»   » ಆ ಕರಾಳ ರಾತ್ರಿಗಾಗಿ ಬದಲಾದ ಜೆಕೆ-ಅನುಪಮ

ಆ ಕರಾಳ ರಾತ್ರಿಗಾಗಿ ಬದಲಾದ ಜೆಕೆ-ಅನುಪಮ

Posted By:
Subscribe to Filmibeat Kannada

ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮುಗಿಸಿ ಬಂದ ನಂತರ ನಿರ್ದೇಶಕ ದಯಾಳ್ ಪದ್ಮನಾಬ್ ಹೊಸ ಸಿನಿಮಾವನ್ನ ಪ್ರಾರಂಭ ಮಾಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇತ್ತೀಚಿಗಷ್ಟೇ ಆ ಕರಾಳ ರಾತ್ರಿ ಸಿನಿಮಾ ಮಹೂರ್ತ ಮಾಡಿದ ನಿರ್ದೇಶಕರು ಈಗಾಗಲೇ ಚಿತ್ರದ ಮೊದಲ ಹಂತದ ಶೂಟಿಂಗ್ ಆರಂಭ ಮಾಡಿದ್ದಾರೆ. ಸಿನಿಮಾಗಾಗಿ ನಟ ಜೆಕೆ ಹಾಗೂ ಅನುಪಮ ಗೌಡ ಚಿತ್ರಕ್ಕಾಗಿ ಕಂಪ್ಲಿಟ್ ಬದಲಾಗಿದ್ದಾರೆ.

ಥ್ರಿಲ್ಲರ್ ,ಎಮೋಷನಲ್ ಕಥಾಹಂದರವಿರೋ ಆ ಕರಾಳ ರಾತ್ರಿ ಸಿನಿಮಾಗಾಗಿ ಜೆಕೆ ಮತ್ತು ಅನುಪಮ ಲುಕ್ ಬದಲಾಯಿಸಿದ್ದು ಇಬ್ಬರು ಡಿಫ್ರೆಂಟ್ ಗೆಟಪ್ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಜೆಕೆ 80 ರ ದಶಕದ ನಾಯಕನಂತೆ ಲುಕ್ ಬದಲಾಯಿಸಿಕೊಂಡರೆ ಅನುಪಮ ಹಳ್ಳಿಯಲ್ಲಿರುವ ಸಾಮಾನ್ಯ ಹೆಣ್ಣು ಮಗಳಂತೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Karthik Jayaram and Anupama changed Look for Aa Karaka Ratri movie,

ಮೋಹನ್ ಅವರು ನಿರ್ದೇಶಿಸಿದ್ದ ನಾಟಕದ ಆ ಕರಾಳ ರಾತ್ರಿ ಎಂಬ ಕಥಾವಸ್ತುವನ್ನೇ ತಮ್ಮ ಚಿತ್ರಕ್ಕೆ ದಯಾಳ್ ಪದ್ಮನಾಭನ್ ಅವರು ಅಳವಡಿಸಿಕೊಂಡಿದ್ದಾರೆ. ರಂಗಾಯಣರಘು ಹಾಗೂ ವೀಣಾಸುಂದರ್ ಅವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರಕ್ಕೆ ನವೀನ್ ಕೃಷ್ಣ ಚಿತ್ರಕಥೆ, ಸಂಭಾಷಣೆಯಲ್ಲಿ ಬರೆಯುವಲ್ಲಿ ದಯಾಳ್ ಅವರಿಗೆ ಸಾಥ್ ನೀಡುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ.

Karthik Jayaram and Anupama changed Look for Aa Karaka Ratri movie,

ಸದ್ಯ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಸಿನಿಮಾತಂಡ ಆದಷ್ಟು ಬೇಗ ಶೂಟಿಂಗ್ ಮುಗಿಸಿ ಪ್ರೇಕ್ಷಕರ ಮುಂದೆ ಬರುವ ತಯಾರಿ ಮಾಡಿಕೊಳ್ಳುತ್ತಿದೆ, ಮೊದಲ ಬಾರಿಗೆ ಜೆಕೆ ಮತ್ತು ಅನುಪಮ ಕಾಂಬಿನೇಶನ್ ಹೇಗಿರುತ್ತದೆ ಅನ್ನುವುದನ್ನ ಕಾದು ನೋಡಬೇಕಾಗಿದೆ.

English summary
Kannada movie Aa Karaka Ratri movie shooting start. Karthik Jayaram and Anupama have changed Look for Aa Karaka Ratri movie, Dayal Padmanabhan is directing the cinema.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada