»   » ಸುದೀಪ್, ಉಪೇಂದ್ರ, ವರ್ಮಾ ಕಾಲೆಳೆದ್ರಾ ಕೋಮಲ್?

ಸುದೀಪ್, ಉಪೇಂದ್ರ, ವರ್ಮಾ ಕಾಲೆಳೆದ್ರಾ ಕೋಮಲ್?

Posted By:
Subscribe to Filmibeat Kannada

ನಟ ಕೋಮಲ್ ಕುಮಾರ್ ಅಭಿನಯದ 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಸಿನಿಮಾ ಇದೀಗ ಹೊಸ ವಿವಾದದಲ್ಲಿ ಸಿಲುಕಿದೆ. ಅದಕ್ಕೆ ಕಾರಣ 49 ಸೆಕೆಂಡ್ ನ ವಿಡಿಯೋ.!

ಹೌದು, ನಿನ್ನೆ ರಾತ್ರಿಯಿಂದ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ಮತ್ತು ವಾಟ್ಸ್ ಆಪ್ ನಲ್ಲಿ 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಚಿತ್ರದ ವಿಡಿಯೋ ಹರಿದಾಡುತ್ತಿದೆ.[ಕಥೆ-ಚಿತ್ರಕಥೆ-ನಿರ್ದೇಶನ 'ಪುಟ್ಟಣ್ಣ' ಸುತ್ತ ಹೊಸ ವಿವಾದ!]

ಅದರಲ್ಲಿ ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ, ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ರನ್ನ ಕೋಮಲ್ ಕಾಲೆಳೆದಿದ್ದಾರೆ ಎನ್ನಲಾಗಿದೆ.

ಅಸಲಿಗೆ ವಿಡಿಯೋದಲ್ಲೇನಿದೆ? ಇದು ಅಸಲಿಯೋ...ನಕಲಿಯೋ ಅಂತ ನಾವ್ ಹೇಳ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ವಿಡಿಯೋದಲ್ಲಿ ಏನಿದೆ?

'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಚಿತ್ರದಲ್ಲಿ ಕೋಮಲ್ ನಿರ್ದೇಶಕನ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಮಾಧ್ಯಮಗಳಿಗೆ ಸಂದರ್ಶನ ನೀಡುವ ಸಂದರ್ಭದಲ್ಲಿ ಕೋಮಲ್ ಕಿಚ್ಚ ಸುದೀಪ್, ರಾಮ್ ಗೋಪಾಲ್ ವರ್ಮಾ ರನ್ನ ಕಾಲೆಳೆದಿದ್ದಾರಂತೆ. [ಕೋಮಲ್ ಅಭಿನಯದ 'ಪುಟ್ಟಣ್ಣ' ಸಿನಿಮಾದಲ್ಲಿ ಅಂತದ್ದೇನಿದೆ?]

ಸುದೀಪ್ ಬಗ್ಗೆ ಹೇಳಿರುವುದೇನು?

''ಆರಡಿ ಮನುಷ್ಯನನ್ನೇ ನೊಣ ಸಾಯಿಸಿದೆ ಅಂದ್ಮೇಲೆ ನಮ್ ನೊಣ ರೇಪ್ ಮಾಡಲ್ವಾ?'' - ಕೋಮಲ್

ಉಪೇಂದ್ರ ಬಗ್ಗೆ ಏನಿದೆ?

''ಕಾಲ ಕಾಲನ್ನ ಎಳೆಯುತ್ತೆ. ನಮ್ ದೆವ್ವದ ಕಾಲನ್ನ ಯಾರೂ ಎಳೀಬಾರದಲ್ವಾ'' - ಕೋಮಲ್

ರಾಮ್ ಗೋಮಲ್ ವರ್ಮಾ ಬಗ್ಗೆ ಹೇಳಿರುವುದೇನು?

''ಕಿಲ್ಲಿಂಗ್ ನೊಣ'' - ಕೋಮಲ್

ನಿಜವಾದ ವಿಡಿಯೋನಾ?

'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಚಿತ್ರತಂಡ ಹೇಳುವ ಪ್ರಕಾರ ಇದು ಫೇಕ್ ವಿಡಿಯೋ.

ನಟ ಕೋಮಲ್ ಹೇಳುವುದೇನು?

''ನಾವು ಯಾಕೆ ಸುದೀಪ್, ಉಪೇಂದ್ರ, ರಾಮ್ ಗೋಪಾಲ್ ವರ್ಮಾ ರವರ ಕಾಲು ಎಳೆಯೋಣ. ಅವರೆಲ್ಲರೂ ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಅವರೆಲ್ಲರ ಮೇಲೆ ನನಗೆ ಗೌರವ ಇದೆ. ಈ ವಿಡಿಯೋನ ನಾನೂ ನೋಡಿದ್ದೀನಿ. ಸಿನಿಮಾದಲ್ಲಿರುವ ಡೈಲಾಗ್ಸ್ ಗೆ ಸುದೀಪ್, ಉಪೇಂದ್ರ, ರಾಜಮೌಳಿ, ರಾಮ್ ಗೋಪಾಲ್ ವರ್ಮಾ ರವರ ಫೋಟೋ ಮಿಕ್ಸ್ ಮಾಡಲಾಗಿದೆ. ಈ ವಿಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಕೋಮಲ್ ಕುಮಾರ್ ಸ್ಪಷ್ಟಪಡಿಸಿದರು.

ವಿವಾದ ಇಷ್ಟವಿಲ್ಲ.!

''ಸುಮ್ಮನ್ನೆ ಯಾರೋ ಈ ವಿಡಿಯೋನ ಕ್ರಿಯೇಟ್ ಮಾಡಿದ್ದಾರೆ. ವಿವಾದ ನನಗೆ ಇಷ್ಟವಿಲ್ಲ. ಸಿನಿಮಾ ಆಗಲೇ ಸೆನ್ಸಾರ್ ಆಗಿದೆ'' ಅಂತಾರೆ ನಟ ಕೋಮಲ್.

ನಿರ್ದೇಶಕ ಶ್ರೀನಿವಾಸ್ ರಾಜು ಏನಂತಾರೆ?

''ನಾನು ವಿಡಿಯೋ ನೋಡಿಲ್ಲ. ಒಂದು ಟ್ರೈಲರ್ ಬಿಟ್ಟರೆ ನಾವು ಯಾವ ವಿಡಿಯೋ ಕೂಡ ರಿಲೀಸ್ ಆಗಿಲ್ಲ. ಇದು ಫೇಕ್ ವಿಡಿಯೋ ಇರಬೇಕು'' ಅಂತ 'ಫಿಲ್ಮಿ ಬೀಟ್ ಕನ್ನಡ' ಜೊತೆ ಮಾತನಾಡುತ್ತಾ ನಿರ್ದೇಶಕ ಶ್ರೀನಿವಾಸ್ ರಾಜು ಬಾಯ್ಬಿಟ್ಟರು.

ಡೈಲಾಗ್ಸ್ ಇರುವುದು ನಿಜ!

''ಸಿನಿಮಾದಲ್ಲಿ 'ಕಿಲ್ಲಿಂಗ್ ನೊಣ', 'ನೊಣ ರೇಪ್ ಮಾಡುವುದು' ಎನ್ನುವ ಡೈಲಾಗ್ಸ್ ಇರುವುದು ನಿಜ. ಆದ್ರೆ, ಅದು ಸಂದರ್ಭಕ್ಕೆ ತಕ್ಕ ಹಾಗೆ ಇದೆ. ಸಿನಿಮಾ ನೋಡಿದ್ರೆ ನಿಮಗೆ ಅರ್ಥವಾಗುತ್ತೆ. ನಾವು ಯಾರ ಕಾಲೆಳೆಯುವುದಕ್ಕೂ ಹೋಗಿಲ್ಲ'' ಅಂತ ಸ್ಪಷ್ಟ ಪಡಿಸುತ್ತಾರೆ ನಿರ್ದೇಶಕ ಶ್ರೀನಿವಾಸ್ ರಾಜು.

ಕಾಮಿಡಿ ಕಿಂಗ್ ಕೋಮಲ್ ಅಭಿನಯದ ಹೊಸ ಚಿತ್ರದ ಕಾಮಿಡಿ ಟೀಸರ್#kannada Kannadamovies Komal Kumar Priya Mani Pooja Gandhi

Posted by Kannada Filmibeat on Friday, December 18, 2015

ವಿಡಿಯೋ ನೋಡಿ.....

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಇಲ್ಲಿದೆ ನೋಡಿ....

English summary
Komal Kumar starrer Kannada Movie 'Kathe Chitrakathe Nirdheshana Puttanna' is in trouble again because of the new video which is circulating on Social Media Platform. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada