»   » ಬಿಗ್‌ ಬಾಸ್‌ ಶೋ ಮೇಲೆ ಬೇಸರಗೊಂಡ ಜೆ.ಕೆ: ಕಾರಣವೇನು?

ಬಿಗ್‌ ಬಾಸ್‌ ಶೋ ಮೇಲೆ ಬೇಸರಗೊಂಡ ಜೆ.ಕೆ: ಕಾರಣವೇನು?

Posted By:
Subscribe to Filmibeat Kannada

'ಬಿಗ್ ಬಾಸ್' ಮುಗಿಸಿದ ನಂತರ ನಟ ಕಾರ್ತಿಕ್ ಜಯರಾಂ ಕಾರ್ಯಕ್ರಮದ ಬಗ್ಗೆ ಬೇಸರಗೊಂಡಿದ್ದಾರೆ. 106 ದಿನ ಬಿಗ್ ಬಾಸ್ ಮನೆಯಲ್ಲಿದ್ದ ಜೆಕೆ, ತಮ್ಮ ಟ್ಯಾಲೆಂಟ್ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದರು. ಸ್ಪರ್ಧಿಗಳ ಜೊತೆ ತುಂಬ ಚೆನ್ನಾಗಿ ನಡೆದುಕೊಂಡರು. ಆದ್ರೆ, ಫಿನಾಲೆಯಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ.

ಇದರಿಂದ ಕಾರ್ತಿಕ್ ಜಯರಾಂ ಅವರು ಯಾವುದೇ ಬೇಸರ ವ್ಯಕ್ತಪಡಿಸಿರಲಿಲ್ಲ. ಮೂರನೇ ಸ್ಥಾನವನ್ನ ಬಹಳ ಖುಷಿಯಿಂದ ಸ್ವಾಗತಿಸಿದ್ದರು. ಆದ್ರೆ, ಬಿಗ್ ಬಾಸ್ ಬಗ್ಗೆ ಬೇರೆಯದ್ದೇ ಕಾರಣಕ್ಕೆ ಜೆ.ಕೆ ಬೇಸರ ಮಾಡಿಕೊಂಡಿರುವ ಬಗ್ಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಅಷ್ಟಕ್ಕೂ, ಬಿಗ್ ಬಾಸ್ ಶೋ ಮೇಲೆ ಕಾರ್ತಿಕ್ ಜಯರಾಂ ಬೇಸರಗೊಳ್ಳಲು ಕಾರಣವೇನು? ಯಾವ ಒಂದು ಘಟನೆಯಿಂದ ಜೆಕೆ ಮನಸ್ಸಿಗೆ ನೋವಾಗಿದೆ? ಈ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಸರಿಯಾಗಿ ತೋರಿಸಿಲ್ಲ

''ಬಿಗ್ ಬಾಸ್ ಮನೆಯಲ್ಲಿ ನಾವು ಮಾಡಿರುವ ಇನ್ನು ಒಳ್ಳೆ ಕೆಲಸಗಳನ್ನ ತೋರಿಸಿದ್ರೆ ಇನ್ನು ಖುಷಿ ಆಗ್ತಿತ್ತು. ಹೋಗಿರುವ ಉದ್ದೇಶಕ್ಕೆ ಸಂತೋಷ ಆಗ್ತಿತ್ತು. ಅದನ್ನ ತೋರಿಸಲ್ಲ ಅಂತ ತುಂಬ ಬೇಜಾರಾಗಿದೆ'' - ಜೆಕೆ

ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ನಟ ಜಯರಾಂ ಕಾರ್ತಿಕ್.!

ನನ್ನ ಮತ್ತು ಶ್ರುತಿ ದೃಶ್ಯವೇ ಹೆಚ್ಚಿದೆ

''ನೋಡೋ ದೃಷ್ಟಿ ಒಂದೇ ಕಡೆ ಹೋಗಿದೆ. ನನ್ನ ಮತ್ತು ಶ್ರುತಿ ದೃಶ್ಯಗಳು, ಅಥವಾ ಬೆಡ್ ರೂಂನಲ್ಲಿ ಕೂತಿರುವ ದೃಶ್ಯಗಳು, ಜೆಕೆ ಏನೂ ಕೆಲಸ ಮಾಡ್ತಿಲ್ಲ ಎನ್ನುವುದು ಬಿಟ್ರೆ, ಬೇರೆ ಏನೂ ತೋರಿಸಿಲ್ಲ. ಬೇರೆ ಕೆಲಸಗಳನ್ನ ತೋರಿಸಿದ್ರೆ ತುಂಬ ಹ್ಯಾಪಿ ಆಗ್ತಿತ್ತು'' - ಜೆಕೆ

ಜಯರಾಂ ಕಾರ್ತಿಕ್ ಮನಗೆದ್ದ ಚೆಲುವೆ ಶ್ರುತಿ ಪ್ರಕಾಶ್ ಅಲ್ಲ.! ಮತ್ಯಾರು.?

ಎಂಟರ್ ಟೈನ್ಮೆಂಟ್ ನನ್ನ ದೃಷ್ಟಿ ಆಗಿತ್ತು

''ತುಂಬ ಎಂಟರ್ ಟೈನ್ಮೆಂಟ್ ಇತ್ತು. ಅದು ಯಾರಿಗೂ ಗೊತ್ತಿಲ್ಲ. ನಾನು ಮೈಂಡ್ ನಲ್ಲಿ ಇಟ್ಕೊಂಡಿದ್ದೇ. ಜನ ನೋಡ್ತಿರ್ತಾರೆ. ಅವರನ್ನ ರಂಜಿಸುವುದು ಮುಖ್ಯ. ಟ್ರೋಫಿ ಗೆಲ್ಲುವುದಲ್ಲ ಅಂತ. ಬಟ್ ಅದೆಲ್ಲಾ ಬಂದೇ ಇಲ್ಲ ಎನ್ನುವುದು ನೋವಾಗಿದೆ''

ಆ ಒಂದು ಘಟನೆ ಮಾತ್ರ ತುಂಬ ನೋವು ತಂದಿದೆ

''ಬಿಗ್ ಬಾಸ್ ಮನೆಯಲ್ಲಿ 'ಅಶ್ವಿನಿ ನಕ್ಷತ್ರ', 'ಪುಟ್ಟಗೌರಿ ಮದುವೆ', 'ಅಗ್ನಿಸಾಕ್ಷಿ', 'ಲಕ್ಷ್ಮಿ ಬಾರಮ್ಮ' ಧಾರಾವಾಹಿಗಳ ಬಗ್ಗೆ ಅಭಿನಯ ಮಾಡಿದ್ವಿ. ಆದ್ರೆ, ಅದರಲ್ಲಿ 'ಅಶ್ವಿನಿ ನಕ್ಷತ್ರ' ಫರ್ಫಾಮೆನ್ಸ್ ಟೆಲಿಕಾಸ್ಟ್ ಆಗಿಲ್ಲ. ನಾನು ಮನೆಗೆ ಬಂದ್ಮೇಲೆ ವೂಟ್ ನಲ್ಲಿ ಹುಡುಕಿದೆ. ಇರಲಿಲ್ಲ. ಅದು ತುಂಬ ಬೇಜಾರಾಯಿತು''

ಸುದೀಪ್ ದಂಪತಿಗೆ 'ಜೆಕೆ' ಧನ್ಯವಾದ ಹೇಳಿದ್ದೇಕೆ?

English summary
Bigg boss kannada 5 finale contestant Karthik jayaram is bored about Big Boss show.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X