For Quick Alerts
  ALLOW NOTIFICATIONS  
  For Daily Alerts

  ನಾಡ ಹಬ್ಬಕ್ಕೆ ಕೆಜಿಎಫ್ 2 ಚಿತ್ರತಂಡದಿಂದ ಭರ್ಜರಿ ಉಡುಗೊರೆ

  |

  ಭಾರತದ ಎಲ್ಲಾ ಚಿತ್ರರಂಗಗಳ ಗಮನವನ್ನು ತನ್ನತ್ತ ಸೆಳೆದಿರುವ ಕನ್ನಡ ಸಿನಿಮಾ ಕೆಜಿಎಫ್ 2. ಕೊರೊನಾ ಲಾಕ್‌ಡೌನ್ ನಿಂದಾಗಿ ಚಿತ್ರೀಕರಣ ಬಂದ್ ಮಾಡಲಾಗಿತ್ತು. ಆದರೀಗ ಮತ್ತೆ ಚಿತ್ರೀಕರಣ ಶುರುವಾಗಿದೆ.

  ಚಿತ್ರೀಕರಣ ಪುನರ್‌ ಪ್ರಾರಂಭವಾಗುತ್ತಿದ್ದಂತೆ ಮತ್ತೆ ಎಲ್ಲರ ಚಿತ್ತ ಕೆಜಿಎಫ್‌2 ನತ್ತ ಹರಿದಿದೆ. ಅನಂತ್ ನಾಗ್ ಪಾತ್ರದ ಕುರಿತಾಗಿ ಈಗಾಗಲೇ ಚರ್ಚೆ ಆರಂಭವಾಗಿದೆ.

  ಜೊತೆಗೆ ಸಂಜಯ್ ದತ್ ಪಾತ್ರದ ಬಗ್ಗೆಯೂ ಚರ್ಚೆ ಎದ್ದಿದೆ. ಸಂಜಯ್ ದತ್ ಕ್ಯಾನ್ಸರ್‌ ಗೆ ತುತ್ತಾಗಿರುವ ಕಾರಣ ಸಂಜಯ್ ದತ್‌ ರ ಅಧೀರ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ತಲೆ ಎತ್ತಿದೆ.

  ಪ್ರಕಾಶ್ ರಾಜ್ ಬಳಿಕ 'ಕೆಜಿಎಫ್' ಸೆಟ್‌ಗೆ ಮತ್ತೊಬ್ಬ ನಟನ ಎಂಟ್ರಿ!ಪ್ರಕಾಶ್ ರಾಜ್ ಬಳಿಕ 'ಕೆಜಿಎಫ್' ಸೆಟ್‌ಗೆ ಮತ್ತೊಬ್ಬ ನಟನ ಎಂಟ್ರಿ!

  ಈ ಎಲ್ಲಾ ಚರ್ಚೆ, ಕುತೂಹಲಗಳ ನಡುವೆ ಕೆಜಿಎಫ್ 2 ಚಿತ್ರತಂಡದಿಂದ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.

  ಮುಂದಿನ ತಿಂಗಳು ಟೀಸರ್ ಬಿಡುಗಡೆ

  ಮುಂದಿನ ತಿಂಗಳು ಟೀಸರ್ ಬಿಡುಗಡೆ

  ಹೌದು, ಮುಂದಿನ ತಿಂಗಳು ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ. ನಾಡಹಬ್ಬ ದಸರಾ ದಂದು ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

  ದಸರಾ ಹಬ್ಬದ ಸನಿಹದಲ್ಲಿಯೇ ಟೀಸರ್ ಬಿಡುಗಡೆ

  ದಸರಾ ಹಬ್ಬದ ಸನಿಹದಲ್ಲಿಯೇ ಟೀಸರ್ ಬಿಡುಗಡೆ

  ದಸರಾ ಹಬ್ಬದ ಸನಿಹದಲ್ಲಿಯೇ ಟೀಸರ್ ಬಿಡುಗಡೆ ಆಗಲಿದೆ. ಆದರೆ ಸ್ಪಷ್ಟ ದಿನಾಂಕ ಇನ್ನೂ ಸಹ ಘೋಷಣೆ ಆಗಿಲ್ಲ. ಆದರೆ ಕೆಜಿಎಫ್2 ಸಿನಿಮಾ ಟೀಸರ್ ಒಟ್ಟಿಗೆ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

  ಕೆಜಿಎಫ್ 2 ಚಿತ್ರೀಕರಣ ನಡೆಸುತ್ತಿದೆ

  ಕೆಜಿಎಫ್ 2 ಚಿತ್ರೀಕರಣ ನಡೆಸುತ್ತಿದೆ

  ಕೆಜಿಎಫ್ 2 ಸಿನಿಮಾದ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಕೊರೊನಾ ಮುಂಚೆ ಅರ್ಧಕ್ಕೂ ಹೆಚ್ಚು ಭಾಗ ಚಿತ್ರೀಕರಣ ಮುಗಿಸಿದ್ದ ಚಿತ್ರತಂಡ ಇನ್ನುಳಿದ ಚಿತ್ರೀಕರಣವನ್ನು ಬೇಗನೆ ಮುಗಿಸುತ್ತಿದೆ.

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
  ಸಂಜಯ್ ದತ್ ಇರುತ್ತಾರೆಯೋ ಇಲ್ಲವೋ?

  ಸಂಜಯ್ ದತ್ ಇರುತ್ತಾರೆಯೋ ಇಲ್ಲವೋ?

  ಕೆಜಿಎಫ್ 2 ನ ಮುಖ್ಯ ಪಾತ್ರ ಅಧೀರ ನಾಗಿ ಸಂಜಯ್ ದತ್ ನಟಿಸುತ್ತಿದ್ದರು. ಆದರೆ ಪ್ರಸ್ತುತ ಸಂಜಯ್ ದತ್‌ ಗೆ ಕ್ಯಾನ್ಸರ್ ಆಗಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಕೆಜಿಎಫ್ 2 ನಲ್ಲಿ ಅಧೀರನಾಗಿ ಸಂಜಯ್ ದತ್ ಇರುತ್ತಾರೆಯೋ ಇಲ್ಲವೋ ಎಂಬ ಅನುಮಾನ ಶುರುವಾಗಿದೆ.

  English summary
  KGF 2 movie teaser will release on next month for Dasara festival. It will release in Kannada, Tamil, Telugu, Malayalam and Hindi language.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X