twitter
    For Quick Alerts
    ALLOW NOTIFICATIONS  
    For Daily Alerts

    ಕೆಸಿಸಿ: ಪುನೀತ್, ಶಿವಣ್ಣ, ಯಶ್ vs ಸುದೀಪ್, ಉಪೇಂದ್ರ, ಗಣೇಶ್

    By Bharath Kumar
    |

    Recommended Video

    ಎರಡು ಭಾಗ ಆದ ಸ್ಟಾರ್ಸ್ ತಂಡ..! | Filmibeat Kannada

    'ಕನ್ನಡ ಚಲನಚಿತ್ರ ಕಪ್' ಟೂರ್ನಮೆಂಟ್ ಎರಡನೇ ಆವೃತ್ತಿ ಆರಂಭವಾಗುತ್ತಿದೆ. ಸೆಪ್ಟಂಬರ್ 8 ಮತ್ತು 9 ರಂದು ಎರಡು ದಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್ ಕಾದಾಡಲಿದ್ದಾರೆ.

    ಕಳೆದ ಬಾರಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ತಂಡ ಚೊಚ್ಚಲ ಕೆಸಿಸಿ ಕಪ್ ಎತ್ತಿ ಹಿಡಿದಿತ್ತು. ಇದೀಗ, ಎರಡನೇ ಆವೃತ್ತಿ ಮತ್ತಿಬ್ಬರು ಸ್ಟಾರ್ ನಟರು ಎಂಟ್ರಿ ಕೊಟ್ಟಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಗೋಲ್ಡನ್ ಸ್ಟಾರ್ ಗಣೇಶ್.

    ಸದ್ಯ, ಕೆಸಿಸಿ ಟೂರ್ನಿಯ ವೇಳಾಪಟ್ಟಿ ಬಹಿರಂಗವಾಗಿದ್ದು, ಎರಡು ಗುಂಪುಗಳಾಗಿ ತಂಡಗಳು ಆಡಲಿವೆ. ಎ ಗುಂಪು ಮತ್ತು ಬಿ ಗುಂಪಿನಲ್ಲಿ ತಲಾ ಮೂರು ತಂಡಗಳು ಸ್ಥಾನ ಪಡೆದುಕೊಂಡಿದೆ. ಎರಡು ಗುಂಪಿನ ಒಂದೊಂದು ತಂಡ ಫಿನಾಲೆಗೆ ಎಂಟ್ರಿ ಕೊಟ್ಟು ಟ್ರೋಫಿಗಾಗಿ ಫೈಟ್ ಮಾಡಲಿವೆ. ಯಾರ ತಂಡ ಯಾವ ಗುಂಪಿನಲ್ಲಿದೆ.? ಯಾರ ಪಂದ್ಯ ಯಾರ ವಿರುದ್ಧ ಆಡಲಿದ್ದಾರೆ.? ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ.....

    ಶಿವಣ್ಣ-ಪುನೀತ್-ಯಶ್ ಒಂದು

    ಶಿವಣ್ಣ-ಪುನೀತ್-ಯಶ್ ಒಂದು

    ಶಿವರಾಜ್ ಕುಮಾರ್ ವಿಜಯನಗರ ಪೆಟ್ರಿಯಾಟ್ಸ್, ಪುನೀತ್ ರಾಜ್ ಕುಮಾರ್ ಅವರ ಗಂಗಾ ವಾರಿಯರ್ಸ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡಗಳ ಎ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಮೂರು ತಂಡಗಳು ಪರಸ್ಪರ ಕಾದಾಡಲಿವೆ. ಉಳಿದ ತಂಡಗಳ ವಿರುದ್ಧ ತಲಾ ಒಂದೊಂದು ಪಂದ್ಯವಾಡಲಿದ್ದಾರೆ.

    'ಕೆಸಿಸಿ' ಟೂರ್ನಿಯ ವೇಳಾಪಟ್ಟಿ ನೋಡಿ: ಯಾರ ಪಂದ್ಯ ಯಾರ ವಿರುದ್ಧ.?'ಕೆಸಿಸಿ' ಟೂರ್ನಿಯ ವೇಳಾಪಟ್ಟಿ ನೋಡಿ: ಯಾರ ಪಂದ್ಯ ಯಾರ ವಿರುದ್ಧ.?

    ಸುದೀಪ್, ಗಣೇಶ್, ಉಪ್ಪಿ ಒಂದು

    ಸುದೀಪ್, ಗಣೇಶ್, ಉಪ್ಪಿ ಒಂದು

    ಮತ್ತೊಂದು ಕಿಚ್ಚ ಸುದೀಪ್ ಅವರ ಕದಂಬ ಲಯನ್ಸ್, ಉಪೇಂದ್ರ ಅವರ ಹೊಯ್ಸಳ ಈಗಲ್ಸ್ ಹಾಗೂ ಗಣೇಶ್ ಅವರ ಒಡೆಯರ್ ಚಾರ್ಜರ್ಸ್ ತಂಡಗಳು ಬಿ ಗುಂಪಿನಲ್ಲಿ ಕಾದಾಡಲಿವೆ. ಇಲ್ಲಿಯೂ ಉಳಿದ ಎರಡು ತಂಡಗಳ ವಿರುದ್ಧ ಒಂದೊಂದು ಪಂದ್ಯವಾಡಲಿದ್ದು, ಗುಂಪಿನಲ್ಲಿ ಪ್ರಥಮ ಸ್ಥಾನ ಕಾಯ್ದುಕೊಂಡ ತಂಡ ಫೈನಲ್ ಹಂತ ತಲುಪಲಿದೆ.

    ಸುದೀಪ್ ಜೊತೆ ಕ್ರಿಕೆಟ್ ಅಭ್ಯಾಸ ಮಾಡಿದ ಸ್ಯಾಂಡಲ್ ವುಡ್ ಸ್ಟಾರ್ಸುದೀಪ್ ಜೊತೆ ಕ್ರಿಕೆಟ್ ಅಭ್ಯಾಸ ಮಾಡಿದ ಸ್ಯಾಂಡಲ್ ವುಡ್ ಸ್ಟಾರ್

    ಯಾರ ಪಂದ್ಯ ಮೊದಲು

    ಯಾರ ಪಂದ್ಯ ಮೊದಲು

    ಸೆಪ್ಟಂಬರ್ 8 ರಂದು ಕೆಸಿಸಿಯ ಮೊದಲ ಪಂದ್ಯ ನಡೆಯಲಿದೆ. ಮೊದಲ ದಿನ ಮಧ್ಯಾಹ್ನ 1.30ಕ್ಕೆ ಒಡೆಯರ್ ಚಾರ್ಜಸ್ ವರ್ಸಸ್ ಕದಂಬ ಲಯನ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ. ನಂತರ 3.45ಕ್ಕೆ ರಾಷ್ಟ್ರಕೂಟ ಪ್ಯಾಂಥರ್ಸ್ ವರ್ಸಸ್ ವಿಜಯನಗರ ಪೇಟ್ರಿಯಟ್ಸ್ ಪಂದ್ಯ ಜರುಗಲಿದೆ. ಆಮೇಲೆ 6 ಗಂಟೆಗೆ ಹೊಯ್ಸಳ ಈಗಲ್ಸ್ ವರ್ಸಸ್ ಒಡೆಯರ್ ಚಾರ್ಜಸ್ ಪಂದ್ಯ ಆರಂಭವಾಗಲಿದೆ. ಮೊದಲ ದಿನದ ಕೊನೆಯ ಪಂದ್ಯ ವಿಜಯನಗರ ಪೇಟ್ರಿಯಟ್ಸ್ ವರ್ಸಸ್ ಗಂಗಾ ವಾರಿಯರ್ಸ್ ನಡುವೆ ನಡೆಲಿದೆ.

    ಅಂತರಾಷ್ಟ್ರೀಯ ಕ್ರಿಕೆಟರ್ಸ್ ಜೊತೆ ಕರ್ನಾಟಕ ಚಲನಚಿತ್ರ ಕಪ್ ಅಂತರಾಷ್ಟ್ರೀಯ ಕ್ರಿಕೆಟರ್ಸ್ ಜೊತೆ ಕರ್ನಾಟಕ ಚಲನಚಿತ್ರ ಕಪ್

    ಎರಡನೇ ದಿನದ ಪಂದ್ಯಗಳು

    ಎರಡನೇ ದಿನದ ಪಂದ್ಯಗಳು

    ಎರಡನೇ ದಿನ ಮಧ್ಯಾಹ್ನ 2 ಗಂಟೆಗೆ ಗಂಗಾ ವಾರಿಯರ್ಸ್ ವರ್ಸಸ್ ರಾಷ್ಟ್ರಕೂಟ ಪ್ಯಾಂಥರ್ಸ್ ಪಂದ್ಯ ಜರುಗಲಿದೆ. ಸಂಜೆ 4.15ಕ್ಕೆ ಕದಂಬ ಲಯನ್ಸ್ ವರ್ಸಸ್ ಹೊಯ್ಸಳ ಈಗಲ್ಸ್ ಪಂದ್ಯ ಆರಂಭವಾಗಲಿದೆ. ಲೀಗ್ ಹಂತದ ಪಂದ್ಯಗಳು ಇಲ್ಲಿಗೆ ಮುಕ್ತಾಯವಾಗಲಿದ್ದು, ರಾತ್ರಿ 8.15ಕ್ಕೆ ಎರಡು ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.

    ಕಿರುತೆರೆಯಲ್ಲಿ ಎರಡು ವಾರ ಸಿನಿತಾರೆಯರ ಕ್ರಿಕೆಟ್ ಹಬ್ಬ ಕಿರುತೆರೆಯಲ್ಲಿ ಎರಡು ವಾರ ಸಿನಿತಾರೆಯರ ಕ್ರಿಕೆಟ್ ಹಬ್ಬ

    ಇಂಟರ್ ನ್ಯಾಷನಲ್ ಆಟಗಾರರು

    ಇಂಟರ್ ನ್ಯಾಷನಲ್ ಆಟಗಾರರು

    ಅಂತಾರಾಷ್ಟ್ರೀಯ ಆಟಗಾರರಾದ ವಿರೇಂದ್ರ ಸೆಹ್ವಾಗ್ ಕದಂಬ ಲಯನ್ಸ್ ನಲ್ಲಿ ಆಟವಾಡಿದ್ರೆ, ಹರ್ಷೆಲ್​ ಗಿಬ್ಸ್ ಹೊಯ್ಸಳ ಈಗಲ್ಸ್, ತಿಲಕರತ್ನೆ ದಿಲ್ಸ್ಯಾನ್ ಒಡೆಯರ್ ಚಾರ್ಜರ್ಸ್, ಲ್ಯಾನ್ಸ್​ ಕ್ಲೂಸ್ನರ್ ಗಂಗಾ ವಾರಿಯರ್ಸ್, ಓವೈ ಷಾ ರಾಷ್ಟ್ರಕೂಟ ಪ್ಯಾಂಥರ್ಸ್ ಹಾಗೂ ಆಡಂ ಗಿಲ್​ಕ್ರಿಸ್ಟ್ ವಿಜಯನಗರ ಪೇಟ್ರಿಯಟ್ಸ್ ತಂಡದಲ್ಲಿ ಆಡಲಿದ್ದಾರೆ.

    English summary
    Kcc time table: Shiva rajkumar, puneeth rajkumar and yash play against each other in Group A and one wil make it to the finals. and Group B has upendra, Ganesh & Sudeep play matches against each other.
    Thursday, August 23, 2018, 15:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X