»   » ಪುನೀತ್ ನಿರ್ಮಾಣದ 'ಕವಲುದಾರಿ' ಚಿತ್ರದಲ್ಲಿದೆ ರೆಟ್ರೋ ಲುಕ್

ಪುನೀತ್ ನಿರ್ಮಾಣದ 'ಕವಲುದಾರಿ' ಚಿತ್ರದಲ್ಲಿದೆ ರೆಟ್ರೋ ಲುಕ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರವಾದ 'ಕವಲುದಾರಿ' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಸಿನಿಮಾ ಖ್ಯಾತಿಯ ಹೇಮಂತ್ ರಾವ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಕವಲುದಾರಿ' ಚಿತ್ರದಲ್ಲಿ ನಟ ರಿಷಿ ಹಾಗೂ ಅನಂತ್ ನಾಗ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಅನಂತ್ ನಾಗ್ ಲುಕ್ ಬಿಡುಗಡೆ ಮಾಡಿದ ಸಿನಿಮಾ ಟೀಂ ಈಗ ಮಿಸ್ಟರ್ ಅಂಡ್ ಮಿಸೆಸ್ ನಾಯ್ಡು ಅವರ ಲುಕ್ ರಿವಿಲ್ ಮಾಡಿದ್ದಾರೆ. 70 ರ ದಶಕದಲ್ಲಿ ನಡೆದ ಮರ್ಡರ್ ಮಿಸ್ಟರಿ ಕಥೆಯನ್ನ ಸಿನಿಮಾವನ್ನಾಗಿ ಮಾಡುತ್ತಿರುವ ಹೇಮಂತ್ ಚಿತ್ರದಲ್ಲಿನ ನಾಯ್ಡು ದಂಪತಿಗಳ ಫೋಟೋ ತಮ್ಮ ಟ್ವಿಟ್ಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ.

Kavaludari movie new photo is released

ರೆಟ್ರೋ ಲುಕ್ ನಲ್ಲಿ ಇಬ್ಬರು ಪಾತ್ರದಾರಿಗಳು ಕಾಣಿಸಿಕೊಂಡಿದ್ದು ನಾಯ್ಡು ಪಾತ್ರದಲ್ಲಿ ಸಿದ್ದಾರ್ಥ ಮಾಧ್ಯಮಿಕ ಅಭಿನಯಿಸಿದ್ದರೆ ಮಿಸೆಸ್ ನಾಯ್ಡು ಆಗಿ ಸಮನ್ವಿತಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ರೆಟ್ರೋ ಶೈಲಿ ಅಂದಾಗ ಬೆಲ್ ಬಾಟಮ್ ಪ್ಯಾಂಟ್ ಶರ್ಟ್ ಹಾಕಿಸಿ ಅದಕ್ಕೆ ಒಂದಿಷ್ಟು ಕಮರ್ಷಿಯಲ್ ಟಚ್ ಕೊಡುವುದು ಸಿನಿಮಾದಲ್ಲಿ ಕಾಮನ್ ಆದರೆ ಹೇಮಂತ್ ಇವರು ಲುಕ್ ಗಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ.

Kavaludari movie new photo is released

ವಿನಯ ಮತ್ತು ಇಂಚರಾ ಇಬ್ಬರ ಪಾತ್ರಧಾರಿಗಳ ಕಾಸ್ಟ್ಯೂಮ್ಸ್ ಗಳನ್ನ ಡಿಸೈನ್ ಮಾಡಿದ್ದು ಚಿತ್ರೀಕರಣಕ್ಕಾಗಿ 35 ವರ್ಷದ ಹಳೆಯ ಲೆನ್ಸ್ ಗಳನ್ನ ಬಳಸಲಾಗಿದ್ಯಂತೆ. ಸಿದ್ದಾರ್ಥ ಮಾಧ್ಯಮಿಕ ಮತ್ತು ಸಮನ್ವಿತಾ ಶೆಟ್ಟಿ ಕೂಡ ತಮ್ಮ ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದಾರೆ.

ಸದ್ಯ 'ಕವಲುದಾರಿ' ಸಿನಿಮಾದ ಶೇಕಡ 60 ಭಾಗ ಚಿತ್ರೀಕರಣ ಮುಗಿದಿದ್ದು, 'ಟಗರು' ಸಿನಿಮಾ ಖ್ಯಾತಿಯ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

English summary
Kannada director Hemath Rao intruduce Mr & Mrs Naidu, the characters who are central to the plot of Kavaludari movie .The extremely talented Siddarth Madyamika & Samanvitha Shetty play Mr and Mrs Naidu. Set in the 70s,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X