For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 2': 30 ದಿನ, 5ನೇ ವಾರ, ಕಲೆಕ್ಷನ್ ಬೀಳೋ ಮಾತೇ ಇಲ್ಲ ಗುರು!

  |

  ಕನ್ನಡದ ಒಂದು ಸಿನಿಮಾ ಇಡೀ ಜಗ್ಗತ್ತಿನ ಗಮನ ಸೆಳೆದಿದೆ. ಚಿತ್ರ ರಿಲೀಸ್ ಆದ ಮೂರೇ ದಿನದಲ್ಲಿ ಭವಿಷ್ಯ ಬರೆಯುವ ಕಾಲ ಇದು. ಇಂಥಹ ಸಮಯದಲ್ಲಿ 'ಕೆಜಿಎಫ್ 2' 30 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ವಿಶ್ವಾದ್ಯಂತ ಕೆಜಿಎಫ್ 2 ಅಬ್ಬರ ಕಡಿಮೆ ಆಗಿಲ್ಲ. ಬಾಕ್ಸಾಫೀಸ್‌ನಲ್ಲಿ ಕಾಂಚಣದ ಝಣ ಝಣ ಸದ್ದು ಕೂಡ ನಿಂತಿಲ್ಲ.

  KGF 2 Collection | 30ನೇ ದಿನ KGF 2 ಕಲೆಕ್ಷನ್‌ಗೆ ವಿಶ್ಲೇಷಕರು ಹೇಳಿದ್ದೇನು? | Yash | Prashanth Neel

  'ಕೆಜಿಎಫ್ 2' ಬಾಕ್ಸಾಫೀಸ್ ವಿಚಾರದಲ್ಲಿ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಿವೆ. ದಿನದಿಂದ ದಿನಕ್ಕೆ ಬಾಕ್ಸಾಫೀಸ್ ಕಲೆಕ್ಷನ್ ಹೆಚ್ಚುತ್ತಲೇ ಇದೆ. ಸಿನಿಮಾ ರಿಲೀಸ್ ಆದ 30ನೇ ದಿನವೂ ದಾಖಲೆ ಗಳಿಕೆ ಮಾಡಿದೆ. ಸಿನಿಮಾ ಬಿಡುಗಡೆಯಾಗಿ 30 ದಿನ ಆಗಿದೆ. ರಿಲೀಸ್ ಆಗಿ 30ನೇ ದಿನಕ್ಕೆ ಭಾರತದ ಯಾವ ಸಿನಿಮಾ ಮಾಡದಷ್ಟು ಕಲೆಕ್ಷನ್ 'ಕೆಜಿಎಫ್ 2' ಮಾಡಿದೆ.

  'ಸರ್ಕಾರು ವಾರಿ ಪಾಟ' ರಿಲೀಸ್ ಆಗಿದ್ದರೂ 29ನೇ ದಿನವೂ ಜಗ್ಗಿಲ್ಲ 'ಕೆಜಿಎಫ್ 2'!'ಸರ್ಕಾರು ವಾರಿ ಪಾಟ' ರಿಲೀಸ್ ಆಗಿದ್ದರೂ 29ನೇ ದಿನವೂ ಜಗ್ಗಿಲ್ಲ 'ಕೆಜಿಎಫ್ 2'!

  ಈ ವಾರಾಂತ್ಯದಲ್ಲಿ 'ಕೆಜಿಎಫ್ 2' ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಚಿತ್ರ ಒಟ್ಟಾರೆ ಗಳಿಕೆಯಲ್ಲಿ ಸ್ಥಿರತೆ ಕಂಡು ಬಂದಿದೆ. ದೊಡ್ಡ ಮಟ್ಟದಲ್ಲಿ ಗಳಿಕೆ ಕುಸಿದಿಲ್ಲ. ವಾರ ಪೂರ್ತಿಯೂ ಕೆಜಿಎಫ್ 2 ಚಿತ್ರದ ಬಾಕ್ಸಾಫೀಸ್ ರಿಪೋರ್ಟ್ ತಕ್ಕ ಮಟ್ಟಿಗೆ ಇದೆ. ಅದು ವಾರಾಂತ್ಯದಲ್ಲಿ ಮತ್ತಷ್ಟು ಹೆಚ್ಚಾಗುತ್ತದೆ.

  30ನೇ ದಿನಕ್ಕೆ ಒಟ್ಟಾರೆ 'ಕೆಜಿಎಫ್ 2' ಕಲೆಕ್ಷನ್ 1180 ಕೋಟಿ ರೂ!

  30ನೇ ದಿನಕ್ಕೆ ಒಟ್ಟಾರೆ 'ಕೆಜಿಎಫ್ 2' ಕಲೆಕ್ಷನ್ 1180 ಕೋಟಿ ರೂ!

  'ಕೆಜಿಎಫ್ 2' 30 ದಿನಕ್ಕೂ ತನ್ನ ಓಟ ಮುಂದುವರೆಸಿದೆ. ಟ್ರೇಡ್ ವಿಶ್ಲೇಷಕರ ಪ್ರಕಾರ ಕೆಜಿಎಫ್ 2 ವಿಶ್ವದಾದ್ಯಂತ 1180 ಕೋಟಿ ರೂ. ಗಳಿಕೆ ಕಂಡಿದೆ.

  ವಿಶ್ವದಾದ್ಯಂತ 'ಕೆಜಿಎಫ್ 2' ಬಾಕ್ಸಾಫೀಸ್ ಕಲೆಕ್ಷನ್

  ಮೊದಲ ವಾರ- ₹ 720.31 ಕೋಟಿ

  ಎರಡನೇ ವಾರ- ₹ 223.51 ಕೋಟಿ

  ಮೂರನೇ ವಾರ- ₹ 140.55 ಕೋಟಿ

  4ನೇ ವಾರ- ₹ 91.26 ಕೋಟಿ


  5ನೇ ವಾರ

  ಮೊದಲ ದಿನ- 5.20 ಕೋಟಿ

  ನೋ ವೇ ಚಾನ್ಸೇ ಇಲ್ಲ: ಹಾಲಿವುಡ್ ಸಿನಿಮಾಗೂ ಜಗ್ಗುತ್ತಿಲ್ಲ 'ಕೆಜಿಎಫ್ 2'ನೋ ವೇ ಚಾನ್ಸೇ ಇಲ್ಲ: ಹಾಲಿವುಡ್ ಸಿನಿಮಾಗೂ ಜಗ್ಗುತ್ತಿಲ್ಲ 'ಕೆಜಿಎಫ್ 2'

  1500 ಕೋಟಿಗೆ ಕೆಜಿಎಫ್ 2 ಸನಿಹ!

  1500 ಕೋಟಿಗೆ ಕೆಜಿಎಫ್ 2 ಸನಿಹ!

  ಕೆಜಿಎಫ್ 2 ಸಿನಿಮಾ ನಾಲ್ಕು ವಾರಗಳನ್ನು ಯಶಸ್ವಿಯಾಗಿ ಮುಗಿಸಿ, 5ನೇ ವಾರಕ್ಕೆ ಕಾಲಿಟ್ಟಿದೆ. ಈಗ ಕೆಜಿಎಫ್ 2 ಚಿತ್ರದ ಮುಂದಿನ ಗುರಿ 1200 ಕೋಟಿ. ಈ ಮೊತ್ತವನ್ನು ಗಳಿಸಲು ಕೆಜಿಎಫ್ 2 ಚಿತ್ರಕ್ಕೆ ಈ ವಾರಾಂತ್ಯ ಸಾಕು. ಈ ಮೊತ್ತ ಕಷ್ಟಕರವೂ ಅಲ್ಲ. ಹಾಗಾಗಿ ಕೆಜಿಎಫ್ 2, 1500 ಕೋಟಿ ಕ್ಲಬ್ ಸೇರೋದು ಯಾವಾಗ ಎನ್ನುವ ನಿರೀಕ್ಷೆ ಮೂಡಿದೆ.

