twitter
    For Quick Alerts
    ALLOW NOTIFICATIONS  
    For Daily Alerts

    "ನಾನು ಶೋಕಿಗಾಗಿ ಬಂದಿಲ್ಲ.. ಕನ್ನಡ ಸಿನಿಮಾನ ದೊಡ್ಡಮಟ್ಟದಲ್ಲಿ ಬೆಳೆಸಬೇಕು": ಯಶ್ 15 ವರ್ಷಗಳ ಹಳೇ ಆಡಿಯೋ ವೈರಲ್

    |

    'KGF' ರಾಕಿ ಭಾಯ್ ಆಗಿ ನಟ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. ಹಲವು ವೇದಿಕೆಗಳಲ್ಲಿ ಯಶ್ ಕನ್ನಡ ಸಿನಿಮಾಗಳನ್ನು ನೆಕ್ಸ್ಟ್ ಲೆವೆಲ್‌ಗೆ ಕೊಂಡೊಯ್ಯುವುದಾಗಿ ಹೇಳುತ್ತಾ ಬಂದಿದ್ದರು. ರಾಕಿ ಭಾಯ್ ಆಗಿ ಅದನ್ನು ಸಾಧಿಸಿ ತೋರಿಸಿದ್ದಾರೆ. 'KGF' ಸರಣಿ ಸಿನಿಮಾಗಳನ್ನು ಭಾರತೀಯ ಚಿತ್ರರಂಗವೇ ಕೊಂಡಾಡಿದೆ. ಯಶ್ ಮುಂದಿನ ಸಿನಿಮಾ ಯಾವ್ದು ಅಂತ ಬಾಲಿವುಡ್‌ ಕೂಡ ಕಾಯ್ತಿದೆ.

    ಕನ್ನಡ ಸಿನಿಮಾಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡಬೇಕು. ನಮ್ಮ ಇಂಡಸ್ಟ್ರಿ ಬಗ್ಗೆ ಬೇರೆ ಇಂಡಸ್ಟ್ರಿಯವರು ಮಾತನಾಡುವಂತಾಗಬೇಕು ಎನ್ನುವುದು ರಾಕಿಂಗ್ ಸ್ಟಾರ್ ಕನಸಾಗಿತ್ತು. ಐದಾರು ವರ್ಷಗಳಿಂದ ಈ ಬಗ್ಗೆ ಅವರು ಕೆಲ ವೇದಿಕೆಗಳಲ್ಲಿ ಮಾತನಾಡುತ್ತಾ ಬಂದಿದ್ದಾರೆ. 'KGF' ಫಸ್ಟ್ ಚಾಪ್ಟರ್ ಸಕ್ಸಸ್ ನಂತರ ಇದು ಜಸ್ಟ್ ಬಿಗಿನಿಂಗ್ ಅಷ್ಟೆ ಎಂದು ಹೇಳಿದ್ದರು. ಸೆಕೆಂಡ್ ಚಾಪ್ಟರ್‌ ಮತ್ತೊಂದು ಲೆವೆಲ್‌ಗೆ ಹೋಗಿದ್ದು ಗೊತ್ತೇಯಿದೆ. ಯಶ್ ಇಂತಾದೊಂದು ಕನಸು ಕಂಡಿದ್ದು ಇಂದು ನಿನ್ನೆಯಲ್ಲ. ಅವರು ಇಂತಾದೊಂದು ಕನಸಿನೊಂದಿಗೆ ಬಣ್ಣದಲೋಕಕ್ಕೆ ಬಂದಿದ್ದರು. 15 ವರ್ಷಗಳ ಹಿಂದೆಯೇ ಈ ಬಗ್ಗೆ ಮಾತನಾಡಿದ್ದರು ಎಂದರೆ ಅಚ್ಚರಿಯಾಗುತ್ತದೆ.

    ಹೌದು ಹಿರಿಯ ಪತ್ರಕರ್ತೆ ಎಸ್‌. ಜಿ ತುಂಗಾ ರೇಣುಕಾ ಅವರು 15 ವರ್ಷಗಳ ಹಿಂದೆ ಚಿತ್ರಾ ಮ್ಯಾಗಜೀನ್‌ಗಾಗಿ ನಟ ಯಶ್ ಅವರ ಸಂದರ್ಶನ ನಡೆಸಿದ್ದರು. ಆದರ ಆಡಿಯೋ ಟೇಪ್ ಈಗ ಸಿಕ್ಕಿದೆ. ರಾಕಿಂಗ್ ಸ್ಟಾರ್ ಅಂದು ಆಡಿದ್ದ ಮಾತುಗಳನ್ನು ತುಂಗಾ ರೇಣುಕಾ ಅವರು ಕೇಳಿಸಿ, ಯಶ್ ಮಹಾತ್ವಾಕಾಂಕ್ಷೆ ಎಂಥದ್ದು, ಆತ್ಮವಿಶ್ವಾಸ ಎಂಥದ್ದು ಎನ್ನುವುದನ್ನು ಬಿಡಿಸಿ ಹೇಳಿದ್ದಾರೆ.

