲ್ಲುತ್ತಿದ್ದೇವೆ. ಯಾವುದೇ ನೊಂದ ಮಹಿಳೆಗೆ ಸಾಂತ್ವನ ನುಡಿಯುವುದು ನಮ್ಮ ಕರ್ತವ್ಯ. ಆದರೆ ರಿಯಾಲಿಟಿ ಏನು ಅಂತ ಗೊತ್ತಾಗಬೇಕು, ವಿಚಾರಣೆ ಆಗಬೇಕು. ಆದರೆ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳುವಾಗ ಯಾವುದೇ ನೊಂದ ಮಹಿಳೆ ಅಥವಾ ಅವರ ಕಡೆಯವರನ್ನು ಸಂಪರ್ಕ ಮಾಡಬೇಕಾದ ಅಗತ್ಯ ಇಲ್ಲ. ಸ್ವಯಂ ಪ್ರೇರಿತ ಕೇಸ್ ಗೆ ಅಂತಹ ಪವರ್ ಇದೆ, ಸೋ ಮಹಿಳಾ ಆಯೋಗ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದೆ. - ಮಂಜುಳಾ

ಪೊಲೀಸರ ಮೂಲಕ ವಿಚಾರಣೆ

ನಾವು ಪೊಲೀಸರ ಮುಖಾಂತರವೇ ವಿಚಾರಣೆ ಮಾಡಬೇಕು. ಸೋ ಕೇಸ್ ಗೆ ಸಂಬಂಧಪಟ್ಟ ಠಾಣೆಯ ಪೊಲೀಸರ ಜೊತೆ ಮಾತಾಡಿ ಅವರ ಸಹಾಯ ಪಡೆದುಕೊಂಡು ಮಾಹಿತಿ ಸಂಗ್ರಹಿಸಿ ವಿಚಾರಣೆ ಮಾಡುತ್ತೇವೆ. ಜೊತೆಗೆ ವಿಜಯಲಕ್ಷ್ಮಿ ಅವರನ್ನು ಕರೆದು ಮಾತಾಡುತ್ತೇವೆ. -ಮಂಜುಳಾ

ದರ್ಶನ್ ನಿವಾಸದಲ್ಲಿ ಚರ್ಚೆ

ನಟ ದರ್ಶನ್ ಅವರು ಕೇಸ್ ವಿಚಾರವಾಗಿ ರಾಜ ರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ 'ಜಗ್ಗುದಾದ' ಚಿತ್ರದ ನಿರ್ದೇಶಕ ರಾಘವೇಂದ್ರ, ತಮ್ಮ ಆಪ್ತ ವಕೀಲರು ಹಾಗೂ ಕೆಲವು ಆಪ್ತರ ಜೊತೆ ಸತತ 2 ಘಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.

ರಾಜಿ ಸಂಧಾನ ಆಗುವ ಸಾಧ್ಯತೆ ಇದೆಯೇ?

ನಟ ದರ್ಶನ್ ಅವರಿಗೆ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಿಂದ ಬುಲಾವ್ ಬಂದ ಕಾರಣ ದರ್ಶನ್ ಅವರು ಆಪ್ತರ ಜೊತೆ ಚರ್ಚೆ ನಡೆಸಿದ್ದಾರೆ. ಈ ನಡುವೆ ರಾಜಿ ಸಂಧಾನ ಆಗುವ ಸಾಧ್ಯತೆ ಇದೆಯೇ? ಎಂದು ಆಪ್ತ ವಲಯಗಳಲ್ಲಿ ಮಾಹಿತಿ ಕೇಳಿಬರುತ್ತಿದೆ.

English summary
Karnataka women commission files suo-moto case against actor Darshan. In the backdrop of Actres's marital life with wife Vijayalakshmi is under clouds

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada