For Quick Alerts
  ALLOW NOTIFICATIONS  
  For Daily Alerts

  ಪುನೀತ್-ಸಂತೋಷ್ ಆನಂದ್ ರಾಮ್ 'ಹ್ಯಾಟ್ರಿಕ್' ಪ್ರಾಜೆಕ್ಟ್ ಖಚಿತ ಪಡಿಸಿದ ಕಾರ್ತಿಕ್ ಗೌಡ

  |

  ಕೆಜಿಎಫ್ ಚಾಪ್ಟರ್ 2 ನಂತರ ಹೊಂಬಾಳೆ ಫಿಲಂಸ್ ಸಂಸ್ಥೆ ಮೆಗಾ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದೆ. ಪ್ಯಾನ್ ಇಂಡಿಯಾ ಚಿತ್ರದೊಂದಿಗೆ ಮತ್ತೆ ದೇಶದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಡಿಸೆಂಬರ್ 2 ರಂದು ಮಧ್ಯಾಹ್ನ ಈ ಚಿತ್ರದ ಬಗ್ಗೆ ಅಧಿಕೃತ ಪ್ರಕಟಣೆ ನೀಡುವುದಾಗಿ ಸ್ವತಃ ಹೊಂಬಾಳೆ ಸಂಸ್ಥೆ ಘೋಷಿಸಿದೆ.

  ಬಹುಶಃ ಹೊಂಬಾಳೆ ಸಂಸ್ಥೆ ಮುಂದಿನ ಚಿತ್ರವನ್ನು ಸಹ ಪುನೀತ್ ರಾಜ್ ಕುಮಾರ್ ಜೊತೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗ್ತಿದೆ. ವಿಶೇಷ ಅಂದ್ರೆ ಈ ಚಿತ್ರಕ್ಕೂ ಸಂತೋಷ್ ಆನಂದ್ ರಾಮ್ ಅವರೇ ನಿರ್ದೇಶನದ ಜವಾಬ್ದಾರಿ ವಹಿಸಲಿದ್ದಾರೆ ಎಂಬ ಸುದ್ದಿಗಳು ವರದಿಯಾಗಿದೆ. ಇದನ್ನು ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಖಚಿತ ಪಡಿಸಿದ್ದಾರೆ. ಮುಂದೆ ಓದಿ...

  ಪುನೀತ್-ಸಂತೋಷ್ ಮೂರನೇ ಚಿತ್ರ ಕನ್‌ಫರ್ಮ್

  ಪುನೀತ್-ಸಂತೋಷ್ ಮೂರನೇ ಚಿತ್ರ ಕನ್‌ಫರ್ಮ್

  ರಾಜಕುಮಾರ ಮತ್ತು ಯುವರತ್ನ ಸಿನಿಮಾದ ಬಳಿಕ ಮತ್ತೊಮ್ಮೆ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುವುದು ಖಚಿತವಾಗಿದೆ. ಈ ಸುದ್ದಿಯನ್ನು ಸ್ವತಃ ಹೊಂಬಾಳೆ ಸಂಸ್ಥೆಯ ಕಾರ್ಯಕಾರಿ ಕಾರ್ತಿಕ್ ಗೌಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.

  ಬುಕ್ ಮೈ ಶೋ ದಂಧೆಯ ವಿರುದ್ಧ 'ಯುವರತ್ನ' ನಿರ್ದೇಶಕ, ನಿರ್ಮಾಪಕರ ಆಕ್ರೋಶ

  ಜೇಮ್ಸ್ ನಂತರ ಶುರುವಾಗಬಹುದು!

  ಜೇಮ್ಸ್ ನಂತರ ಶುರುವಾಗಬಹುದು!

  ಯುವರತ್ನ ಚಿತ್ರೀಕರಣ ಸಂಪೂರ್ಣವಾಗಿ ಮುಗಿಸಿಕೊಟ್ಟಿರುವ ಪುನೀತ್ ಸದ್ಯ ಚೇತನ್ ಬಹದ್ದೂರ್ ಜೊತೆ 'ಜೇಮ್ಸ್' ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರ ಮುಗಿಸಿದ ನಂತರ ಬಹುಶಃ ಸಂತೋಷ್ ಆನಂದ್ ರಾಮ್ ಹಾಗೂ ಹೊಂಬಾಳೆ ಜೊತೆಗಿನ ಹೊಸ ಪ್ರಾಜೆಕ್ಟ್ ಆರಂಭವಾಗಬಹುದು ಎಂದು ಕಾರ್ತಿಕ್ ಗೌಡ ಸುಳಿವು ನೀಡಿದ್ದಾರೆ.

  ಹೊಂಬಾಳೆ ಫಿಲಂಸ್ ಮುಂದಿನ ಚಿತ್ರ ಯಾವುದು?

  ಹೊಂಬಾಳೆ ಫಿಲಂಸ್ ಮುಂದಿನ ಚಿತ್ರ ಯಾವುದು?

  ಅಂದ್ಹಾಗೆ, ಹೊಂಬಾಳೆ ಫಿಲಂಸ್ ಸಂಸ್ಥೆ ಡಿಸೆಂಬರ್ 2 ರಂದು ಘೋಷಿಸಲಿರುವ ಪ್ರಾಜೆಕ್ಟ್ ಇದೇ ಎನ್ನಲು ಸಾಧ್ಯವಿಲ್ಲ. ಅದು ಯಾವ ನಟ ಹಾಗೂ ನಿರ್ದೇಶಕನ ಜೊತೆ ಎನ್ನುವುದನ್ನು ಮಧ್ಯಾಹ್ನದವರೆಗೂ ಕಾದು ನೋಡಲೇಬೇಕು.

  ತೆಲುಗಿಗೆ ಎಂಟ್ರಿಕೊಟ್ಟ 'ಯುವರತ್ನ': ಖುಷಿಯಿಂದ ಸ್ವಾಗತಿಸಿದ ಪುರಿ ಜಗನ್ನಾಥ್

  KGF ನಂತರ ಹೊಂಬಾಳೆ ಫಿಲಂಸ್ ಘೋಷಣೆ ಮಾಡಲಿರೋ ದೊಡ್ಡ ಪ್ರಾಜೆಕ್ಟ್ ಇದೇನಾ?? | Filmibeat Kannada
  ಹೊಂಬಾಳೆ ನಿರ್ಮಾಣದ ಚಿತ್ರಗಳ ಪಟ್ಟಿ

  ಹೊಂಬಾಳೆ ನಿರ್ಮಾಣದ ಚಿತ್ರಗಳ ಪಟ್ಟಿ

  2014ರಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ನಿನ್ನಿಂದಲೇ ಸಿನಿಮಾ ಮೂಲಕ ಹೊಂಬಾಳೆ ಫಿಲಂಸ್ ಜರ್ನಿ ಆರಂಭಿಸಿದರು. ನಂತರ ಯಶ್ ಜೊತೆ ಮಾಸ್ಟರ್ ಪೀಸ್ ಸಿನಿಮಾ ಮಾಡಿದರು. ಬಳಿಕ ರಾಜಕುಮಾರ ಸಿನಿಮಾ ಬಂತು. ಇದರ ಹಿಂದೆ ಕೆಜಿಎಫ್ ಚಾಪ್ಟರ್ 1 ತೆರೆಕಂಡಿತ್ತು. ಈಗ ಕೆಜಿಎಫ್ ಚಾಪ್ಟರ್ 2 ಹಾಗೂ ಯುವರತ್ನ ಸಿನಿಮಾಗಳು ತಯಾರಾಗಿದೆ.

  English summary
  Hombale Films Executive producer Karthik gowda Confirms puneeth rajkumar and santhosh ananddram hat-trick Project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X