    ಯಶ್ 15 ವರ್ಷಗಳ ಹಿಂದಿನ ಸಂದರ್ಶನ

    ಯಶ್ 15 ವರ್ಷಗಳ ಹಿಂದಿನ ಸಂದರ್ಶನ

    ಅಂದು ನಟ ಯಶ್ ಅವರ ಸಂದರ್ಶನ ಮಾಡಿದ ಘಟನೆಯನ್ನು ತುಂಗಾ ರೇಣುಕಾ ಅವರು ನೆನಪಿಸಿಕೊಂಡಿದ್ದಾರೆ. "15 ವರ್ಷಗಳ ಹಿಂದೆ 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿಯಲ್ಲಿ ಯಶ್ ನಟಿಸುತ್ತಿದ್ದರು. ನಮ್ಮ ಪತಿ ನಾಗರಾಜ್ ಮೂರ್ತಿ ಧಾರಾವಾಹಿಯಲ್ಲಿ ಯಶ್ ಮಾವನ ಪಾತ್ರ ಮಾಡುತ್ತಿದ್ದರು. ದೀಪಾ ಮಗಳು, ಯಶ್ ಅವರ ಲವರ್ ಪಾತ್ರ. ಆ ಧಾರಾವಾಹಿ ನೋಡಿ ನಮ್ಮ ಯಜಮಾನರಿಗೆ ಹೇಳಿ ಯಶ್‌ನ ಕರ್ಕೊಂಡು ಬನ್ನಿ ಯಶ್ ಸಂದರ್ಶನ ಮಾಡೋಣ ಎಂದಿದ್ದೆ. ಒಂದು ದಿನ ಕರೆದುಕೊಂಡು ಬಂದಿದ್ದರು. ಬಹಳ ಡೌನ್ ಟು ಅರ್ಥ್, ಯಶ್, ಇವತ್ತು ಬೆಳೆದಿದ್ದಾರೆ ಎಂದು ಈ ಮಾತು ಹೇಳುತ್ತಿದ್ದೇನೆ ಎಂದುಕೊಳ್ಳಬೇಡಿ. ಅಮ್ಮ ನನ್ನನ್ನು ಈ ರೀತಿ ಸಂದರ್ಶನ ಯಾರು ಮಾಡಿಲ್ಲ ಎಂದಿದ್ದರು."

    ಇಂಡಸ್ಟ್ರಿ ಬಗ್ಗೆ ಆ ಮಾತು ಕೇಳಲು ಇಷ್ಟ ಇಲ್ಲ

    ಇಂಡಸ್ಟ್ರಿ ಬಗ್ಗೆ ಆ ಮಾತು ಕೇಳಲು ಇಷ್ಟ ಇಲ್ಲ

    "ನಾನು ಚಿತ್ರರಂಗಕ್ಕೆ ಬರಬೇಕು ಅಂತಲೇ ಬೆಂಗಳೂರಿಗೆ ಬಂದಿದ್ದು. ಇಲ್ಲಿ ಏನಾದರೂ ಸಾಧಿಸಬೇಕು. ಕನ್ನಡ ಚಿತ್ರರಂಗ ಸೀಮಿತ ಮಾರುಕಟ್ಟೆ ಎನ್ನುತ್ತಾರೆ. ನನಗೆ ಅದನ್ನು ಕೇಳಲು ಇಷ್ಟ ಇಲ್ಲ. ನಾನು ನಿಜವಾಗಿಯೂ ಇಲ್ಲಿ ಏನಾದರೂ ಸಾಧಿಸಿ ತೋರಿಸುತ್ತೀನಿ ಎಂದಿದ್ದರು. ನಾನು ಒಮ್ಮೆ ಆತನ ಮಾತುಗಳನ್ನು ಕೇಳಿ, ಇನ್ನು 2 ಸಿನಿಮಾ ಮಾಡಿಲ್ಲ ನೆಟ್ಟಗೆ, ಏನ್ ಈ ಹುಡುಗ ತುಂಬಾ ಓವರ್ ಕಾನ್ಫಿಡೆನ್ಸ್‌ನಿಂದ ಮಾತನಾಡುತ್ತಿದ್ದಾನೆ ಎಂದುಕೊಂಡಿದ್ದೆ. ಆದರೆ ಯಶ್ ಮುಖ ನೋಡಿದರೆ ಏನೋ ಸಾಧಿಸಲು ಈ ರೀತಿ ಮಾತನಾಡುತ್ತಿದ್ದಾರೆ ಎನ್ನಿಸಿತ್ತು. ಅವರ ತಾಯಿ ಅದ್ಯಾವ ಗಳಿಗೆಯಲ್ಲಿ ಜನ್ಮ ಕೊಟ್ಟರೊ ಇವತ್ತು ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಸ್ತಿ ಆಗಿದ್ದಾರೆ."

