»   » ಕರುಣಾಮಯಿ ಡಾ ವಿಷ್ಣುವರ್ಧನ್ ಪುಸ್ತಕ ಬಿಡುಗಡೆ

ಕರುಣಾಮಯಿ ಡಾ ವಿಷ್ಣುವರ್ಧನ್ ಪುಸ್ತಕ ಬಿಡುಗಡೆ

Posted By:
Subscribe to Filmibeat Kannada
'ಮರೆಯದ ಮಾಣಿಕ್ಯ- ಯಜಮಾನ್ರು ಡಾ ವಿಷ್ಣುವರ್ಧನ್' ಹಾಗೂ 'ಸಿಂಹ ಗರ್ಜನೆ' ಎಂಬ ಎರಡು ಪುಸ್ತಕಗಳನ್ನು ದಿವಂಗತ ನಟ ವಿಷ್ಣುವರ್ಧನ್ ಮೇಲೆ ಬರೆದು ಪ್ರಕಟಿಸಿದ್ದ ಲೇಖಕ ಜನಾರ್ಧನ್ ರಾವ್ ಸಾಲಂಕೆ, ಇದೀಗ ತಮ್ಮ ಮೂರನೇ ಪುಸ್ತಕದ ಬಿಡುಗಡೆಗೆ ಸಜ್ಜಾಗಿದ್ದಾರೆ. ಇದೂ ಕೂಡ ನಟ ವಿಷ್ಣುವರ್ಧನ್ ಮೇಲೆಯೇ ಬರೆದ ಪುಸ್ತಕ. ಹೆಸರು 'ಕರುಣಾಮಯಿ ಡಾ ವಿಷ್ಣುವರ್ಧನ್'.

"ಬರಲಿರುವ ಈ ಪುಸ್ತಕದಲ್ಲಿ ವಿಷ್ಣುವರ್ಧನ್ ಅವರ ಬಗ್ಗೆ ಜಗತ್ತಿಗೆ ಗೊತ್ತಿರದಿದ್ದ ಅದೆಷ್ಟೋ ವಿಷಯಗಳ ಮೇಲೆ ಬೆಳಕು ಚೆಲ್ಲಲಾಗಿದೆ. ವಿಷ್ಣು ಪತ್ನಿ ಭಾರತಿ, ಪತ್ರಕರ್ತರು, ವಿಷ್ಣು ಕುಟುಂಬಸ್ಥರು ಹಾಗೂ ಆಪ್ತರನ್ನು ಸಂಪರ್ಕಿಸಿ ಅವರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಲಾಗಿದೆ. ಅವರು ಅನುಸರಿಸುತ್ತಿದ್ದ ಉನ್ನತ ಮೌಲ್ಯಗಳು ಹಾಗು ಅವುಗಳಿಂದ ಸಮಾಜಕ್ಕಾದ ಲಾಭ ಇವುಗಳ ದೃಷ್ಟಿಕೋನವನ್ನಿಟ್ಟು ನಾನಿಲ್ಲಿ ಬರೆದಿದ್ದೇನೆ" ಎಂದಿದ್ದಾರೆ ಜನಾರ್ಧನ ರಾವ್ ಸಾಲಂಕೆ.

ಈ ಮೊದಲು ಬಂದಿದ್ದ ಅವರದೇ ಎರಡು ಪುಸ್ತಕಗಳಿಗಿಂತ ಈ ಪುಸ್ತಕ ಹೇಗೆ ಭಿನ್ನ ಎಂಬುದನ್ನೂ ಅವರು ವಿವರಿಸಿದ್ದಾರೆ. "ಮರೆಯದ ಮಾಣಿಕ್ಯ ಪುಸ್ತಕ ವಿಷ್ಣುರ ಆತ್ಮಚರಿತ್ರೆಯನ್ನು ಒಳಗೊಂಡಿದ್ದರೆ ಸಿಂಹ ಗರ್ಜನೆ, ಡಾ ವಿಷ್ಣು ನಮ್ಮನ್ನಗಲಿದ ಮೇಲೆ ಡಿಸೆಂಬರ್ 30, 2009 ರಿಂದ ಡಿಸೆಂಬರ್ 30, 2011 ರ ನಡುವೆ ನಡೆದ ಕೆಲವು ಪ್ರಮುಖ ಘಟನೆಗಳನ್ನು ಆಧರಿಸಿದೆ.

ಆದರೆ, ಬರಲಿರುವ 'ಕರುಣಾಮಯಿ ಡಾ ವಿಷ್ಣುವರ್ಧನ್' ಇವೆಲ್ಲವುಗಳಿಗಿಂತ ತೀರಾ ಭಿನ್ನವಾಗಿದೆ. ಇದು ಇಲ್ಲಿಯವೆರಗೂ ಯಾರು ಮಾಡಿದಿರುವ ಪ್ರಯತ್ನವಾಗಿದ್ದು ಇದರಲ್ಲಿ ಅವರನ್ನು ಚೆನ್ನಾಗಿ ಬಲ್ಲ ಗಣ್ಯ ವ್ಯಕ್ತಿಗಳು ವಿಷ್ಣು ಬಗ್ಗೆ ಮಾತನಾಡಿದ್ದಾರೆ. ವಿಷ್ಣು ಪ್ರತಿಪಾದಿಸುತ್ತಿದ್ದ ಮೌಲ್ಯಗಳು ನಮ್ಮ ಏಳ್ಗೆಗೆ ಹೇಗೆ ದಾರಿದೀಪವಾಗಬಲ್ಲದು ಎಂಬುದನ್ನು ಇದರಲ್ಲಿ ಹೇಳಿದ್ದೇನೆ" ಎಂದಿದ್ದಾರೆ.

ಇಷ್ಟೇ ಅಲ್ಲ, "ಪ್ರತಿ ವರ್ಷ ತಲಾ ಒಂದು ಪುಸ್ತಕವನ್ನು ನಾನು ವಿಷ್ಣು ಮೇಲಿಟ್ಟ ನಂಬಿಕೆ ಹಾಗೂ ಪ್ರೀತಿಯ ದ್ಯೋತಕವಾಗಿ ಪ್ರಕಟಿಸಲಿದ್ದೇನೆ. ವಿಷ್ಣು ಮೇಲಿನ ತಮ್ಮ ಪ್ರೀತಿ ನಿರಂತರ. ಈ 'ಕರುಣಾಮಯಿ ಡಾ ವಿಷ್ಣುವರ್ಧನ್' ಪುಸ್ತಕ ಸೆಪ್ಟೆಂಬರ್ 18, 2012 ರಂದು ಬಿಡುಗಡೆಯಾಗಲಿದೆ. ಈ ಪುಸ್ತಕದ ಬೆಲೆ ಸುಮಾರು ರು. 100 ರಿಂದ ರು 140 ಆಗಬಹುದು" ಎಂದಿದ್ದಾರೆ ಬರಹಗಾರ ಜನಾರ್ಧನ ರಾವ್ ಸಾಲಂಕೆ . (ಒನ್ ಇಂಡಿಯಾ ಕನ್ನಡ)

English summary
Janardhana Rao Salanke, who had authored two books, Mareyada Manikya and Simha Garjame is ready with his third book Karunamayi Vishnuvardhan. 
 
Please Wait while comments are loading...