For Quick Alerts
  ALLOW NOTIFICATIONS  
  For Daily Alerts

  'KGF-2' ಚಿತ್ರೀಕರಣಕ್ಕೆ 'ಅಧೀರ' ಸಂಜಯ್ ದತ್ ಎಂಟ್ರಿ ಯಾವಾಗ? ಇಲ್ಲಿದೆ ಮಾಹಿತಿ

  By ಫಿಲ್ಮ್ ಡೆಸ್ಕ್
  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಕೊನೆಯ ಹಂತದ ಚಿತ್ರೀಕರಣಕ್ಕೆ ಸಿನಿಮಾತಂಡ ಸಜ್ಜಾಗಿದೆ. ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿರುವ ಕೆಜಿಎಫ್ ತಂಡ ಮಂಗಳೂರು, ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಕೆಲವು ದೃಶ್ಯಗಳನ್ನು ಸೆರೆಹಿಡಿದೆ.

  ಇದೀಗ ಸಂಜಯ್ ದತ್ ಎಂಟ್ರಿಗೆ ಕಾಯುತ್ತಿರುವ ಚಿತ್ರತಂಡ ಡಿಸೆಂಬರ್ ನಲ್ಲಿ ಕೊನೆಯ ಹಂತದ ಚಿತ್ರೀಕರಣ ಮಾಡಿ ಮುಗಿಸಲು ನಿರ್ಧರಿಸಿದೆ. ಕೆಜಿಎಫ್ ನ ಅಧೀರ ಸಂಜಯ್ ದತ್ ಡಿಸೆಂಬರ್ ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ನವೆಂಬರ್ ನಲ್ಲಿ ಸಂಜಯ್ ದತ್ ಚಿತ್ರೀಕರಣಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನವೆಂಬರ್ ನಲ್ಲಿ ಸಂಜುಬಾಬಾ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಇದೀಗ ಹೊಸ ಮಾಹಿತಿ ಪ್ರಕಾರ ಡಿಸೆಂಬರ್ ನಲ್ಲಿ ಭಾಗಿಯಾಗಲಿದ್ದಾರೆ.

  ಕೆಜಿಎಫ್ 2 ನಲ್ಲಿ ರವೀನಾ ಟಂಡನ್ ಖಡಕ್ ಲುಕ್ ಅನಾವರಣಕೆಜಿಎಫ್ 2 ನಲ್ಲಿ ರವೀನಾ ಟಂಡನ್ ಖಡಕ್ ಲುಕ್ ಅನಾವರಣ

  ಕ್ಯಾನ್ಸರ್ ನಿಂದ ಗುಣಮುಖರಾಗಿರುವ ಸಂಜಬಾಬು, ಬಾಕಿ ಉಳಿದಿದ್ದ ಎಲ್ಲಾ ಸಿನಿಮಾಗಳ ಚಿತ್ರೀಕರಣ ಮುಗಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳ ಚಿತ್ರೀಕರಣ ಸಂಪೂರ್ಣ ಮಾಡಿರುವ ಸಂಜಯ್ ದತ್ ಸದ್ಯ ಕೆಜಿಎಫ್-2 ಚಿತ್ರೀಕರಣದಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ. ಯಶ್ ಮತ್ತು ಸಂಜಯ್ ದತ್ ಅವರ ಮುಖಾಮುಖಿ ದೃಶ್ಯವನ್ನು ಸೆರೆಹಿಡಿಯ ಬೇಕಿದ್ದು, ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವು ಮೂಲಗಳ ಪ್ರಕಾರ ಮುಂಬೈನಲ್ಲೇ ಚಿತ್ರೀಕರಣ ನಡೆಯಲಿದೆ ಎನ್ನಲಾಗುತ್ತಿದೆ.

  ಸಿನಿಮಾದಲ್ಲಿ ಇರುವುದು ಎಲ್ಲವೂ ಸತ್ಯ ಅಲ್ಲ ಅಂದ್ರು ರಿಯಲ್ ಲೈಫ್ ಹೀರೊ ಗೋಪಿನಾಥ್ | Filmibeat Kannada

  ಇತ್ತೀಚಿಗಷ್ಟೆ ಸಂಜಯ್ ದತ್ ಕ್ಯಾನ್ಸರ್ ನಿಂದ ಗುಣಮುಖರಾಗಿರುವುದಾಗಿ ಬಹಿರಂಗ ಪಡಿಸಿದ್ದರು. 'ದೇವರು ತನ್ನ ಪ್ರಬಲ ಸೈನಿಕರಿಗೆ ಯುದ್ಧಗಳನ್ನು ನೀಡುತ್ತಾನೆ. ನಾನು ಈ ಯುದ್ಧವನ್ನು ಗೆದ್ದಿದ್ದೇನೆ. ನಿಮ್ಮೆಲ್ಲರ ನಂಬಿಕೆ ಮತ್ತು ಬೆಂಬಲ ವಿಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಇಂತಹ ಕಠಿಣ ಸಮಯದಲ್ಲಿ ನನ್ನ ಕುಟುಂಬ, ಸ್ನೇಹಿತರು ಮತ್ತು ನನ್ನೊಂದಿಗೆ ನಿಂತಿರುವ ಎಲ್ಲಾ ಅಭಿಮಾನಿಗಳಿಗೆ ನಾನು ಕೃತಜ್ಞನಾಗಿದ್ದೇನೆ' ಎಂದು ಹೇಳಿದ್ದಾರೆ.

  English summary
  Sanjay Dutt to resume shooting for KGF-2 on December.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X