Don't Miss!
- News
ಗ್ವಾಲಿಯರ್ನಲ್ಲಿ ಯುದ್ಧ ವಿಮಾನ ಪತನ; ಬೆಳಗಾವಿ ಮೂಲದ ಯೋಧ ಹುತಾತ್ಮ
- Lifestyle
ವಾರ ಭವಿಷ್ಯ ಜ.29-ಫೆ.4: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Sports
ಫಿಟ್ನೆಸ್ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್ ತೇರ್ಗಡೆ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಬುಮ್ರಾ ವಾಪಸ್?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಜನಿಕಾಂತ್ ನಟನೆಯ ಕನ್ನಡ ಚಿತ್ರಗಳ ಪಟ್ಟಿ; ತನ್ನ 25ನೇ ಚಿತ್ರದಲ್ಲಿ 'ತಲೈವಾ' ಅನಂತ್‌ನಾಗ್ ಎದುರು ವಿಲನ್!
ರಜನಿಕಾಂತ್ ತಮಿಳು ಚಿತ್ರರಂಗದ ಮೇರುನಟ. ಈಗಿನ ತಲೆಮಾರಿನ ನಟರಿದ್ದರೂ ಸಹ ತಮಿಳು ಚಿತ್ರರಂಗದ ನಂಬರ್ ಒನ್ ನಟನಾರು ಎಂದರೆ ಬಹುತೇಕರು ನೀಡುವ ಉತ್ತರ ತಲೈವಾ ರಜನಿಕಾಂತ್ ಎಂದೇ. ಹೀಗೆ ತನ್ನ ಇಳಿವಯಸ್ಸಿನಲ್ಲೂ ಸಹ ಹವಾ ಹೊಂದಿರುವ ರಜನಿಕಾಂತ್ ಅವರಿಗೆ ಇಂದು ( ಡಿಸೆಂಬರ್ 12 ) 72ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.
ಇನ್ನು ತಮಿಳಿನಲ್ಲಿ ಮಿಂಚಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ರಜನಿಕಾಂತ್ ಮೂಲತಃ ಕರ್ನಾಟಕದ ಬೆಂಗಳೂರಿನವರು. 1975ರಲ್ಲಿ ಬಿಡುಗಡೆಗೊಂಡ ಕಮಲ್ ಹಾಸನ್ ಅಭಿನಯದ ಅಪೂರ್ವ ರಾಗಂಗಳ್ ಎಂಬ ತಮಿಳು ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಲಗ್ಗೆ ಇಟ್ಟರು. ನಂತರದ ವರ್ಷದಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಥಾ ಸಂಗಮ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ರಜನಿಕಾಂತ್ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟರು.
ಅವರ
ರೀತಿ
ರಿಷಬ್
ಶೆಟ್ಟಿ
ಆಗುವುದು
ಬೇಡ,
ಎಚ್ಚರಿಕೆ
ನೀಡಿದ
ಬಾಲಿವುಡ್
ಸ್ಟಾರ್
ನಿರ್ದೇಶಕ
ರಜನಿಕಾಂತ್ ಹುಟ್ಟಿ ಬೆಳೆದದ್ದು, ಬಸ್ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸಿದ್ದು ಕರ್ನಾಟಕದಲ್ಲೇ ಆದರೂ ಸಹ ಯಶಸ್ಸು ಸಾಧಿಸಿದ್ದು ಹಾಗೂ ಸೂಪರ್ ಸ್ಟಾರ್ ಆಗಿದ್ದು ಮಾತ್ರ ತಮಿಳಿನಲ್ಲಿ. ಆದರೆ ರಜನಿಕಾಂತ್ ಆರಂಭದ ದಿನಗಳಲ್ಲಿ ಕನ್ನಡದ ಕೆಲ ಚಿತ್ರಗಳಲ್ಲಿಯೂ ಸಹ ನಟಿಸಿ ಇಲ್ಲಿಯೂ ನೆಲೆಯೂರಲು ಪ್ರಯತ್ನಿಸಿದ್ದರು. ಆ ಸಮಯದಲ್ಲಿ ಅನಂತ್ ನಾಗ್, ವಿಷ್ಣುವರ್ಧನ್ ಹಾಗೂ ಅಂಬರೀಶ್ ರೀತಿಯ ದೊಡ್ಡ ನಟರ ಜತೆ ತೆರೆಯನ್ನೂ ಸಹ ಹಂಚಿಕೊಂಡಿದ್ದರು. ಹಾಗಿದ್ದರೆ ರಜನಿಕಾಂತ್ ಕನ್ನಡದ ಯಾವ ಚಿತ್ರಗಳಲ್ಲಿ ನಟಿಸಿದ್ದರು ಹಾಗೂ ಯಾವ ನಟರುಗಳ ಜತೆ ತೆರೆ ಹಂಚಿಕೊಂಡಿದ್ದರು ಎಂಬ ಮಾಹಿತಿ ಈ ಕೆಳಕಂಡಂತಿದೆ..

