twitter
    For Quick Alerts
    ALLOW NOTIFICATIONS  
    For Daily Alerts

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಸಿದು ಬಿದ್ದ ರೆಬೆಲ್ ಸ್ಟಾರ್

    By Pavithra
    |

    Recommended Video

    KCC Cricket 2018: ಇದ್ದಕ್ಕಿದ್ದ ಹಾಗೇ ಏನಾಯ್ತು ಅಂಬಿಗೆ..! | Filmibeat Kannada

    ಇಂದಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಸಿಸಿ ಸೀಸನ್ 2 ಆರಂಭವಾಗಿದೆ. ಕನ್ನಡ ಸಿನಿಮಾರಂಗದ ಬಹುತೇಕ ಸ್ಟಾರ್ ಗಳು ಬೆಳಗ್ಗೆಯಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇರಿಕೊಂಡಿದ್ದಾರೆ. ನಟ ರೆಬೆಲ್ ಸ್ಟಾರ್ ಅಂಬರೀಶ್ ಕೂಡ ಕಲಾವಿದರಿಗೆ ಸಾಥ್ ನೀಡಲು ಕ್ರೀಡಾಂಗಣಕ್ಕೆ ಆಗಮಿಸಿದ್ದರು.

    ಸಾಕಷ್ಟು ಗಂಟೆಗಳ ಕಾಲ ಕ್ರೀಡಾಂಗಣದಲ್ಲಿ ಕಾಲ ಕಳೆದ ಅಂಬಿ ಕೆಲವು ಸಮಯ ಚೇರ್ ನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಚೇರ್ ನಲ್ಲಿ ಕೂತಿದ್ದ ಅಂಬರೀಶ್, ಎದ್ದು ನಿಲ್ಲಲ್ಲು ಹೋದಾಗ ಕುಸಿದು ಬಿದ್ದಿದ್ದಾರೆ.

    LIVE: 10 ಓವರ್ ಗೆ 121 ರನ್ ಬಾರಿಸಿದ ಸುದೀಪ್ ತಂಡ LIVE: 10 ಓವರ್ ಗೆ 121 ರನ್ ಬಾರಿಸಿದ ಸುದೀಪ್ ತಂಡ

    ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿದ್ದು, ಚೆನ್ನಾಗಿ ಓಡಾಡಿಕೊಂಡಿದ್ದ ಅಂಬಿ ಏಕಾ ಏಕಿ ಕುಸಿದು ಬೀಳಲು ಕಾರಣವೇನು? ಮತ್ತೆ ಅಂಬಿ ಆರೋಗ್ಯ ಕೈ ಕೊಡ್ತಾ? ಅಥವಾ ಇದಕ್ಕೆ ಬೇರೆಯದ್ದೇ ಕಾರಣವಿದ್ಯಾ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ...

    ಹೆಚ್ಚು ಓಡಾಡಿದ್ದೇ ಸಮಸ್ಯೆ

    ಹೆಚ್ಚು ಓಡಾಡಿದ್ದೇ ಸಮಸ್ಯೆ

    ಬೆಳಗ್ಗೆಯಿಂದ ಹೆಚ್ಚು ಓಡಾಡಿದ್ದರಿಂದ ಅಂಬರೀಶ್ ಅವರಿಗೆ ಕಾಲು ನೋವಿತ್ತು. ಸ್ನಾಯು ಸೆಳೆತದಿಂದ ಕುಸಿದು ಬಿದ್ದಿರುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸದ್ಯ ಅಂಬರೀಶ್ ಚಿನ್ನಾಸ್ವಾಮಿ ಕ್ರೀಡಾಂಗಣದಿಂದ ತಮ್ಮ ಕಾರಿನಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ.

    ವಿಕ್ರಂ ಆಸ್ಪತ್ರೆಗೆ ದಾಖಲು

    ವಿಕ್ರಂ ಆಸ್ಪತ್ರೆಗೆ ದಾಖಲು

    ಮ್ಯಾಚ್ ಶುರುವಾದಾಗಿನಿಂದ ಅಂಬರೀಶ್ ಕ್ರೀಡಾಂಗಣದಲ್ಲಿಯೇ ಇದ್ದರು. ಹೆಚ್ಚು ಆಯಾಸವಾದ ಕಾರಣ ಕುಸಿದು ಬಿದ್ದಿರ ಬಹುದು. ಸದ್ಯ ಅಂಬರೀಶ್ ಅವರನ್ನು ಅಲ್ಲೇ ಹತ್ತಿರವಿರುವ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ರಾಕ್ಲೈನ್ ವೆಂಕಟೇಶ್ ಅಂಬರೀಶ್ ಅವರ ಜೊತೆ ಆಸ್ಪತ್ರೆಗೆ ತೆರಳಿದ್ದಾರೆ.

    ಯಾವುದು ಸತ್ಯ?

    ಯಾವುದು ಸತ್ಯ?

    ಅಂಬರೀಶ್ ನಿಜವಾಗಿಯೂ ಕಾಲು ನೋವಿನಿಂದ ಕುಸಿದು ಬಿದ್ದಿದ್ದಾರೆಯೇ? ಎನ್ನುವುದು ಇನ್ನು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಕೆಲವರು ಕಾಲು ನೋವಿನಿಂದ ಹೀಗಾಗಿದೆ ಎಂದರೆ ಇನ್ನು ಕೆಲವರು ಕಾಲು ಎಡವಿ ಬಿದ್ದಿರಬಹುದು, ಅಥವಾ ಅತಿಯಾದ ಬಿಸಿಲಿನಿಂದಾಗಿ ಬಳಲಿರಬಹುದು. ಎಂದಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಅಂಬಿ ತೆರಳಿದ್ದಾರೆ ಅಂಬಿ.

    ಮೊದಲ ಪಂದ್ಯ ಜಯಗಳಿಸಿದ ಗಣೇಶ್ ಟೀಂ

    ಮೊದಲ ಪಂದ್ಯ ಜಯಗಳಿಸಿದ ಗಣೇಶ್ ಟೀಂ

    ಮೊದಲ ಪಂದ್ಯ ಜಯಗಳಿಸಿದ ಗಣೇಶ್ ಟೀಂ
    ಮೊದಲ ಇನ್ನಿಂಗ್ ಅಂತ್ಯಕ್ಕೆ ಸುದೀಪ್ ಅವರ 'ಕದಂಬ ಲಯನ್ಸ್' ತಂಡ 121 ರನ್ ಗಳನ್ನು ಗಳಿಸಿತ್ತು. ಗಣೇಶ್ ತಂಡಕ್ಕೆ 122 ರನ್ ಟಾರ್ಗೆಟ್ ನೀಡಲಾಗಿದತ್ತು. ಕೆಸಿಸಿ ಸೀರಿಸ್ ನ ಮೊದಲ ಪಂದ್ಯದಲ್ಲಿ ಸುದೀಪ್ ತಂಡದ ವಿರುದ್ಧ ಗಣೇಶ್ ತಂಡ 126 ರನ್ ಗಳಿಸಿ ವಿಜಯ ಸಾಧಿಸಿದೆ.

    English summary
    Kcc cricket tournament : actor ambareesh fell down in Chinnaswamy stadium.
    Saturday, September 8, 2018, 16:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X