»   » ದೊಡ್ಡಣ್ಣ, ಶ್ರೀನಿವಾಸ ಮೂರ್ತಿ ಸೇರಿದಂತೆ 15 ಜನರಿಗೆ 'ಅಕಾಡೆಮಿ ಪ್ರಶಸ್ತಿ'

ದೊಡ್ಡಣ್ಣ, ಶ್ರೀನಿವಾಸ ಮೂರ್ತಿ ಸೇರಿದಂತೆ 15 ಜನರಿಗೆ 'ಅಕಾಡೆಮಿ ಪ್ರಶಸ್ತಿ'

Posted By:
Subscribe to Filmibeat Kannada

2015-16ನೇ ಸಾಲಿನ ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ 15 ಜನ ಸಾಧಕರಿಗೆ ಈ ಬಾರಿ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ನಟ ಶ್ರೀನಿವಾಸ ಮೂರ್ತಿ, ದೊಡ್ಡಣ್ಣ, ಹಾಸ್ಯ ನಟ ಎಂ.ಎಸ್. ಉಮೇಶ್, ಬಿವಿ ರಾಧ, ಸೇರಿದಂತೆ ವಿವಿಧ ಕ್ಷೇತ್ರದ 15 ಕಲಾವಿದರರಿಗೆ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ

KCA Annual Awards For 15 Kannada film Personalities

ಆರ್ ನಾಗೇಂದ್ರ ರಾವ್ ಪ್ರಶಸ್ತಿ- (ಅಭಿನಯ ನಟ) - ಶ್ರೀನಿವಾಸ ಮೂರ್ತಿ,
ಎಂ.ವಿ.ರಾಜಮ್ಮ ಪ್ರಶಸ್ತಿ- ಆದವಾನಿ ಲಕ್ಷ್ಮೀದೇವಿ,
ಬಾಲಕೃಷ್ಣ ಪ್ರಶಸ್ತಿ (ಹಾಸ್ಯ) : ಎಂ.ಎಸ್ ಉಮೇಶ್
ತೂಗುದೀಪ ಶ್ರೀನಿವಾಸ್ ಪ್ರಶಸ್ತಿ(ಖಳ)- ಎಸ್ ದೊಡ್ಡಣ್ಣ
ಬಿಆರ್ ಪಂತುಲು (ನಿರ್ದೇಶನ)- ಕೆ.ವಿ ರಾಜು
ಶಂಕರ್ ಸಿಂಗ್ ಪ್ರಶಸ್ತಿ (ನಿರ್ಮಾಣ)- ಸಿ.ಜಯರಾಂ
ಎಂ.ಪಿ ಶಂಕರ್ ಪ್ರಶಸ್ತಿ(ತಂತ್ರಜ್ಞಾನ)- ದೇವಿ(ನೃತ್ಯ)
ಬಿ ಜಯಮ್ಮ(ಪ್ರದರ್ಶನ)- ಕುಮಾರ್ ಶೆಟ್ಟರ್
ವೀರಾಸ್ವಾಮಿ ಪ್ರಶಸ್ತಿ (ಹಂಚಿಕೆ) - ಪಾಲ್ ಎಸ್ ಚಂದಾನಿ
ಜಿವಿ ಅಯ್ಯರ್ ಪ್ರಶಸ್ತಿ (ಸಂಗೀತ, ಗಾಯನ)- ಬಿ.ಕೆ.ಸುಮಿತ್ರಾ

ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ (ಚಿತ್ರ ಸಾಹಿತ್ಯ)- ಡಾ.ಬಿ.ಎಲ್ ವೇಣು,
ಬಿ.ಎಸ್. ರಂಗ ಪ್ರಶಸ್ತಿ(ಛಾಯಾಗ್ರಾಹಣ)- ಎಸ್ ವಿ ಶ್ರೀಕಾಂತ್
ಪಂಡರೀಬಾಯಿ ಪ್ರಶಸ್ತಿ (ಪೋಷಕ) ಬಿ.ವಿ. ರಾಧಾ
ಶಂಕರ್ ನಾಗ್ ಪ್ರಶಸ್ತಿ (ಕಾರ್ಮಿಕ)- ಎನ್ ಎಲ್ ರಾಮಣ್ಣ
ಕೆ.ಎನ್. ಟೈಲರ್ ಪ್ರಶಸ್ತಿ (ಪ್ರಾದೇಶಿಕ ಭಾಷಾ ಚಿತ್ರ)- ರಾಮ್ ಶೆಟ್ಟಿ

ಪ್ರಶಸ್ತಿಯು 50 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ಒಳಗೊಂಡಿದ್ದು, ಮಾರ್ಚ್ 3 ರಂದು ಸಂಜೆ 6 ಗಂಟೆಗೆ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಮಾರಂಭದಲ್ಲಿ ಮಾಜಿ ಸಚಿವ ಹಾಗೂ ಖ್ಯಾತ ನಟ ಅಂಬರೀಷ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ವಸತಿ ಸಚಿವ ಎಂ. ಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ, ನಟಿ ಉಮಾಶ್ರೀ, ವಿಧಾನ ಪರಿಷತ್ ಸದಸ್ಯೆ,ನಟಿ ಜಯಮಾಲ, ಹಿರಿಯ ನಟರಾದ ರವಿಚಂದ್ರನ್, ಭಾರತಿ ವಿಷ್ಣುವರ್ಧನ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ವಾರ್ತಾ ಇಲಾಖೆ ನಿರ್ದೇಶಕ ವಿಶು ಕುಮಾರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
The Karnataka Chalanachitra Academy has announced its annual awards for Kannada film personalities. A total of 15 awards has been announced. Each winner will get a cash prize of Rs 50,000, a citation and a memento.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X