ಕುರುಕ್ಷೇತ್ರನೂ ಇಲ್ಲ, ಪೈಲ್ವಾನೂ ಇಲ್ಲ: ವರಮಹಾಲಕ್ಷ್ಮಿ ಹಬ್ಬಕ್ಕೆ ಮತ್ತೊಂದು ನಿರೀಕ್ಷೆಯ ಚಿತ್ರ

ವರಮಹಾಲಕ್ಷ್ಮಿ ಹಬ್ಬಕ್ಕೆ ನಮ್ಮ ಸಿನಿಮಾ ಬರುತ್ತೆ, ನಮ್ಮ ಚಿತ್ರ ಬರುತ್ತೆ ಅಂತ ತಿಂಗಳುಗಳ ಮೊದಲೇ ಟವಲ್ ಹಾಕಿ ಕೂತಿದ್ದರು. ಹಬ್ಬದ ದಿನ ಹತ್ತಿರ ಬರುತ್ತಿದ್ದಂತೆ ಟವಲೂ ಇಲ್ಲ, ಟವಲ್ ಹಾಕಿದವರೂ ಇಲ್ಲ ಎನ್ನುವಂತಾಯಿತು.

ದರ್ಶನ್ ಅಭಿನಯದ ಕುರುಕ್ಷೇತ್ರ ಮತ್ತು ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾಗಳು ಒಂದೇ ದಿನ, ಆಗಸ್ಟ್ 8 ರಂದು ತೆರೆಗೆ ಬರಲು ಸಜ್ಜಾಗಿತ್ತು. ಆದ್ರೆ, ಬೆಳವಣಿಗೆಗಳು ಸಾಗಿದಂತೆ ವರಮಹಾಲಕ್ಷ್ಮಿ ಹಬ್ಬಕ್ಕೆ ಇಬ್ಬರು ಬರಲ್ಲ ಎಂದು ನಿರ್ಧರಿಸಿ, ಹಿಂದಕ್ಕೆ ಮುಂದಕ್ಕೆ ಹೋದರು.

Kempegowda 2 releasing on august 9th

ಇದರಿಂದ ಸಹಜವಾಗಿ ಸ್ಯಾಂಡಲ್ ವುಡ್ ಅಭಿಮಾನಿಗಳು ನಿರಾಸೆಯಾದರು. ವರಮಹಾಲಕ್ಷ್ಮಿ ಹಬ್ಬಕ್ಕೆ ಯಾವುದೇ ಸಿನಿಮಾ ಇಲ್ಲದ ಎಂದು ಬೇಸರ ಮಾಡಿಕೊಂಡಿದ್ದರು. ಇದೀಗ, ಪೈಲ್ವಾನ್ ಮತ್ತು ಕುರುಕ್ಷೇತ್ರದ ಜಗಳದಲ್ಲಿ ಮೂರನೇಯವರಿಗೆ ಈ ದಿನಾಂಕ ಸಿಕ್ಕಿದೆ.

ಹೌದು, ಕೋಮಲ್ ಕುಮಾರ್ ಅಭಿನಯದ 'ಕೆಂಪೇಗೌಡ-2' ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಆಗಸ್ಟ್ 9 ರಂದು ಚಿತ್ರಮಂದಿರಕ್ಕೆ ಬರ್ತಿದೆ. ಹೀಗಾಗಿ, ಬಹಳ ವರ್ಷದ ನಂತರ ಕೋಮಲ್ ಗಾಂಧಿನಗರಕ್ಕೆ ಎಂಟ್ರಿ ಕೊಡ್ತಿದ್ದಾರೆ.

ಅಂದ್ಹಾಗೆ, ಇದು ಸುದೀಪ್ ಅಭಿನಯಿಸಿದ್ದ ಕೆಂಪೇಗೌಡ ಚಿತ್ರದ ಮುಂದುವರೆದ ಭಾಗವಲ್ಲ. ಸ್ವಮೇಕ್ ಸಿನಿಮಾ ಎಂದು ಹೇಳಲಾಗ್ತಿದೆ. ಶಂಕರ್ ಗೌಡ ಕಥೆ ಬರೆದು, ನಿರ್ದೇಶನ ಮಾಡಿದ್ದು, ವಿನೋದ್ ಎಂಬುವವರು ನಿರ್ಮಾಣ ಮಾಡಿದ್ದಾರೆ.

More from Filmibeat

English summary
Kannada actor komal kumar starrer Kempegowda 2 movie releasing on august 9th. the movie directed by shankar gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X