For Quick Alerts
  ALLOW NOTIFICATIONS  
  For Daily Alerts

  KGF 2 Trailer Records: ಭರ್ಜರಿ ದಾಖಲೆ ಬರೆದ 'KGF 2' ಟ್ರೈಲರ್: ಕನ್ನಡಕ್ಕಿಂತ ಇತರ ಭಾಷೆಗಳಲ್ಲಿ ಹೆಚ್ಚು ವೀವ್ಸ್!

  |

  'ಕೆಜಿಎಫ್ 2' ಸಿನಿಮಾಕ್ಕೂ ದಾಖಲೆಗಳಿಗೂ ಬಹಳ ನಂಟು. ಸಿನಿಮಾದ ಯಾವುದೇ ಅಪ್‌ಡೇಟ್ ಹೊರಗೆ ಬಿದ್ದರೂ ಅದೊಂದು ದಾಖಲೆಯಾಗಿ ಮಾರ್ಪಾಟಾಗುತ್ತದೆ. ಸಿನಿಮಾದ ಟೀಸರ್, ಟ್ರೈಲರ್, ಹಾಡು ಅದೇನೆ ಆಗಿರಲಿ ದಾಖಲೆ ಪಕ್ಕಾ.

  ನಿನ್ನೆಯಷ್ಟೆ 'ಕೆಜಿಎಫ್ 2' ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು ಬಿಡುಗಡೆ ಆದ 24 ಗಂಟೆಗಳಲ್ಲಿಯೇ ದಾಖಲೆ ಬರೆದಿದೆ ಈ ಟ್ರೇಲರ್.

  Yash: ರಾಕಿ ಭಾಯ್ ಬಟ್ಲರ್ ಇಂಗ್ಲಿಷ್ ರಹಸ್ಯ ಹೇಳಿದ ಯಶ್!Yash: ರಾಕಿ ಭಾಯ್ ಬಟ್ಲರ್ ಇಂಗ್ಲಿಷ್ ರಹಸ್ಯ ಹೇಳಿದ ಯಶ್!

  ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ 'ಕೆಜಿಎಫ್ 2' ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಬಿಡುಗಡೆ ಆದ 24 ಗಂಟೆಗಳಲ್ಲಿಯೇ ಅತಿ ಹೆಚ್ಚು ವಿವ್ಸ್ ಪಡೆದು ದಾಖಲೆ ನಿರ್ಮಿಸಿದೆ. ಅದೂ ಸಾಮಾನ್ಯದ ದಾಖಲೆಯಲ್ಲ ಹಿಂದಿನ ಯಾವ ಸಿನಿಮಾವೂ ಮಾಡಿರದ, ಮುಂದಿನ ಸಿನಿಮಾಗಳು ಮಾಡಲು ತಿಣುಕಾಡಬೇಕಾದಂಥಹಾ ದೊಡ್ಡ ದಾಖಲೆಯನ್ನೇ 'ಕೆಜಿಎಫ್ 2' ಟ್ರೈಲರ್ ನಿರ್ಮಿಸಿದೆ.

  'ಕೆಜಿಎಫ್ 2' ಸಿನಿಮಾದ ಟ್ರೈಲರ್ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಿನ್ನೆ (ಮಾರ್ಚ್ 27) ಏಕಕಾಲದಲ್ಲಿ ಬಿಡುಗಡೆ ಆಗಿತ್ತು. ಬಿಡುಗಡೆ ಆದ 24 ಗಂಟೆಗಳಲ್ಲಿ ಬರೋಬ್ಬರಿ 10 ಕೋಟಿಗೂ ಹೆಚ್ಚು ವೀವ್ಸ್‌ಗಳನ್ನು ಟ್ರೈಲರ್ ಗಳಿಸಿಕೊಂಡಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೋಂದು ವೀವ್ಸ್ ಪಡೆದ ಇನ್ನೊಂದು ಸಿನಿಮಾ ಭಾರತದಲ್ಲಿಲ್ಲ. ಈ ಮಾಹಿತಿಯನ್ನು ಸ್ವತಃ ಸಿನಿಮಾದ ನಿರ್ಮಾಣ ಸಂಸ್ಥೆ ಹೊಂಬಾಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

  ವಿಶೇಷವೆಂದರೆ ಕನ್ನಡ ಭಾಷೆಯ 'ಕೆಜಿಎಫ್2' ಟ್ರೈಲರ್ ಗಿಂತಲೂ ಇತರ ಭಾಷೆಯ ಟ್ರೈಲರ್ ಗಳು ಯೂಟ್ಯೂಬ್‌ನಲ್ಲಿ ಹೆಚ್ಚು ವೀವ್ಸ್‌ಗಳಿಸಿವೆ.

