For Quick Alerts
  ALLOW NOTIFICATIONS  
  For Daily Alerts

  ನೂತನ ಮುಖ್ಯಮಂತ್ರಿಗೆ ಚಿತ್ರರಂಗದ ಕಡೆಯಿಂದ ಗೌರವ

  By Naveen
  |
  ಜೂನ್ 21ಕ್ಕೆ ಕುಮಾರಸ್ವಾಮಿ ಅವರಿಗೆ ಸನ್ಮಾನ..! | FIlmibeat Kannada

  ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕನ್ನಡ ಚಿತ್ರರಂಗದ ಕಡೆಯಿಂದ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

  ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಜೂನ್ 21ಕ್ಕೆ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾರಾ ಗೋವಿಂದು ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸನ್ಮಾನ ಮಾಡಲಿದ್ದಾರೆ. ಜೊತೆಗೆ ಸರ್ಕಾರದ ವತಿಯಿಂದ ಚಿತ್ರರಂಗಕ್ಕೆ ಆಗಬೇಕಾದ ಕೆಲಸಗಳ ಬಗ್ಗೆ ಮನವಿ ಮಾಡಲಾಗುತ್ತದೆ.

  ನಟ ವಿಷ್ಣುವರ್ಧನ್ ಸ್ಮಾರಕ, ಮೈಸೂರಿನಲ್ಲಿ ಫಿಲ್ಮ್ ಸಿಟಿ, ಜನತಾ ಟಾಕೀಸ್, ಮಲ್ಟಿಪ್ಲೆಕ್ಸ್ ಗಳ ಸಮಸ್ಯೆ ಹೀಗೆ ಅನೇಕ ಕೆಲಸಗಳ ಕುರಿತು ಸರ್ಕಾರ ಗಮನ ಹರಿಸಬೇಕಾಗಿದ್ದು, ಈ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುತ್ತದೆ. ಕುಮಾರಸ್ವಾಮಿ ಅವರು ರಾಜಕೀಯ ರಂಗದ ಜೊತೆಗೆ ಸಿನಿಮಾಗಳನ್ನು ಮಾಡಿದ್ದು, ಚಿತ್ರರಂಗಕ್ಕೆ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸ ಚಿತ್ರರಂಗದವರದ್ದು.

  ಈ ಹಿಂದೆ ಇದ್ದ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಚಿತ್ರರಂಗಕ್ಕೆ ಅನೇಕ ಸಹಾಯಗಳನ್ನು ಮಾಡಿದ್ದು, ಈ ಸರ್ಕಾರ ಕೂಡ ಅದೇ ರೀತಿಯ ಕಾರ್ಯಗಳನ್ನು ಮಾಡಲಿ ಎಂಬುದು ವಾಣಿಜ್ಯ ಮಂಡಳಿಯ ಉದ್ದೇಶವಾಗಿದೆ. ಇನ್ನು ಜೂನ್ 21ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಪ್ರಮುಖ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ವಿತರಕರು, ಪ್ರದರ್ಶಕರು ಭಾಗಿಯಾಗಲಿದ್ದಾರೆ.

  English summary
  Karnataka Film Chamber Of Commerce to felicitate Karnataka CM Kumaraswamy on June 21st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X