For Quick Alerts
  ALLOW NOTIFICATIONS  
  For Daily Alerts

  'ಸಾಕ್ ಬಿಡೊ ಮೊನ್ನೆ ತಮಿಳು ಚಿತ್ರ ಹಂಚಿ ಇಂದು ಕನ್ನಡ ಅಂತಿದ್ದೀಯ' ಎಂದ ನೆಟ್ಟಿಗನಿಗೆ ಕಾರ್ತಿಕ್ ಗೌಡ ಹೇಳಿದ್ದೇನು?

  |

  ಕಾಂತಾರ ಸಿನಿಮಾ ಇದೇ ತಿಂಗಳ 30ರಂದು ವಿಶ್ವದಾದ್ಯಂತ ಕನ್ನಡದಲ್ಲೇ ಬಿಡುಗಡೆಯಾಗಲು ಸಜ್ಜಾಗಿದೆ. ಈ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶಿಸಿದ್ದು, ಚಿತ್ರಕ್ಕೆ ಕನ್ನಡದ ಅತಿದೊಡ್ಡ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬಂಡವಾಳವನ್ನು ಹೂಡಿದೆ. ತಮ್ಮ ಮೊದಲ ಆರು ಚಿತ್ರಗಳಲ್ಲಿ ಯಶ್ ಹಾಗೂ ಪುನೀತ್ ಚಿತ್ರಗಳಿಗೆ ಮಾತ್ರ ಹಣ ಹೂಡಿದ್ದ ಹೊಂಬಾಳೆ ಫಿಲ್ಮ್ಸ್ ಬಿಡುಗಡೆಗೊಳಿಸುತ್ತಿರುವ ಮೊದಲ "ನಾನ್ ಅಪ್ಪು - ಯಶ್ ಫಿಲ್ಮ್" ಕಾಂತಾರ ಎಂದರೆ ತಪ್ಪಾಗಲಾರದು.

  ಸದಾ ಕಂಟೆಂಟ್ ಆಧಾರಿತ ಚಿತ್ರಗಳನ್ನು ನಿರ್ಮಿಸಲು ಇಚ್ಛಿಸುವ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಿತ್ರದ ಮೂಲಕ ತಮ್ಮ ಈ ಗುರಿಯನ್ನು ಮತ್ತೊಮ್ಮೆ ಮುಟ್ಟುವ ಸಾಧ್ಯತೆ ಅತಿ ದೊಡ್ಡ ಮಟ್ಟದಲ್ಲಿವೆ. ರಿಕ್ಕಿ, ಕಿರಿಕ್ ಪಾರ್ಟಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ರೀತಿಯ ವಿಭಿನ್ನ ಕಥಾಹಂದರವಿರುವ ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ್ದ ರಿಷಭ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರದ ಟ್ರೈಲರ್ ನೋಡಿದ ಪ್ರತಿಯೊಬ್ಬ ವೀಕ್ಷಕ ಕೂಡ ಈ ಸಿನಿಮಾ ಕನ್ನಡಿಗರ ಮನ ಮುಟ್ಟುವುದು ಖಚಿತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

  ಇನ್ನು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ನಿನ್ನೆಯಷ್ಟೇ ( ಸೆಪ್ಟೆಂಬರ್ 19 ) ಚಿತ್ರದ ಫೈನಲ್ ಕಾಪಿ ನೋಡಿದ್ದಾಗಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದರು. ಇನ್ನು ಕಾಂತಾರ ಹೇಗಿರಲಿದೆ ಎಂಬ ಕುತೂಹಲ ಸಿನಿ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದಲ್ಲಿದ್ದು ಕಾರ್ತಿಕ್ ಗೌಡ ಅವರ ಈ ಟ್ವೀಟ್‌ಗೆ ಸಿಂಪಲ್ ಸುನಿ ಹಾಗೂ ಡಾಲಿ ಧನಂಜಯ ಸೇರಿದಂತೆ ಹಲವಾರು ಸಿನಿ ಪ್ರೇಕ್ಷಕರು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ನೆಟ್ಟಿಗನೋರ್ವ ಕಾರ್ತಿಕ್ ಗೌಡ ಟ್ವೀಟ್‌ಗೆ ವಿರೋಧ ವ್ಯಕ್ತಪಡಿಸಿ ರಿಪ್ಲೈ ಮಾಡಿದ್ದು, ಈ ಟ್ವೀಟ್‌ಗೆ ಕಾರ್ತಿಕ್ ಗೌಡ ಕೂಡ ಪ್ರತ್ಯುತ್ತ ನೀಡಿದ್ದಾರೆ. ಈ ಟ್ವೀಟ್ ಸರಣಿ ಸದ್ಯ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

  ಕಾಂತಾರ ಫೈನಲ್ ಕಾಪಿ ನೋಡಿ ಹರ್ಷ ವ್ಯಕ್ತಪಡಿಸದಿದ್ದ ಕಾರ್ತಿಕ್ ಗೌಡ

  ಕಾಂತಾರ ಫೈನಲ್ ಕಾಪಿ ನೋಡಿ ಹರ್ಷ ವ್ಯಕ್ತಪಡಿಸದಿದ್ದ ಕಾರ್ತಿಕ್ ಗೌಡ

  ನಿನ್ನೆಯಷ್ಟೇ ಕಾಂತಾರ ಸಿನಿಮಾ ವೀಕ್ಷಿಸಿದ್ದ ಕಾರ್ತಿಕ್ ಗೌಡ ಕಾಂತಾರ ಈ ಮಣ್ಣಿನ ಹೆಮ್ಮೆಯ ಕತೆ, ಇದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ಎಂದು ಟ್ವೀಟ್ ಮಾಡಿ ಬರೆದುಕೊಂಡಿದ್ದರು. ಈ ಟ್ವೀಟ್ ಕಂಡ ಸಿನಿ ಪ್ರೇಕ್ಷಕರು ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಮತ್ತೊಂದು ಬ್ಲಾಕ್‌ಬಸ್ಟರ್ ಬರುವುದು ಖಚಿತ ಎಂದು ಪ್ರತಿಕ್ರಿಯಿಸಿದ್ದರು.

  ಸಾಕು ಬಿಡು ಮೊನ್ನೆ ತಾನೇ ತಮಿಳು ಮೂವಿ ಹಂಚಿದ್ದೆ ಎಂದ ನೆಟ್ಟಿಗ

  ಸಾಕು ಬಿಡು ಮೊನ್ನೆ ತಾನೇ ತಮಿಳು ಮೂವಿ ಹಂಚಿದ್ದೆ ಎಂದ ನೆಟ್ಟಿಗ

  ಇನ್ನು ಕಾರ್ತಿಕ್ ಗೌಡ ಮಾಡಿದ ಟ್ವೀಟ್‌ಗೆ ಸೆಲೆಬ್ರಿಟಿಗಳೂ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಓರ್ವ ನೆಟ್ಟಿಗ ಮಾತ್ರ ಕಾರ್ತಿಕ್ ಗೌಡ ಸಿಲಂಬರಸನ್ ನಟನೆಯ ತಮಿಳು ಚಿತ್ರವನ್ನು ಕರ್ನಾಟಕದಲ್ಲಿ ಹಂಚಿಕೆ ಮಾಡಿದ್ದರ ಕುರಿತು ರಿಪ್ಲೇ ಮಾಡುವ ಮೂಲಕ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಮೂವಿ, ಕನ್ನಡಿಗರನ್ನು ಭಾವನಾತ್ಮಕವಾಗಿ ಗೆಲ್ಲಲು ಮತ್ತೊಂದು ಹೆಮ್ಮೆ ಟ್ಯಾಗ್ ಎಂದು ಬರೆದುಕೊಂಡಿರುವ ಈ ನೆಟ್ಟಿಗ ಸಾಕು ಬಿಡೋ ಮೊನ್ನೆ ತಾನೇ ತಮಿಳು ಮೂವಿ ವಿತರಿಸಿ ಇವತ್ತು ಕನ್ನಡ ಹೆಮ್ಮೆ ಎನ್ನಬೇಡ, ಈ ಚಿತ್ರ ನೋಡಲು ರಿಷಭ್ ಶೆಟ್ಟಿ ಕಾರಣ ಹೊರತು ಬೇರೆ ಯಾವುದೇ ಹೆಮ್ಮೆ ಟ್ಯಾಗ್ ಅಲ್ಲ ಎಂದಿದ್ದಾರೆ.

  ಕಾರ್ತಿಕ್ ಗೌಡ ತರಾಟೆ

  ಕಾರ್ತಿಕ್ ಗೌಡ ತರಾಟೆ

  ಇನ್ನು ಈ ರೀತಿಯ ಟ್ವೀಟ್ ಮಾಡಿದ ನೆಟ್ಟಿಗನೋರ್ವನಿಗೆ ರಿಪ್ಲೈ ಮಾಡಿದ ಕಾರ್ತಿಕ್ ಗೌಡ ಆ ನೆಟ್ಟಿಗನ ಕಾಲನ್ನು ಎಳೆದಿದ್ದಾರೆ. ಆ ನೆಟ್ಟಿಗ ತನ್ನ ಟ್ವೀಟ್‌ನಲ್ಲಿ ಹೆಮ್ಮೆ ಎಂದು ಬಳಸುವ ಬದಲಾಗಿ ಎಮ್ಮೆ ಎಂದು ಬಳಸಿದ್ದನ್ನು ಸರಿಪಡಿಸಿದ ಕಾರ್ತಿಕ್ ಗೌಡ ಅದು ಎಮ್ಮೆ ಅಲ್ಲ ಹೆಮ್ಮೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಾರ್ತಿಕ್ ಗೌಡ ತನ್ನ ವಿರುದ್ಧವಾಗಿ ಟ್ವೀಟ್ ಮಾಡುವವರ ಮಾತುಗಳನ್ನು ಪರಿಗಣಿಸುವುದಿಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

  ದೊಡ್ಡ ಮಟ್ಟದಲ್ಲಿ ಕಾಂತಾರ ರಿಲೀಸ್

  ದೊಡ್ಡ ಮಟ್ಟದಲ್ಲಿ ಕಾಂತಾರ ರಿಲೀಸ್

  ಇನ್ನು ಕಾಂತಾರ ಸಿನಿಮಾವನ್ನು ಇತೆರೆ ಭಾಷೆಗಳಿಗೆ ಡಬ್ ಮಾಡದೇ ಕನ್ನಡದಲ್ಲಿಯೇ ವಿಶ್ವದಾದ್ಯಂತ ಬಿಡುಗಡೆ ಮಾಡುವತ್ತ ಹೆಜ್ಜೆ ಇಟ್ಟಿವೆ ಹೊಂಬಾಳೆ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸಿನಿಮಾಸ್. ಹೋಮ್ ಸ್ಕ್ರೀನ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ 'ಕಾಂತಾರ' ಚಿತ್ರದ ಓವರ್‌ಸೀಸ್ ರೈಟ್ಸ್ ಕೊಂಡುಕೊಂಡಿದೆ. ಯುಎಸ್‌ನಲ್ಲಿ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಒಂದು ದಿನ ಮೊದಲೇ ಅಂದರೆ ಸೆಪ್ಟೆಂಬರ್ 29ಕ್ಕೆ ಕೆಲವೆಡೆ ಪ್ರೀಮಿಯರ್‌ ಶೋಗಳು ಶುರುವಾಗಲಿದೆ.

  English summary
  Co producer Karthik Gowda slams netizen for trolling Kantara movie on twitter. Read on,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X