ರಜನಿಕಾಂತ್ ಅಭಿನಯಿಸಿದ ಕನ್ನಡ ಚಿತ್ರಗಳು
1. ಕಥಾಸಂಗಮ - 1976
2.
ಬಾಳು
ಜೇನು
-
1976
3.
ಒಂದು
ಪ್ರೇಮದ
ಕಥೆ
-
1977
4.
ಸಹೋದರರ
ಸವಾಲ್
-
1977
5.
ಕುಂಕುಮ
ರಕ್ಷೆ
-
1977
6.
ಗಲಾಟೆ
ಸಂಸಾರ
-
1977
7.
ಕಿಲಾಡಿ
ಕಿಟ್ಟು
-
1978
8.
ಮಾತು
ತಪ್ಪದ
ಮಗ
-
1978
9.
ತಪ್ಪಿದ
ತಾಳ
-
1978
10.
ಪ್ರಿಯಾ
-
1979
11.
ಗರ್ಜನೆ
-
1981

ಅನಂತ್‌ನಾಗ್ ಚಿತ್ರದಲ್ಲಿ ರಜನಿ ವಿಲನ್
ಇನ್ನು ಅನಂತ್ ನಾಗ್ ನಾಯಕನಾಗಿ ಕಾಣಿಸಿಕೊಂಡಿದ್ದ 1978ರಲ್ಲಿ ತೆರೆಕಂಡಿದ್ದ 'ಮಾತು ತಪ್ಪದ ಮಗ' ಚಿತ್ರದಲ್ಲಿ ರಜನಿಕಾಂತ್ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಅನಂತ್ ನಾಗ್ ಹಾಗೂ ರಜನಿಕಾಂತ್ ಹೊಡೆದಾಟದ ದೃಶ್ಯಗಳನ್ನೂ ಸಹ ಕಾಣಬಹುದಾಗಿದೆ. ಈ ಚಿತ್ರ ಯುಟ್ಯೂಬ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಇದು ರಜನಿಕಾಂತ್ ಸಿನಿ ಕೆರಿಯರ್‌ನ 25ನೇ ಚಿತ್ರ ಕೂಡ ಹೌದು.

ಅಂಬಿ ಹಾಗೂ ವಿಷ್ಣು ಚಿತ್ರಗಳಲ್ಲಿ ರಜನಿ ನಟನೆ
ಒಟ್ಟಾರೆ ಹನ್ನೊಂದು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ರಜನಿಕಾಂತ್ ವಿಷ್ಣುವರ್ಧನ್, ಅಂಬರೀಶ್ ಹಾಗೂ ಅನಂತ್‌ನಾಗ್ ರೀತಿಯ ಕನ್ನಡದ ದಿಗ್ಗಜ ನಟರ ಜತೆ ತೆರೆ ಹಂಚಿಕೊಂಡರು. ವಿಷ್ಣುವರ್ಧನ್ ಜತೆ ಒಟ್ಟು ಮೂರು ಚಿತ್ರಗಳಲ್ಲಿ ನಟಿಸಿದ್ದ ರಜನಿಕಾಂತ್ ಅಂಬರೀಶ್ ಜತೆ 1979ರಲ್ಲಿ ಪ್ರಿಯಾ ಎಂಬ ಚಿತ್ರದಲ್ಲಿ ನಟಿಸಿದ್ದರು. ಇದು ತಮಿಳು ಹಾಗೂ ಕನ್ನಡ ದ್ವಿಭಾಷಾ ಚಿತ್ರವಾಗಿತ್ತು.

ವಿಷ್ಣುವರ್ಧನ್ ಜತೆ ಹೆಚ್ಚು ಚಿತ್ರಗಳಲ್ಲಿ ನಟನೆ
ರಜನಿಕಾಂತ್ ಹೆಚ್ಚಾಗಿ ತೆರೆ ಹಂಚಿಕೊಂಡಿರುವ ಕನ್ನಡದ ನಟನೆಂದರೆ ಅದು ಸಾಹಸಸಿಂಹ ವಿಷ್ಣುವರ್ಧನ್. 1977ರಲ್ಲಿ ತೆರೆಕಂಡ ಸಹೋದರರ ಸವಾಲ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ರಜನಿಕಾಂತ್ ಹಾಗೂ ವಿಷ್ಣುವರ್ಧನ್ ಅದೇ ವರ್ಷ ಬಿಡುಗಡೆಗೊಂಡ ಗಲಾಟೆ ಸಂಸಾರ ಹಾಗೂ 1978ರಲ್ಲಿ ಬಿಡುಗಡೆಗೊಂಡ ಕಿಲಾಡಿ ಕಿಟ್ಟು ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು.