For Quick Alerts
  ALLOW NOTIFICATIONS  
  For Daily Alerts

  ಜೆಕೆ: ಕಿರುತೆರೆ 'ಸೂಪರ್ ಸ್ಟಾರ್' ಬೆಳ್ಳಿತೆರೆ 'ಹೀರೋ'

  By Mahesh
  |

  ಕಿರುತೆರೆಯಲ್ಲಿ 'ಸೂಪರ್ ಸ್ಟಾರ್' ಆದ ಮೇಲೆ ನಟ ಕಾರ್ತಿಕ್ ಜಯರಾಂಗೆ ಲಕ್ ತಿರುಗಿದೆ. ಸೂಪರ್ ಸ್ಟಾರ್ ಜೆಕೆ ಈಗ ಬೆಳ್ಳಿತೆರೆಯ ಮೇಲೆ ಹೀರೋ ಆಗಿ ಮಿಂಚಲು ಸಿದ್ದರಾಗುತ್ತಿದ್ದಾರೆ. ಈಟಿವಿ ಕನ್ನಡದ ಜನಪ್ರಿಯ ಧಾರಾವಾಹಿ 'ಅಶ್ವಿನಿ ನಕ್ಷತ್ರ' ದ ಮುಖ್ಯ ಪಾತ್ರಧಾರಿ ಜಯಕೃಷ್ಣ ಅಲಿಯಾಸ್ ಜೆಕೆ ಈಗ 'ಜಸ್ಟ್ ಲವ್' ನಲ್ಲಿ ಬಿದ್ದಿದ್ದಾರೆ.

  ಕಿಚ್ಚ ಸುದೀಪ್ ಗರಡಿಯ ಪ್ರತಿಭೆ ಕಾರ್ತಿಕ್ ಸಿನಿರಸಿಕರಿಗೆ ಪರಿಚಯವಾಗಿದ್ದು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮೂಲಕ ಎಂದರೆ ತಪ್ಪಾಗಲಾರದು. ಕರ್ನಾಟಕ ಬುಲ್ಡೋಜರ್ಸ್ ತಂಡದ ಪರ ಕಾರ್ತಿಕ್ ಉತ್ತಮ ಪ್ರದರ್ಶನ ನೀಡಿದ್ದರು. ನಂತರ ಸುದೀಪ್ ಅವರ ಕೆಂಪೇಗೌಡ, ವರದನಾಯಕ ಹಾಗೂ ದುನಿಯಾ ವಿಜಯ್ ಅವರ ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಚಿತ್ರಗಳಲ್ಲಿ ನೆಗಟಿವ್ ಶೇಡ್ ಪಾತ್ರಗಳಲ್ಲಿ ಕಾರ್ತಿಕ್ ಮಿಂಚಿದ್ದರು.

  ಇಷ್ಟೆಲ್ಲ ಹಿನ್ನೆಲೆಯುಳ್ಳ ಕಾರ್ತಿಕ್ ಅವರು ಈಗ ಸೂಪರ್ ಸ್ಟಾರ್ ಜೆಕೆ ಪಾತ್ರದ ಮೂಲಕ ಜನಪ್ರಿಯತೆ ಉತ್ತುಂಗಕ್ಕೇರಿದ್ದಾರೆ. ಇದೇ ಜನಪ್ರಿಯತೆ ಕಾರ್ತಿಕ್ ಬೆಳ್ಳಿತೆರೆಗೆ ಹೀರೋ ಆಗಿ ಎಂಟ್ರಿ ಕೊಡಲು ಸಹಾಯಕವಾಗಿದೆ. ಕಾರ್ತಿಕ್ ಅವರು ನಾಗೇಂದ್ರ ಅರಸ್ ನಿರ್ದೇಶನದ 'ಜಸ್ಟ್ ಲವ್' ಹೆಸರಿನ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

  Karthik Jayaram Turns Hero

  'ಜಸ್ಟ್ ಲವ್ ಚಿತ್ರದ ಹೆಸರೇ ಸೂಚಿಸುವಂತೆ ಪ್ರೇಮ ಕಥಾನಕವಾಗಿದೆ. ಆದರೆ, ಇಲ್ಲಿ ನಾಯಕ-ನಾಯಕಿ ನಡುವಿನ ಪ್ರೇಮ ಸಂಬಂಧದ ಕಥೆ ಮಾತ್ರ ಇರುವುದಿಲ್ಲ. ಇಬ್ಬರ ಗೆಳೆಯರು, ಅಪ್ಪ -ಮಗ ಹೀಗೆ ಸಂಬಂಧಗಳ ನಡುವಿನ ಪ್ರೇಮವೇ ಚಿತ್ರದ ಕಥೆಯಾಗಿದೆ' ಎಂದು ಕಾರ್ತಿಕ್ ಚಿತ್ರದ ಬಗ್ಗೆ ಹೇಳಿದ್ದಾರೆ.

  ಕಾರ್ತಿಕ್ ಅವರು ಇದಕ್ಕೂ ಮುನ್ನವೇ ಹೀರೋ ಆಗೋ ಯೋಗ ಕೂಡಿ ಬಂದಿತ್ತು. ಕುಚಿಕು ಕುಚಿಕು ಎಂಬ ಹೆಸರಿನ ಚಿತ್ರವನ್ನು ಡಿ ರಾಜೇಂದ್ರ ಬಾಬು ಅವರು ನಿರ್ದೇಶನ ಮಾಡುವುದು ಎಂದು ನಿಗದಿಯಾಗಿತ್ತು. ಆದರೆ, ರಾಜೇಂದ್ರ ಬಾಬು ಅವರ ಅಗಲಿಕೆಯಿಂದ ಚಿತ್ರ ನೆನಗುದಿಗೆ ಬಿದ್ದಿದೆ.

  ಇದಲ್ಲದೆ ಕಾರ್ತಿಕ್ ಅವರು ಕೇರ್ ಆಫ್ ಫುಟ್ ಪಾತ್ ಭಾಗ 2 ರಲ್ಲಿ ಭ್ರಷ್ಟಾಚಾರಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 2006ರಲ್ಲಿ ತೆರೆ ಕಂಡ ಮಾಸ್ಟರ್ ಕಿಶನ್ ನಿರ್ದೇಶನದ ಕೇರ್ ಆಫ್ ಫುಟ್ಪಾತ್ ಚಿತ್ರದ ಮುಂದುವರೆದ ಭಾಗ ಇದಾಗಿದೆ.

  English summary
  Actor Karthik Jayaram aka JK, who has become household name in Karnataka with his appearance in ETV Kannada Serial Ashwini Nakshatra, has turned hero for Sandalwood's forthcoming movie. The film Just Love, directed by Nagendra Urs will see Karthik in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X