For Quick Alerts
  ALLOW NOTIFICATIONS  
  For Daily Alerts

  ನರ್ತಕಿಯಲ್ಲಿ ಕೈಕೊಟ್ಟ 3D; ಸಂಜೆ ಶೋ ಪ್ರಾರಂಭ

  |

  ಇಂದು (ಮೇ 10, 2012) ಬಿಡುಗಡೆಯಾಗಿರುವ ಕಠಾರಿವೀರ ಸುರಸುಂದರಾಂಗಿ ಚಿತ್ರಕ್ಕೆ ಕರ್ನಾಟಕದಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಬೆಂಗಳೂರಿನ ಪ್ರಮುಖ ಚಿತ್ರಮಂದಿರ ನರ್ತಕಿಯಲ್ಲಿ ಈ ಮೊದಲು ಹೇಳಿದಂತೆ 3ಡಿ ವ್ಯವಸ್ಥೆ ಇರಲಿಲ್ಲ. ರೊಚ್ಚಿಗೆದ್ದ ಪ್ರೇಕ್ಷಕರು ಹಾಗೂ ನಿರ್ಮಾಪಕ ಮುನಿರತ್ನ ನಡುವೆ ಸಾಕಷ್ಟು ವಾಗ್ವಾದ ನಡೆದಿದೆ. ಕೊನೆಗೆ ಬದಲಾದ ವ್ಯವಸ್ಥೆಯಲ್ಲಿ ತ್ರಿಭುವನ್ ಚಿತ್ರಮಂದಿರದಲ್ಲಿ ಪ್ರೇಕ್ಷಕರು 3ಡಿ ಚಿತ್ರವೀಕ್ಷಣೆ ಮಾಡುತ್ತಿದ್ದಾರೆ.

  ನಂತರ ನಡೆದ ಬೆಳವಣಿಗೆಯಲ್ಲಿ ನರ್ತಕಿಯಲ್ಲಿ 3ಡಿಗೆ ಬದಲಾಗಿ ನಡೆಯಬೇಕಿದ್ದ 2ಡಿ ಶೋ ಕೂಡ ರದ್ದಾಗಿದೆ. ಸಂಜೆ 4.30ಕ್ಕೆ ಶೋ ನಡೆಸಲು ತೀರ್ಮಾನಿಸಲಾಗಿದೆ. ಹೀಗಾಗಿ, ಪ್ರಮುಖ ಚಿತ್ರಮಂದಿರದಲ್ಲೇ 3ಡಿಗೆ ವಿಘ್ನ ಎದುರಾದಂತಾಗಿದೆ. ಶೀಘ್ರದಲ್ಲೇ ವಿಘ್ನ ನಿವಾರಣೆಯಾಗಲಿದ್ದು ಸಾಯಂಕಾಲ 4.30ಕ್ಕೆ ಅಲ್ಲಿ ಪ್ರದರ್ಶನ ಪ್ರಾರಂಭವಾಗಲಿದೆ. ಪ್ರೇಕ್ಷಕರು ಅಲ್ಲಿ 3ಡಿಯಲ್ಲಿ ವೀಕ್ಷಿಸಿ ಆನಂದಿಸಬಹುದಾಗಿದೆ.

  ಕೆಜಿ ರಸ್ತೆಯ ತ್ರಿಭುವನ್ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಜೊತೆ ಕುಳಿತು ಚಿತ್ರತಂಡದ ಬಹಳಷ್ಟು ಮಂದಿ ಹಾಗೂ ನಿರ್ಮಾಪಕ ಮುನಿರತ್ನ 3ಡಿ ವ್ಯವಸ್ಥೆಯಲ್ಲಿ ಚಿತ್ರ ವೀಕ್ಷಿಸಿದ್ದಾರೆ. ಪ್ರೇಕ್ಷಕರ ಅದ್ಭುತ ಪ್ರತಿಕ್ರಿಯೆಗೆ ಮುನಿರತ್ನರಿಗೆ ಈ ಮೊದಲೇ ಇದ್ದ ನಿರೀಕ್ಷೆ ಡಬಲ್ ಆಗಿದೆಯಂತೆ. ಒಟ್ಟಿನಲ್ಲಿ ಮೊದಲ ಶೋ ವರದಿಯಂತೆ ರಾಜ್ಯದೆಲ್ಲೆಡೆ ಕಠಾರಿವೀರ ಹಾಗೂ ಸುರಸುಂದರಾಂಗಿಗೆ ಜನ ಮನಸೋತಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Today (10th May 2012) released Kannada movie Katari Veera Surasundarangi got good response all over Karnataka. But, There is Controversy happend in Narthaki theater in Bangalore, because of unavailability of 3D version. Show starts at 4.30PM in Nathaki with 3D.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X