»   » ಕೊನೆಗೂ ಕನ್ನಡ ಸಿನಿಪ್ರಿಯರ ಬೇಡಿಕೆ ಈಡೇರುತ್ತಾ.?

ಕೊನೆಗೂ ಕನ್ನಡ ಸಿನಿಪ್ರಿಯರ ಬೇಡಿಕೆ ಈಡೇರುತ್ತಾ.?

Posted By:
Subscribe to Filmibeat Kannada

ಕರ್ನಾಟಕದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಎರ್ರಾ-ಬಿರ್ರಿ ಟಿಕೆಟ್ ದರಗಳನ್ನು ಫಿಕ್ಸ್ ಮಾಡುತ್ತಾರೆ. ಇದು ಸಿನಿಮಾ ಪ್ರೇಕ್ಷಕರಿಗೆ ನುಂಗಲಾರದ ತುತ್ತಾಗಿದೆ. ಇನ್ನು ವೀಕೆಂಡ್ ಬಂತು ಅಂದ್ರೆ, ಟಿಕೆಟ್ ದರಗಳು ಗಗನಕ್ಕೇರುತ್ತವೆ, ಹೀಗೆ ತುಂಬಾ ಅಭಿಪ್ರಾಯಗಳು ಬಹಳ ಮುಂಚಿನಿಂದಲೂ ಕೇಳಿ ಬರುತ್ತಿದೆ.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಹಿನ್ನಲೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಇದೀಗ ಒಂದು ನಿರ್ಧಾರ ಕೈಗೊಂಡಿದೆ. ಚಲನಚಿತ್ರ ಅಕಾಡಮಿ ಅಧ್ಯಕ್ಷ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರು, ಇನ್ಮುಂದೆ ಕರ್ನಾಟಕದಲ್ಲಿ ಏಕರೂಪದ ಟಿಕೆಟ್ ದರ ಜಾರಿಗೆ ಬರಬೇಕು ಎಂದು ಸಿ.ಎಂ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ['ಐನಾಕ್ಸ್ ಗರುಡ' ಅನ್ಯಾಯದ ಬಗ್ಗೆ ಗುಡುಗಿದ ಕನ್ನಡ ಸಿನಿ ಪ್ರೇಕ್ಷಕ.!]

ತಮಿಳುನಾಡಿನಲ್ಲಿ ಇರುವಂತೆಯೇ, ಕರ್ನಾಟಕ ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲೂ, ಏಕರೂಪ ಪ್ರವೇಶ ದರವನ್ನು ನಿಗದಿಪಡಿಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಸರ್ಕಾರವನ್ನು ಕೋರಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸ್ಲೈಡ್ಸ್ ಗಳತ್ತ ಕಣ್ಣಾಡಿಸಿ....

120 ಮೀರಬಾರದು

ಇನ್ನುಮುಂದೆ ರಾಜ್ಯದ ಯಾವುದೇ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ 120 ರೂಪಾಯಿ ಮೀರಬಾರದು. ಒಂದುವೇಳೆ ಮೀರಿದಲ್ಲಿ, ಆ ಮಲ್ಟಿಪ್ಲೆಕ್ಸ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಚಲನಚಿತ್ರ ಅಕಾಡೆಮಿ ಸರ್ಕಾರಕ್ಕೆ ಮನವಿ ಮಾಡಿದೆ.[ತಪ್ಪೊಪ್ಪಿಕೊಂಡ ಪಿ.ವಿ.ಆರ್.! ದಂಡ ಕಟ್ಟಲು ಮಲ್ಟಿಪ್ಲೆಕ್ಸ್ ಸಿದ್ಧ.!]

ಎರಡು ಕನ್ನಡ ಸಿನಿಮಾ ಕಡ್ಡಾಯ

ಪ್ರೈಮ್ ಸಮಯದಲ್ಲಿ ಎರಡು ಕನ್ನಡ ಸಿನಿಮಾಗಳನ್ನು ಕಡ್ಡಾಯವಾಗಿ ಪ್ರದರ್ಶಿಸಲು ಆದೇಶ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿದೆ.[ನಿನ್ನೆ 'ಪಿವಿಆರ್ ಮಲ್ಟಿಪ್ಲೆಕ್ಸ್'ನಲ್ಲಿ ಆಗಿದ್ದು.! ನೀವೇನಂತೀರಿ.?]

ಚಿತ್ರಮಂದಿರಗಳ ಜಿರ್ಣೋದ್ಧಾರ

ಬರೀ ಕನ್ನಡ ಸಿನಿಮಾಗಳಷ್ಟೇ ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಸುಮಾರು 50 ಲಕ್ಷ ರೂಪಾಯಿ ಅನುದಾನ ಮತ್ತು ಹಳೆಯ ಚಿತ್ರಮಂದಿರಗಳ ಜಿರ್ಣೋದ್ಧಾರಕ್ಕೆ ಸುಮಾರು 25 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲು ಅಕಾಡೆಮಿ ಸಲಹೆ ನೀಡಿದೆ.[ಕರ್ನಾಟಕದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ನಾಚಿಕೆ ಆಗಬೇಕು..ಥೂ.!]

ಕನ್ನಡೇತರ ಚಿತ್ರಗಳಿಗೆ ತೆರಿಗೆ ಹೆಚ್ಚಳ

ಇನ್ನು ಕರ್ನಾಟಕದಲ್ಲಿ ಕನ್ನಡೇತರ ಸಿನಿಮಾಗಳಿಗೆ ಪ್ರದರ್ಶನ ತೆರಿಗೆ ಹೆಚ್ಚಿಸಿ, ಅದರಿಂದ ಬಂದ ಲಾಭವನ್ನು ಕನ್ನಡ ಚಿತ್ರರಂಗದ ಅಭಿವೃದ್ಧಿಗಾಗಿ ಬಳಸುವಂತಾಗಬೇಕು ಎಂದು ಮನವಿ ಮಾಡಲಾಗಿದೆ.

ನಕಲು ಮಾಡಿದವರ ವಿರುದ್ಧ ಕ್ರಮ

ಜೊತೆಗೆ ಕನ್ನಡ ಚಿತ್ರಗಳನ್ನು ನಕಲು ಮಾಡುವವರಿಗೆ ಗೂಂಡಾ ಕಾಯ್ದೆ ಅನ್ವಯವಾಗುವಂತೆ ಈಗಿನ ಕಾಯ್ದೆಯನ್ನು ಬಲಪಡಿಸಬೇಕು, ಎಂದು ಸಲಹೆ ನೀಡಲಾಗಿದೆ. ಮಾತ್ರವಲ್ಲದೇ ಎಲ್ಲಾ ಚಿತ್ರಮಂದಿರಗಳಲ್ಲೂ ಅಂತರ್ಜಾಲ ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನು ಮಾಡಿಸಲು ಕೋರಲಾಗಿದೆ.

English summary
The Karnataka Chalanachitra Academy, headed by Rajendra Singh Babu, in its recommendations to the state government, has suggested that movie ticket prices at multiplexes be capped at Rs 120.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada