For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ಹೊಸ್ತಿಲಲ್ಲಿ ಬಿಡುಗಡೆ ಆಗಲಿದೆ 'ಡಾ.ಶಿವರಾಜ್ ಕುಮಾರ್ ಯಶೋಗಾಥೆ'

  By Harshitha
  |

  ಹ್ಯಾಟ್ರಿಕ್ ಹೀರೋ... ಸೆಂಚುರಿ ಸ್ಟಾರ್... ಕರುನಾಡ ಚಕ್ರವರ್ತಿ... ಅಣ್ಣಾವ್ರ ಮಗ... ಡಾ.ಶಿವರಾಜ್ ಕುಮಾರ್ ರವರ ಜೀವನ ಚರಿತ್ರೆ ಸಾರುವ ಪುಸ್ತಕವನ್ನು ಪತ್ರಕರ್ತ ಮತ್ತು ಛಾಯಾಗ್ರಾಹಕರಾದ ಜನಾರ್ಧನ ರಾವ್ ಸಾಳಂಕೆ ಬರೆದಿದ್ದಾರೆ. ಪುಸ್ತಕದ ಹೆಸರು 'ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಯಶೋಗಾಥೆ'.

  ಶಿವಣ್ಣನ ಬಾಲ್ಯದ ದಿನಗಳು, ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣ, ಕಾಲೇಜು, ಚಿತ್ರರಂಗ ಪ್ರವೇಶ, ಚಿತ್ರ ಜೀವನ, ದಾಖಲೆಗಳು ಇತ್ಯಾದಿಗಳ ಬಗ್ಗೆ 'ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಯಶೋಗಾಥೆ' ಪುಸ್ತಕದಲ್ಲಿ ಉಲ್ಲೇಖವಿದೆ.

  ಪುಸ್ತಕದಲ್ಲಿ ಶಿವಣ್ಣ ಅವರ ಅಪರೂಪದ ಫೋಟೋಗಳನ್ನೂ ನೀವು ಕಾಣಬಹುದು. ಬಹುಶಃ ಇದು ಶಿವಣ್ಣನ ಬಗ್ಗೆ ಹೊರಬರುತ್ತಿರುವ ಪೂರ್ಣಪ್ರಮಾಣದ ಮೊದಲ ಪುಸ್ತಕ.

  ಕರುನಾಡ ಚಕ್ರವರ್ತಿ ಶಿವಣ್ಣ ಯಶೋಗಾಥೆ ಬಗ್ಗೆ ಬರಲಿದೆ ಪುಸ್ತಕ ಕರುನಾಡ ಚಕ್ರವರ್ತಿ ಶಿವಣ್ಣ ಯಶೋಗಾಥೆ ಬಗ್ಗೆ ಬರಲಿದೆ ಪುಸ್ತಕ

  ಪ್ರಕಾಶಕರಾದ ಸುರೇಶ್ ಅವರು ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಮುಖಾಂತರ ಈ ಪುಸ್ತಕವನ್ನು ಹೊರತರುತ್ತಿದ್ದಾರೆ. ಪುಸ್ತಕದಲ್ಲಿ ಸುಮಾರು 300 ಪುಟಗಳು ಇದ್ದು, 32 ಪುಟಗಳು ಬಣ್ಣದ ಫೋಟೋಗಳಿಗಾಗಿಯೇ ಮೀಸಲಿಡಲಾಗಿದೆ. ಶಿವಣ್ಣನ ಹುಟ್ಟುಹಬ್ಬದ ಹೊಸ್ತಿಲಲ್ಲಿ ಈ ಪುಸ್ತಕ ಬಿಡುಗಡೆ ಆಗಲಿದೆ.

  ಶಿವಣ್ಣನ ಅಭಿಮಾನಿಗಳು ಈ ಪುಸ್ತಕಕ್ಕಾಗಿ ಎದುರು ನೋಡುತ್ತಿದ್ದಾರೆ.

  English summary
  Karunada Chakravarthi Dr.Shiva Rajkumar Yashogathe book written by Janardhan Rao Salanke to release in July.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X