For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗದಿಂದ ಟ್ವಿಟ್ಟರ್ ನಲ್ಲಿ ಕಾಶಿನಾಥ್ ಗೆ ಅಶ್ರುತರ್ಪಣ

  By Pavithra
  |

  ಕನ್ನಡ ಸಿನಿಮಾರಂಗದ ಅಜಾತಶತ್ರು, ಸ್ವಂತಿಕೆಯಿಂದ ಮೆರೆದ ನಿರ್ದೇಶಕ, ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ ಮಾಡಿದ ನಟ ಕಾಶಿನಾಥ್ ಅವರ ಅಗಲಿಕೆ ಕನ್ನಡ ಸಿನಿಮಾರಂಗಕ್ಕೆ ತುಂಬಲಾರದಂತ ನಷ್ಟವನ್ನ ಉಂಟು ಮಾಡಿದೆ.

  ನಟ, ನಿರ್ದೇಶಕ ಕಾಶಿನಾಥ್ ವಿಧಿವಶ

  ಸಾಕಷ್ಟು ಕಲಾವಿದರನ್ನ ಚಿತ್ರರಂಗಕ್ಕೆ ಪರಿಚಯಿಸುವ ಮೂಲಕ ಇಂದಿಗೂ ಕೂಡ ವಿಭಿನ್ನ ಸಿನಿಮಾಗಳನ್ನ ಪ್ರೇಕ್ಷಕರಿಗೆ ನೋಡಲು ಸಿಗುವಂತೆ ಮಾಡಿದ ಕೀರ್ತಿ ಕಾಶಿನಾಥ್ ಅವರಿಗೆ ಸಲ್ಲುತ್ತದೆ.

  ಅಪಾರ ಅಭಿಮಾನಿ ಬಳಗವನ್ನ ಬಿಟ್ಟು ಹೋಗಿರುವ ಕಾಶಿನಾಥ್ ಇನ್ನು ಮುಂದೆ ನೆನಪು ಮಾತ್ರ. ಕಾಶಿನಾಥ್ ಅವರ ನಿಧನಕ್ಕೆ ಇಡೀ ಕನ್ನಡ ಸಿನಿಮಾರಂಗ ಕಣ್ಣಿರಿಟ್ಟಿದ್ದು ಟ್ವಿಟ್ಟರ್ ಮೂಲಕ ಅಗಲಿದ ನಟನಿಗೆ ಶ್ರದ್ಧಾಂಜಲಿ ಅರ್ಪಿಸಿದೆ.

  ಆಘಾತವಾಗಿದೆ ಎಂದ ಪ್ರಿಯಾಂಕ ಉಪೇಂದ್ರ

  ಆಘಾತವಾಗಿದೆ ಎಂದ ಪ್ರಿಯಾಂಕ ಉಪೇಂದ್ರ

  ಕಾಶಿನಾಥ್ ಅವರ ನಿಧನ ವಾರ್ತೆ ತಿಳಿದ ತಕ್ಷಣ "ನಿಜಕ್ಕೂ ಈ ವಿಚಾರ ಆಘಾತಕಾರಿ ಆಗಿದೆ ಮತ್ತು ತುಂಬಾ ದುಃಖ ತರುತ್ತಿದೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಕಾಶಿನಾಥ್ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ ಪ್ರಿಯಾಂಕ ಉಪೇಂದ್ರ

  ಕಣ್ಮರೆಯಾದ ಕಲಾಯೋಗಿ ಕಾಶಿನಾಥ್ ಅಪರೂಪದ ಚಿತ್ರಸಂಪುಟ

  ಪ್ರತಿಭಾವಂತ ನಟನಿಗೆ ನಮನ ಎಂದ ಪುನೀತ್ ರಾಜ್ ಕುಮಾರ್

  ಪ್ರತಿಭಾವಂತ ನಟನಿಗೆ ನಮನ ಎಂದ ಪುನೀತ್ ರಾಜ್ ಕುಮಾರ್

  ಕಾಶಿನಾಥ್ ಅವರ ಬಗ್ಗೆ ಟ್ವೀಟ್ ಮಾಡಿರುವ ನಟ ಪುನೀತ್ ರಾಜ್ ಕುಮಾರ್ 'ವಿಭಿನ್ನ ಹಾಗೂ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ ಇನ್ನು ನೆನಪು ಮಾತ್ರ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ' ಎಂದಿದ್ದಾರೆ.

