Don't Miss!
- Technology
ಆಂಡ್ರಾಯ್ಡ್ ಫೋನ್ನಲ್ಲಿರುವ ಈ ಐಕಾನ್ಗಳ ಬಗ್ಗೆ ನಿಮಗೆಷ್ಟು ತಿಳಿದಿದೆ?
- News
ಕನಕಪುರ ಬಂಡೆ ಬ್ರದರ್ಸ್ಗೆ ಡೈನಾಮೇಡ್ ಆಗುತ್ತಾರ ಭಾವ ಶರತ್ ಚಂದ್ರ
- Finance
ಅಂತಾರಾಷ್ಟ್ರೀಯ ಪಾವತಿ ಕ್ರಿಪ್ಟೋ ಬಳಕೆಗೆ ಮುಂದಾಗುತ್ತಾ ರಷ್ಯಾ?
- Sports
44ನೇ ಚೆಸ್ ಒಲಿಂಪಿಯಾಡ್: 189 ತಂಡಗಳು ಮುಕ್ತ ವಿಭಾಗದಲ್ಲಿ, 154 ಮಹಿಳಾ ವಿಭಾಗದಲ್ಲಿ ನೋಂದಣಿ
- Automobiles
ಕಾರಿನ ಡ್ಯಾಶ್ಬೋರ್ಡ್ ಲೈಟ್ಗಳನ್ನು ಸರಿಪಡಿಸುವುದು ಹೇಗೆ?: ಇಲ್ಲಿವೆ ಕೆಲವು ಟಿಪ್ಸ್
- Education
BCWD Dolu And Nadaswara Music Training : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ
- Lifestyle
ಮಳೆಗಾಲದಲ್ಲಿ ಕೂದಲು ದುರ್ವಾಸನೆ ಬೀರುವುದನ್ನು ತಡೆಗಟ್ಟುವುದು ಹೇಗೆ?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಕೆಜಿಎಫ್ 3' ಚಿತ್ರೀಕರಣ ಆರಂಭ ಯಾವಾಗ? ನಿರ್ಮಾಪಕರೇ ಕೊಟ್ಟರು ಉತ್ತರ
'ಕೆಜಿಎಫ್ 2' ಸಿನಿಮಾ ಆರಂಭದಿಂದ ಪ್ರೇಕ್ಷಕರನ್ನು ಸೀಟಿನ ತುದಿಗೆ ಕುಳಿತಿರುವಂತೆ ದೃಶ್ಯ ವೈಭವವನ್ನು, ಅದ್ಭುತ ಆಕ್ಷನ್ ದೃಶ್ಯಗಳನ್ನು ಒಳಗೊಂಡಿದೆ. ಆದರೆ ಪ್ರೇಕ್ಷಕ ನಿಜಕ್ಕೂ ಸೀಟಿನಿಂದ ಮೇಲೆದ್ದು ಶಿಳ್ಳೆ, ಚಪ್ಪಾಳೆ ಹೊಡೆಯುವುದು ಸಿನಿಮಾದ ಕೊನೆಯಲ್ಲಿ 'ಕೆಜಿಎಫ್ ಚಾಪ್ಟರ್ 3' ಬರಲಿದೆ ಎಂಬ ಸುಳಿವನ್ನು ನಿರ್ದೇಶಕರು ನೀಡಿದಾಗ.
ಸಿನಿಮಾದಲ್ಲಿ ಆಫೀಸ್ ಬಾಯ್ ಪಾತ್ರದಲ್ಲಿ ನಟಿಸಿರುವ ಜಿಜಿ ಗೌಡ, ಆ ಕೆಜಿಎಫ್ ಕತೆಯುಳ್ಳ ಆ ಡೈರಿಯನ್ನು ಸರಿಸಿದಾಗ ಪ್ರೇಕ್ಷಕರಿಗೆ ಆಗುವ ರೋಮಾಂಚನ ಬೇರೆಯದ್ದೇ ಲೆವೆಲ್‌ನದ್ದು. 'ಕೆಜಿಎಫ್ 2' ಸಿನಿಮಾ ಬಿಡುಗಡೆ ಆದಾಗಿನಿಂದಲೇ 'ಕೆಜಿಎಫ್ 3' ಸಿನಿಮಾದ ಬಗ್ಗೆ ನಿರೀಕ್ಷೆಗಳು ಹುಟ್ಟಿಕೊಂಡು ಬಿಟ್ಟಿವೆ.

ಸಿನಿಮಾ ಬಿಡುಗಡೆಗೆ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಶಾಂತ್ ನೀಲ್, 'ಕೆಜಿಎಫ್ 3' ಸಿನಿಮಾ ಇನ್ನೂ ಎಂಟು ವರ್ಷವಾದ ಮೇಲೆ ಬರುತ್ತದೆ ಎಂದು ಬಿಡು ಬೀಸಿನಲ್ಲಿ ಉತ್ತರಿಸಿದ್ದರು. ಆದರೆ ಈಗ ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರ್, 'ಕೆಜಿಎಫ್ 3' ಸಿನಿಮಾದ ಚಿತ್ರೀಕರಣ ಯಾವಾಗ ಆರಂಭವಾಗುತ್ತದೆ, ಸಿನಿಮಾ ಬಿಡುಗಡೆ ಯಾವಾಗ ಆಗಲಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ.

'ಕೆಜಿಎಫ್ 3' ಸಿನಿಮಾ ಬಗ್ಗೆ ನಿರ್ಮಾಪಕ ಮಾತು
ದೈನಿಕ್ ಭಾಸ್ಕರ್ ಗೆ ವಿಜಯ್ ಕಿರಂಗೂರ್ ನೀಡಿರುವ ಸಂದರ್ಶನದಲ್ಲಿ 'ಕೆಜಿಎಫ್ 3' ಸಿನಿಮಾದ ಬಗ್ಗೆ ಮಾತನಾಡಿರುವ ಅವರು, 'ಕೆಜಿಎಫ್ 3' ಸಿನಿಮಾದ ಚಿತ್ರೀಕರಣ ಇದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂದಿದ್ದಾರೆ. ಆ ಮೂಲಕ 'ಕೆಜಿಎಫ್ 3' ಸಿನಿಮಾ ಬರುವುದು ಅಧಿಕೃತ ಎಂಬಂತಾಗಿದೆ.

2024 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ: ವಿಜಯ್ ಕಿರಗಂದೂರ್
'ಕೆಜಿಎಫ್ 3' ಸಿನಿಮಾದ ಬಗ್ಗೆ ಇನ್ನಷ್ಟು ಮಾಹಿತಿ ನೀಡಿರುವ ವಿಜಯ್ ಕಿರಗಂದೂರ್, ''''ಕೆಜಿಎಫ್ 3' ಸಿನಿಮಾದ ಚಿತ್ರೀಕರಣ ಅಕ್ಟೋಬರ್‌ನಲ್ಲಿ ಶುರುವಾಗಲಿದೆ. ಸಿನಿಮಾ ಬಿಡುಗಡೆ 2024 ಕ್ಕೆ ಆಗಬಹುದು. ಪ್ರಶಾಂತ್ ನೀಲ್ ಸದ್ಯಕ್ಕೆ 'ಸಲಾರ್' ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ ಆ ಸಿನಿಮಾದ 35% ಚಿತ್ರೀಕರಣ ಮುಗಿದಿದೆ. 'ಕೆಜಿಎಫ್ 3' ಸಿನಿಮಾಕ್ಕೆ ನಾವು 'ಮಾರ್ವೆಲ್' ಮಾದರಿ ಯೂನಿವರ್ಸ್ ಸೃಷ್ಟಿಸಲು ಹೊರಟಿದ್ದೇವೆ. ಬೇರೆ ಬೇರೆ ಸಿನಿಮಾಗಳ ಬೇರೆ ಬೇರೆ ಪಾತ್ರಗಳನ್ನು 'ಕೆಜಿಎಫ್ 3' ಸಿನಿಮಾಕ್ಕೆ ಕರೆತರಲಿದ್ದೇವೆ'' ಎಂದಿದ್ದಾರೆ.

'ಕೆಜಿಎಫ್ 3' ಸಿನಿಮಾದ ಕತೆ ಏನಾಗಿರಬಹುದು?
'ಕೆಜಿಎಫ್ 2' ಸಿನಿಮಾದಲ್ಲಿ ರಾಕಿ ಭಾಯ್ ಸಮುದ್ರಕ್ಕೆ ಬಿದ್ದಿದ್ದಾನೆ. ಆದರೆ ಅದೇ ಸಮಯಕ್ಕೆ ಸರಿಯಾಗಿ ಮತ್ತೊಂದೆಡೆ ಪ್ರಧಾನಿ ರಮಿಕಾ ಸೇನ್, ಅಮೆರಿಕದ ಗುಪ್ತಚರ ಸಂಸ್ಥೆ ಎಫ್‌ಬಿಐ ನೀಡಿರುವ, ರಾಕಿ ಭಾಯ್ ವಿದೇಶಗಳಲ್ಲಿ ಮಾಡಿರುವ ಅಪರಾಧ ಚಟುವಟಿಕೆಗಳ ಫೈಲ್ ಅನ್ನು ತೆರೆದು ನೋಡುತ್ತಾಳೆ. ಅಲ್ಲಿಗೆ, 'ಕೆಜಿಎಫ್ 3' ಸಿನಿಮಾವು ರಾಕಿ ಭಾಯ್ ವಿದೇಶಗಳಲ್ಲಿ ಮಾಡಿರುವ ಅಪರಾಧ ಚಟುವಟಿಕೆಗಳ ಕತೆಯನ್ನು ಹೊಂದಿರಲಿದೆಯೇ? ಎಂಬ ಕುತೂಹಲ ಕೆರಳಿಸಿದೆ.

ಬೇರೆ ಸಿನಿಮಾಗಳ ಪಾತ್ರಗಳು ಎಂಟ್ರಿ ಕೊಡಲಿವೆ
ಅಲ್ಲದೆ, ವಿಜಯ್ ಕಿರಗಂದೂರ್ ನೀಡಿರುವ ಇನ್ನೊಂದು ಮಾಹಿತಿಯೆಂದರೆ, 'ಮಾರ್ವೆಲ್' ಮಾದರಿ ಬೇರೆ ಸಿನಿಮಾಗಳ ಪಾತ್ರಗಳನ್ನು 'ಕೆಜಿಎಫ್ 3' ನಲ್ಲಿ ಸೇರಿಸಲಾಗುತ್ತದೆ. ಅಂದರೆ ಬೇರೆ ಹಿಟ್ ಸಿನಿಮಾಗಳಲ್ಲಿ ವಿಲನ್ ಆಗಿರುವವರು ಈಗ 'ಕೆಜಿಎಫ್ 3' ದುನಿಯಾಕ್ಕೆ ಬರಲಿದ್ದಾರೆ. ವಿಲನ್‌ಗಳು ಮಾತ್ರವೇ ಅಲ್ಲ, ಹೀರೋಗಳು ಸಹ 'ಕೆಜಿಎಫ್ 3' ಸಿನಿಮಾದ ದುನಿಯಾಕ್ಕೆ ಬರುವ ಸಾಧ್ಯತೆ ಇದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ 2024 ರವರೆಗೆ ಕಾಯಲೇ ಬೇಕು.