»   » 'ಕೆಂಪೇಗೌಡ-2' ಟ್ರೈಲರ್ ರಿಲೀಸ್: ಸುದೀಪ್ ಫ್ಯಾನ್ಸ್ ಗೆ ಶಾಕ್!

'ಕೆಂಪೇಗೌಡ-2' ಟ್ರೈಲರ್ ರಿಲೀಸ್: ಸುದೀಪ್ ಫ್ಯಾನ್ಸ್ ಗೆ ಶಾಕ್!

Posted By:
Subscribe to Filmibeat Kannada

2011 ರಲ್ಲಿ ಕಿಚ್ಚ ಸುದೀಪ್ ನಿರ್ದೇಶಿಸಿ, ನಟಿಸಿರುವ 'ಕೆಂಪೇಗೌಡ' ಚಿತ್ರ ಹಿಟ್‌ ಆಗುತ್ತಿದ್ದಂತೆ, 'ಕೆಂಪೇಗೌಡ-2' ಸಿನಿಮಾ ಬರುತ್ತದೆ ಎಂಬ ಸುದ್ದಿ ಓಡಾಡುತ್ತಲೇ ಇತ್ತು. ಆದರೆ, ಯಾವಾಗ ಸೆಟ್ಟೇರುತ್ತದೆ ಎಂಬ ಮಾಹಿತಿ ಇರಲಿಲ್ಲ.

ಆದ್ರೆ, ಈಗ ಸದ್ದು ಸುದ್ದಿಯಿಲ್ಲದೆ 'ಕೆಂಪೇಗೌಡ-2' ಶುರುವಾಗಿದ್ದು, ಟ್ರೈಲರ್ ಕೂಡ ರಿಲೀಸ್ ಆಗಿದೆ. ಚಿತ್ರದ ಟ್ರೈಲರ್ ಬಿಂದಾಸ್ ಆಗಿದೆ. ಆದ್ರೆ, ಸುದೀಪ್ ಅಭಿಮಾನಿಗಳಿಗೆ ಮಾತ್ರ ಇದು ಶಾಕಿಂಗ್ ಮತ್ತು ಸರ್ಪ್ರೈಸ್ ಆಗಿದೆ. ಮುಂದೆ ಓದಿ.....

'ಕೆಂಪೇಗೌಡ-2' ಚಿತ್ರದಿಂದ ಸುದೀಪ್ ಔಟ್!

ಇಷ್ಟು ದಿನ 'ಕೆಂಪೇಗೌಡ-2' ಚಿತ್ರದಲ್ಲಿ ಸುದೀಪ್ ನಟಿಸುತ್ತಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಇದೀಗ, ಅದು ನಿಜವಾಗಿದ್ದು, 'ಕೆಂಪೇಗೌಡ-2' ಚಿತ್ರದಿಂದ ಕಿಚ್ಚ ಸುದೀಪ್ ಹೊರಗುಳಿದಿದ್ದಾರೆ.

'ಕೆಂಪೇಗೌಡ-2' ಚಿತ್ರಕ್ಕೆ ಕೋಮಲ್ ನಾಯಕ!

ಚಿತ್ರಪ್ರೇಮಿಗಳಿಗೆ ಸರ್ಪ್ರೈಸ್ ಎಂಬಂತೆ 'ಕೆಂಪೇಗೌಡ-2' ಚಿತ್ರಕ್ಕೆ ಕೋಮಲ್ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ಬೆಳ್ಳಿತೆರೆ ಮೇಲೆ 'ಕೆಂಪೇಗೌಡ'ನಾಗಿ ಕೋಮಲ್ ಅಬ್ಬರಿಸಿಲಿದ್ದಾರೆ.

ಪೊಲೀಸ್ ಆಗಿ ಕೋಮಲ್ ಖದರ್!

'ಡೀಲ್ ರಾಜ' ಚಿತ್ರದ ನಂತರ ಎಲ್ಲೂ ಕಾಣಿಸಿಕೊಳ್ಳದ ಕೋಮಲ್ ಒಂದು ಸಣ್ಣ ಗ್ಯಾಪ್ ನ ನಂತರ ಕಮ್ ಬ್ಯಾಕ್ ಮಾಡಿದ್ದಾರೆ. 'ಕೆಂಪೇಗೌಡ-2' ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

ಪಾತ್ರಕ್ಕಾಗಿ ಸ್ಲಿಮ್ ಆದ ಕೋಮಲ್!

ಇನ್ನು 'ಕೆಂಪೇಗೌಡ-2' ಚಿತ್ರಕ್ಕಾಗಿ ನಟ ಕೋಮಲ್ ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾರೆ. 'ಡೀಲ್ ರಾಜ' ಚಿತ್ರದಲ್ಲಿ ದುಂಡುಗೆ ಇದ್ದ ಕೋಮಲ್ ಈಗ ತಮ್ಮ ದೇಹವನ್ನ ದಂಡಿಸಿ ಫೀಟ್ ಅಂಡ್ ಫೈನ್ ಆಗಿ ಪೊಲೀಸ್ ಕಾಪ್ ಆಗಿದ್ದಾರೆ.

ಫಸ್ಟ್ ಲುಕ್ ನಲ್ಲೇ ಖಡಕ್ ಡೈಲಾಗ್

''ಮೀಸೆ ಬಿಟ್ಟಿರೋರೆಲ್ಲ ಗಂಡಸರಲ್ಲ, ಮೀಸೆ ತಿರುಗಿಸೋರೆಲ್ಲ ಕೆಂಪೇಗೌಡ ಅಲ್ಲ'' ಎಂಬ ಖಡಕ್ ಡೈಲಾಗ್ ನಿಂದ ಕೋಮಲ್ ಸೆನ್ಸೇಷ್ನಲ್ ಹುಟ್ಟುಹಾಕಿದ್ದಾರೆ.

'ಸಿಂಗಂ-2 'ಚಿತ್ರದ ರೀಮೇಕ್!

ತಮಿಳಿನ ಬ್ಲ್ಯಾಕ್ ಬಸ್ಟರ್ ಸಿನಿಮಾ 'ಸಿಂಗಂ-2' ಚಿತ್ರದ ರೀಮೇಕ್ 'ಕೆಂಪೇಗೌಡ-2' ಎನ್ನಲಾಗುತ್ತಿದೆ. "ಕೆಂಪೇಗೌಡ' ಚಿತ್ರ ನಿರ್ಮಿಸಿದ ಶಂಕರೇಗೌಡ ಅವರೇ "ಕೆಂಪೇಗೌಡ-2' ಚಿತ್ರವನ್ನು ಮಾಡುತ್ತಿದ್ದಾರೆ. ಉಳಿದಂತೆ ಚಿತ್ರದ ಇತರೆ ಕಲಾವಿದರ ಬಗ್ಗೆ ಇನ್ನು ಮಾಹಿತಿ ಹೊರಬಿದ್ದಿಲ್ಲ. ಕೆಂಪೇಗೌಡ-2' ಟ್ರೈಲರ್ ಇಲ್ಲಿದೆ ನೋಡಿ

English summary
Kempegowda 2 trailer is released but you will be shocked after seeing the star cast. Popular kannada comedy actor Komal is the main lead for kempegowda-2.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada