For Quick Alerts
  ALLOW NOTIFICATIONS  
  For Daily Alerts

  ಸಂಯುಕ್ತಾ ಹೆಗಡೆ ಮೇಲೆ ಹಲ್ಲೆಗೆ ಯತ್ನಿಸಿದ್ದ ಕವಿತಾ ರೆಡ್ಡಿ ಬಂಧನ

  |

  ಸಂಯುಕ್ತಾ ಹೆಗಡೆ ಹಾಗೂ ಗೆಳೆಯರ ವಿರುದ್ಧ ಹಲ್ಲೆಗೆ ಯತ್ನಿಸಿದ್ದ ಅಗರ ಕೆರೆ ಸಮಿತಿ ಸದಸ್ಯೆ ಕವಿತಾ ರೆಡ್ಡಿಯನ್ನು ಪೊಲೀಸರು ಇಂದು (ಸೆಪ್ಟೆಂಬರ್ 08) ಬಂಧಿಸಿದ್ದಾರೆ.

  ಸಂಯುಕ್ತ some kirik ಮಾಡ್ಕೊಂಡು something ಮಾಡ್ಬಿಟ್ರು | Oneindia Kannada

  ಕೆಲವು ದಿನಗಳ ಹಿಂದೆ ಅಗರ ಕೆರೆ ಉದ್ಯಾನದಲ್ಲಿ ವ್ಯಾಯಾಮ ಮಾಡುತ್ತಿದ್ದ ನಟಿ ಸಂಯುಕ್ತಾ ಹೆಗಡೆ ಹಾಗೂ ಅವರ ಗೆಳೆಯರನ್ನು ನಿಂದಿಸಿದ್ದ ಕವಿತಾ ರೆಡ್ಡಿ, ಸಂಯುಕ್ತಾ ಹೆಗಡೆ ಗೆಳತಿಯೋರ್ವರ ಮೇಲೆ ಹಲ್ಲೆ ನಡೆಸಿದ್ದರು.

  ನೈತಿಕ ಪೊಲೀಸ್‌ಗಿರಿ: ಕಿರಿಕ್ ಹುಡುಗಿ ಮೇಲೆ ಗುಂಪು ದಾಳಿ, ಹಲ್ಲೆ ಆರೋಪನೈತಿಕ ಪೊಲೀಸ್‌ಗಿರಿ: ಕಿರಿಕ್ ಹುಡುಗಿ ಮೇಲೆ ಗುಂಪು ದಾಳಿ, ಹಲ್ಲೆ ಆರೋಪ

  ಘಟನೆ ಸಂಬಂಧ ಸಂಯುಕ್ತಾ ಹೆಗಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಘಟನೆ ನಡೆದ ಬಳಿಕ ಕವಿತಾ ರೆಡ್ಡಿ ಕ್ಷಮೆ ಕೇಳಿದರಾದರೂ, ಪೊಲೀಸರು ಕವಿತಾ ರೆಡ್ಡಿ ಅವರನ್ನು ಬಂಧಿಸಿದ್ದಾರೆ. ಕವಿತಾ ರೆಡ್ಡಿ ಕಾಂಗ್ರೆಸ್ ಸದಸ್ಯೆ ಸಹ ಎಂದು ಹೇಳಲಾಗಿದೆ.

  ಅನಿಲ್ ರೆಡ್ಡಿಗಾಗಿ ಪೊಲೀಸರ ಹುಡುಕಾಟ

  ಅನಿಲ್ ರೆಡ್ಡಿಗಾಗಿ ಪೊಲೀಸರ ಹುಡುಕಾಟ

  ಕವಿತಾ ರೆಡ್ಡಿ ಹಾಗೂ ಅನಿಲ್ ರೆಡ್ಡಿ ಎಂಬುವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಆದರೆ ಅನಿಲ್ ರೆಡ್ಡಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

  ಪಾರ್ಕ್‌ನ ಗೇಟ್ ಬೀಗ ಹಾಕಿ ಬಂಧಿಸಿದ್ದರು

  ಪಾರ್ಕ್‌ನ ಗೇಟ್ ಬೀಗ ಹಾಕಿ ಬಂಧಿಸಿದ್ದರು

  ಸಾರ್ವಜನಿಕ ಸ್ಥಳದಲ್ಲಿ ತುಂಡುಡುಗೆ ತೊಟ್ಟುಕೊಂಡು ನಂಗಾನಾಚ್ ಮಾಡುತ್ತಿದ್ದೀಯಾ ಎಂದು ಕವಿತಾ ರೆಡ್ಡಿ ಹಾಗೂ ಇತರರು ನಿಂದಿಸಿದ್ದರು. ಪಾರ್ಕ್‌ನ ಗೇಟ್ ಬೀಗ ಹಾಕಿ ಸಂಯುಕ್ತಾ ಹೆಗಡೆ ಹಾಗೂ ಗೆಳೆಯರನ್ನು ಬಂಧನದಲ್ಲಿ ಸಹ ಇಡಲಾಗಿತ್ತು.

  ವಿಡಿಯೋ ಅಪ್‌ಲೋಡ್ ಮಾಡಿದ್ದ ಸಂಯುಕ್ತಾ

  ವಿಡಿಯೋ ಅಪ್‌ಲೋಡ್ ಮಾಡಿದ್ದ ಸಂಯುಕ್ತಾ

  ಘಟನೆಯನ್ನು ಚಿತ್ರೀಕರಿಸಿಕೊಂಡಿದ್ದ ಸಂಯುಕ್ತಾ ಹೆಗಡೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕವಿತಾ ರೆಡ್ಡಿ, ಅನಿಲ್ ರೆಡ್ಡಿ ಮಾತ್ರವಲ್ಲದೆ ಇನ್ನೂ ಕೆಲವರ ವಿರುದ್ಧ ದೂರು ದಾಖಲಾಗಿದ್ದು, ಅವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ.

  ಅನೈತಿಕ ಪೊಲೀಸ್‌ಗಿರಿ ಖಂಡಿಸಿದ್ದ ಹಲವರು

  ಅನೈತಿಕ ಪೊಲೀಸ್‌ಗಿರಿ ಖಂಡಿಸಿದ್ದ ಹಲವರು

  ಸಂಯುಕ್ತಾ ಹೆಗಡೆ ವಿರುದ್ಧ ಹಲ್ಲೆ ಯತ್ನ ಹಾಗೂ ಅನೈತಿಕ ಪೊಲೀಸ್‌ಗಿರಿಯನ್ನು ಚಿತ್ರರಂಗ ಸೇರಿದಂತೆ ಹಲವರು ಖಂಡಿಸಿದ್ದರು. ಸಂಸದೆ ಶೋಭಾ ಕರಂದ್ಲಾಜೆ ಸಹ ಈ ಘಟನೆಯನ್ನು ತೀವ್ರವಾಗಿ ಖಂಡಿಸಿ, ಕವಿತಾ ರೆಡ್ಡಿ ಬಂಧನಕ್ಕೆ ಒತ್ತಾಯಿಸಿದ್ದರು.

  English summary
  Congress member Kavitha Reddy arrested for attacking on actress Samyukta Hegde and her friends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X