  KGF Chapter 3: 'ಖಂಡಿತಾ ಬರುತ್ತೆ' ನಿರ್ದೇಶಕ ಪ್ರಶಾಂತ್ ನೀಲ್ ವ್ಯಂಗ್ಯ?KGF Chapter 3: 'ಖಂಡಿತಾ ಬರುತ್ತೆ' ನಿರ್ದೇಶಕ ಪ್ರಶಾಂತ್ ನೀಲ್ ವ್ಯಂಗ್ಯ?

  ಕನ್ನಡದ ಟ್ರೈಲರ್ 1.80 ಕೋಟಿ ವೀವ್ಸ್ ಪಡೆದಿದ್ದರೆ, ಹಿಂದಿಯ ಟ್ರೈಲರ್ ಐದು ಕೋಟಿಗೂ ಹೆಚ್ಚು ವೀವ್ಸ್ ಗಳಿಸಿದೆ. ಇನ್ನು ತೆಲುಗಿನ ಟ್ರೈಲರ್ 2 ಕೋಟಿಗೂ ಹೆಚ್ಚು ವೀವ್ಸ್‌ಗಳನ್ನು ಗಳಿಸಿಕೊಂಡಿದೆ. ತಮಿಳಿನ ಟ್ರೈಲರ್ 1.20 ಕೋಟಿ ವೀವ್ಸ್ ಪಡೆದಿದ್ದರೆ, ಮಲಯಾಳಂ ಟ್ರೈಲರ್ 80 ಲಕ್ಷ ವೀವ್ಸ್ ಪಡೆದುಕೊಂಡಿದೆ.

  Recommended Video

  KGF 2 | ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಸಿನಿಮಾ ಮಾಡೋಕೆ ಮುಂದಾಗ್ತಾರಾ Yash | Raveena Tandon | Sanjay Dutt

  'ಕೆಜಿಎಫ್ 2' ಸಿನಿಮಾದ ಬಗ್ಗೆ ಉತ್ತರ ಭಾರತದಲ್ಲಿ ಭಾರಿ ಕ್ರೇಜ್ ಇರುವ ಕಾರಣ ಹಿಂದಿಯ ಟ್ರೈಲರ್ ಭಾರಿ ವೀವ್ಸ್ ಪಡೆದಿದೆ. ಜೊತೆಗೆ ಬಾಲಿವುಡ್‌ನ ಸ್ಟಾರ್ ಸಂಜಯ್ ದತ್ ಹಾಗೂ ನಟಿ ರವೀನಾ ಟಂಡನ್ ಸಹ ಇರುವ ಕಾರಣ ಈ ಸಿನಿಮಾದ ಬಗ್ಗೆ ಹಿಂದಿ ರಾಜ್ಯಗಳಲ್ಲಿ ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ. ತೆಲುಗಿನಲ್ಲಿಯೂ 'ಕೆಜಿಫ್' ಚಾಪ್ಟರ್ 1 ಸಿನಿಮಾ ದೊಡ್ಡ ಹಿಟ್ ಆಗಿತ್ತಾದ್ದರಿಂದ ಅಲ್ಲಿಯೂ ಟ್ರೈಲರ್ ಸೂಪರ್ ಹಿಟ್ ಆಗಿದೆ. ಕನ್ನಡದಲ್ಲಿ ಬಿಡುಗಡೆ ಆದ ಟ್ರೈಲರ್ ಸಹ ದೊಡ್ಡ ಸಂಖ್ಯೆಯ ವೀವ್ಸ್ ಅನ್ನೇ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಗಳು ದುಪ್ಪಟ್ಟಾಗುವ ಸಾಧ್ಯತೆ ಇದೆ.

  KGF verse: ಮಾರ್ಚ್ 30ಕ್ಕೆ 'KGF verse' ರಿಲೀಸ್: ಕೆಜಿಎಫ್ ತಂಡದ ಹೊಸ ಸಾಹಸವೇನು?KGF verse: ಮಾರ್ಚ್ 30ಕ್ಕೆ 'KGF verse' ರಿಲೀಸ್: ಕೆಜಿಎಫ್ ತಂಡದ ಹೊಸ ಸಾಹಸವೇನು?

  'ಕೆಜಿಎಫ್ 2' ಸಿನಿಮಾವು ಏಪ್ರಿಲ್ 14 ರಂದು ತೆರೆಗೆ ಬರಲಿದೆ. ಕನ್ನಡದ ಈ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ತಮಿಳಿನ ವಿಜಯ್ ನಟನೆಯ 'ಬೀಸ್ಟ್' ಸಿನಿಮಾ ಎದುರಾಗಿ ಬರುತ್ತಿದ್ದು, ಬಾಕ್ಸ್ ಆಫೀಸ್ ಫೈಟ್‌ನಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

  English summary
  Yash starer KGF 2 movie trailer got more than 109 million views in just 24 hours. It got 51 millions views alone in Hindi.
  Tuesday, March 29, 2022, 10:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X