  ಕಲಾವಿದನಿಗೆ ಸಾವು ದೇಹಕ್ಕೆ ಮಾತ್ರ ಎಂದ ಜಗ್ಗೇಶ್

  ಕಲಾವಿದನಿಗೆ ಸಾವು ದೇಹಕ್ಕೆ ಮಾತ್ರ ಎಂದ ಜಗ್ಗೇಶ್

  ಅಪಾರ ಅಭಿಮಾನಿಗಳ ಸಮೂಹವನ್ನ ಅಗಲಿದ ಕಾಶಿನಾಥ್ ಅವರ ಬಗ್ಗೆ ನಟ ಜಗ್ಗೇಶ್ ಅರ್ಥಪೂರ್ಣವಾಗಿ ಟ್ವೀಟ್ ಮಾಡಿದ್ದಾರೆ. ''ಕಲಾವಿದನಿಗೆ ಸಾವು ದೇಹಕ್ಕೆ ಮಾತ್ರ. ಮಿಕ್ಕಂತೆ ಅವರ ಉಳಿವು ಅಭಿಮಾನಿಗಳ ಹೃದಯದಲ್ಲಿ ಅಜರಾಮರ. ಕಲಾವಿದ ಸತ್ತರೂ ಅವನ ಕಾಯಕ ಜೀವಂತ. ನಿಮ್ಮ ಕಾಯಕ ಬಿಟ್ಟು ಹೋಗಿದ್ದೀರಿ. ನಿಮ್ಮನ್ನ ಕಳೆದುಕೊಂಡ ನೋವು ಭರಿಸುವ ಶಕ್ತಿ ನಿಮ್ಮ ಕುಟುಂಬಕ್ಕೆ ರಾಯರು ನೀಡಲಿ..we all love u sir" ಎಂದಿದ್ದಾರೆ.

  ಹಾಸ್ಯಕ್ಕೆ ಹೊಸ ರಂಗು ನೀಡಿದ ಗುರುವಿಗೆ ನಮನ

  ಹಾಸ್ಯಕ್ಕೆ ಹೊಸ ರಂಗು ನೀಡಿದ ಗುರುವಿಗೆ ನಮನ

  "ಹಾಸ್ಯಕ್ಕೆ ಹೊಸ ರಂಗು ತಂದ ಕಾಶಿನಾಥ್ ನಿರ್ದೇಶಕ ಗುರುಗಳ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ನಿರ್ದೇಶಕ ಸಿಂಪಲ್ ಸುನಿ ಟ್ವಿಟ್ ಮಾಡಿದ್ದಾರೆ.

  ತಲೆಮಾರುಗಳಿಗೆ ನಗಲು ಕಲಿಸಿದ ಚೈತನ್ಯ

  ತಲೆಮಾರುಗಳಿಗೆ ನಗಲು ಕಲಿಸಿದ ಚೈತನ್ಯ

  ನಟಿ ಮಾಳವಿಕ ಅವಿನಾಶ್ "A trendsetter of sorts, he created History with his Anubhava, Guru to several. ಹಲವು ತಲೆಮಾರುಗಳಿಗೆ ನಗಲು ಕಲಿಸಿದ ಚೈತನ್ಯ! Om Shanti" ಎಂದು ಟ್ವೀಟ್ ಮಾಡಿದ್ದಾರೆ.

  English summary
  Kashinath passes away: Condolences from Kannada Stars and fans pour in on Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X