    ಯಶ್ 15 ವರ್ಷಗಳ ಹಿಂದೆಯೇ ಹೇಳಿದ್ದರು

    ಯಶ್ 15 ವರ್ಷಗಳ ಹಿಂದೆಯೇ ಹೇಳಿದ್ದರು

    "ಕನ್ನಡ ಚಿತ್ರರಂಗವನ್ನು ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಯಶ್‌ಗೆ ಸಲ್ಲುತ್ತಿದೆ. ಅಂತಹ ಯಶ್‌ನ ನಾನು 15 ವರ್ಷಗಳ ಹಿಂದೆ ಮಾತನಾಡಿಸಿದ್ದೆ ಎನ್ನುವುದು ಖುಷಿ ತಂದಿದೆ. ಯಶ್ ಸಿನಿಮಾಗಳಲ್ಲಿ ನಟಿಸಿದ ಮೇಲೆ ಕಾರ್ಯಕ್ರಮಗಳಲ್ಲಿ ಹೇಳುತ್ತಿದ್ದರು. ನಾನು ಮುಂದಿನ ಬಾರಿ ಏನಾದರೂ ಸಾಧಿಸಿ ಬರ್ತೀನಿ ಎನ್ನುತ್ತಿದ್ದರು. ಅದನ್ನು ನೀವು ಆಗ ಕೇಳಿದ್ದಿರಿ. ಆದರೆ ನಾನು ಮೊದಲ ದಿನದ ಸಂದರ್ಶನ ಮಾಡಿದಾಗಲೇ ಕೇಳಿದ್ದೆ. ಮೊನ್ನೆ ಮನೆಯಲ್ಲಿ ಏನೋ ಹುಡುಕುತ್ತಾ ಇದ್ದಾಗ ಯಶ್ ಅಂದು ಮಾತನಾಡಿದ್ದ ಆಡಿಯೋ ಕ್ಯಾಸೆಟ್ ಸಿಕ್ತು."

    ನಾನು ಬಂದಿದ್ದೇ ಆಕ್ಟರ್ ಆಗೋಕೆ

    ನಾನು ಬಂದಿದ್ದೇ ಆಕ್ಟರ್ ಆಗೋಕೆ

    "ಬಿಎ ಜರ್ನಲಿಸಂ ಸೈಕಾಲಜಿ ತಗೊಂಡಿದ್ದೆ. 2 ವರ್ಷ ಆಯ್ತು. ಈ ವರ್ಷ ಹೋಗೋಕೆ ಆಗಲಿಲ್ಲ. 'ಮೊಗ್ಗಿನ ಮನಸ್ಸು' ಸಿನಿಮಾ ಬಂತು, ಈ ವರ್ಷ ಹೋಗಲು ಆಗಲಿಲ್ಲ. ಲಾಸ್ಟ್ ಇಯರ್ ಎಕ್ಸಾಂ ಬರೆಯಲು ಆಗಲಿಲ್ಲ. ಕರೆಸ್ಪಾಂಡೆನ್ಸ್ ಅಲ್ಲಿ ಮಾಡಬೇಕು. ನಾನು ಡಿಸೈಡ್ ಮಾಡಿಬಿಟ್ಟಿದ್ದೆ. ಇದು ಸಿನಿಮಾ ಬೇಕಾ ? ಓದು ಬೇಕಾ ಎಂದು? ನಾನು ಪಿಯುಸಿ ಆದಮೇಲೆ ಬೆಂಗಳೂರಿಗೆ ಬಂದಿದ್ದೆ ಆಕ್ಟರ್ ಆಗಬೇಕು ಎಂದು. ಡಿಗ್ರಿಂ ಸೇರ್ಕೊ ಅಂದರು, ಇಲ್ಲ ಆಕ್ಟಿಂಗ್ ಸ್ಕೂಲ್ ಸೇರ್ತಿನಿ ಎಂದೆ. ಆಮೇಲೆ ನಾನೇ ನಿರ್ಧಾರ ಕೈಗೊಂಡು, ಬೆಂಗಳೂರಿಗೆ ಬಂದು ರಂಗಭೂಮಿಯಲ್ಲಿ ಕೆಲಸ ಮಾಡಲು ಶುರುಮಾಡಿದೆ. ಮೊದಲಿಗೆ ರಂಗದ ಹಿಂದೆ ಹೆಚ್ಚು ಕೆಲಸ ಮಾಡುತ್ತಿದ್ದೆ. ಆಕ್ಟಿಂಗ್ ಕಮ್ಮಿ. ನಂತರ ಸಣ್ಣ ಸಣ್ಣ ರೋಲ್ ಮಾಡಲು ಶುರುಮಾಡಿದೆ.

    ಧಾರಾವಾಹಿಯಿಂದ ಸಿನಿಮಾ ಅವಕಾಶ ಸಿಕ್ತಿದೆ

    ಧಾರಾವಾಹಿಯಿಂದ ಸಿನಿಮಾ ಅವಕಾಶ ಸಿಕ್ತಿದೆ

    "ನಾಟಕಗಳಲ್ಲಿ ನಟಿಸೋದು ನೋಡಿ ಸೀರಿಯಲ್ ಅವಕಾಶ ಸಿಕ್ತು. ಸೀರಿಯಲ್‌ನಲ್ಲಿ ನಟಿಸೋದು ನೋಡಿ ಈಗ ಸಿನಿಮಾಗಳಲ್ಲಿ ನಟಿಸೋ ಛಾನ್ಸ್ ಸಿಕ್ತಿದೆ. 'ಉತ್ತರಾಯಣ' ಅನ್ನೋ ಸೀರಿಯಲ್ ಮೊದಲು ಮಾಡ್ದೆ. ಅದು ಜಾಸ್ತಿ ದಿನ ಹೋಗಲಿಲ್ಲ. ಅದರ ನಂತರ 'ನಂದ ಗೋಕುಲ' ಆಮೇಲೆ 'ಮಳೆಬಿಲ್ಲು' ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮಾಡ್ದೆ. 'ಪ್ರೀತಿ ಇಲ್ಲದ ಮೇಲೆ' ಮಾಡಿದ್ದು. 'ಮಳೆಬಿಲ್ಲು' ಪಾತ್ರಕ್ಕೆ ಲೇಡಿಸ್ ಫ್ಯಾನ್ಸ್ ಜಾಸ್ತಿ ಇದ್ದರು. ಜನಗಳು ಹಾರೈಸಬೇಕು.

    ನಾನು ಈ ಫೀಲ್ಡಿಗೆ ಶೋಕಿಗೆ ಬಂದಿಲ್ಲ!

    ನಾನು ಈ ಫೀಲ್ಡಿಗೆ ಶೋಕಿಗೆ ಬಂದಿಲ್ಲ!

    "ಒಂದಂತೂ ಹೇಳ್ತೀನಿ. ಈ ಫೀಲ್ಡಿಗೆ ಶೋಕಿಗೆ, ಏನೋ ನೋಡೋಣ ಎಂದು ಬಂದಿಲ್ಲ. ಅದಕ್ಕೆ ಬೇಕಾದ ತಯಾರಿ, ಶ್ರಮ ಪಡ್ತಿದ್ದೀನಿ. ಜನ ಪ್ರೋತ್ಸಾಹಿಸಬೇಕು. ಇಂಡಸ್ಟ್ರಿಯಲ್ಲಿರೋ ನಿರ್ದೇಶಕರು, ನಿರ್ಮಾಪಕರು ಕರೆದು ಅವಕಾಶ ಕೊಡಬೇಕು. ನನಗಂತ ಅಲ್ಲ, ಇಂಡಸ್ಟ್ರಿಯಲ್ಲಿ ಹತ್ತು ಹದಿನೈದು ಹೀರೊಗಳಿರಬೇಕು. ನಿರ್ದೇಶಕರು ಸತತವಾಗಿ ಒಳ್ಳೆ ಸಿನಿಮಾಗಳನ್ನು ಕೊಡಬೇಕು. ಬೇರೆ ಇಂಡಸ್ಟ್ರಿಗಳ ಜೊತೆ ಕಾಂಪಿಟ್ ಮಾಡಬೇಕು ಎನ್ನುವುದು ನನ್ನ ಆಸೆ. ನನ್ನ ದೊಡ್ಡ ಆಸೆ ಏನಂದರೆ ಕನ್ನಡಕ್ಕೆ ಓವರ್‌ಸೀಸ್ ಮಾರ್ಕೆಟ್ ಬೆಳೆಸಬೇಕು. ಆಮೇಲೆ ಸಕ್ಸಸ್ ಮಾಡಬೇಕು. ಆ ರೀತಿ ಕನ್ನಡವನ್ನು ಬೆಳೆಸಬೇಕು ಎನ್ನುವ ಗುರಿ ನನ್ನದು. ಅದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಬೇಕು."

    English summary
    KGF Actor Rocking Star Yash 15 Years Old Interview Audio clip Viral Now. know More.
    Tuesday, September 27, 2022, 0:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X