  ಕೆಜಿಎಫ್ 2ಗೆ ಠಕ್ಕರ್ ಕೊಡೋರೆ ಇಲ್ಲ!

  ಕೆಜಿಎಫ್ 2ಗೆ ಠಕ್ಕರ್ ಕೊಡೋರೆ ಇಲ್ಲ!

  ಕೆಜಿಎಫ್ 2 ಸಿನಿಮಾ ರಿಲೀಸ್ ಬಳಿಕ ಅಂತಹ ದೊಡ್ಡ ಸಿನಿಮಾಗಳು ರಿಲೀಸ್ ಅಗಿಲ್ಲ. ರಿಲೀಸ್ ಆದರೂ ಕೆಜಿಎಫ್ 2 ಗೆ ಠಕ್ಕರ್ ಕೊಡಲು ಸಾಧ್ಯವಾಗಿಲ್ಲ. ಈ ಹಿಂದೆ ತೆರೆಕಂಡ ಬಾಲಿವುಡ್‌ 'ರನ್ ವೇ 34', 'ಹೀರೋ ಪಂತಿ 2' ಚಿತ್ರಗಳ ರಿಲೀಸ್ ಕೆಜಿಎಫ್ ಚಿತ್ರದ ಗಳಿಕೆಗೆ ಅಡ್ಡಿ ಆಗಿಲ್ಲ. ಈಗ ತೆಲುಗಿನ 'ಸರ್ಕಾರು ವಾರಿ ಪಾಟ' ಮತ್ತು ಹಿಂದಿಯ 'ಜಯೇಶ್ ಬಾಯ್ ಜೋರ್ದಾರ್' ಸಿನಿಮಾಗಳು ರಿಲೀಸ್ ಆಗಿವೆ. ಇದರಿಂದ ತೆಲುಗು ಬೆಲ್ಟ್‌ನಲ್ಲಿ ಕೊಂಚ ಎಫೆಕ್ಟ್ ಆಗುವ ಸಾಧ್ಯತೆ ಬಿಟ್ಟರೆ. ಒಟ್ಟಾರೆ ಗಳಿಕೆ ಮೇಲೆ ಯಾವ ಪ್ರಭಾವವೂ ಬೀರಲೂ ಸಾಧ್ಯವಿಲ್ಲ.

  'ಕೆಜಿಎಫ್ 2' 28ನೇ ದಿನ ಕಲೆಕ್ಷನ್: ರಾಕಿಬಾಯ್‌ಗೆ ಮಹೇಶ್‌ ಬಾಬು ಟಕ್ಕರ್!'ಕೆಜಿಎಫ್ 2' 28ನೇ ದಿನ ಕಲೆಕ್ಷನ್: ರಾಕಿಬಾಯ್‌ಗೆ ಮಹೇಶ್‌ ಬಾಬು ಟಕ್ಕರ್!

  ಮಹೇಶ್ ಬಾಬು ಚಿತ್ರದಿಂದ 'ಕೆಜಿಎಫ್ 2'ಗೆ ಸಂಕಷ್ಟ!

  ಮಹೇಶ್ ಬಾಬು ಚಿತ್ರದಿಂದ 'ಕೆಜಿಎಫ್ 2'ಗೆ ಸಂಕಷ್ಟ!

  ಈ ವಾರ ರಿಲೀಸ್ ಆಗಿರುವ ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಸಿನಿಮಾ 'ಕೆಜಿಎಫ್ 2' ಗಳಿಕೆ ಮೇಲೆ ಪರಿಣಾಮ ಬೀರ ಬಹುದು ಎನ್ನಲಾಗಿದೆ. ಹಾಗಾಗಿ ಈ ಚಿತ್ರದಿಂದ ಕೆಜಿಎಫ್ 2 ಮೇಲೆ ಕೊಂಚ ಪರಿಣಾಮ ಆದರೂ, 1500 ಕೋಟಿಯನ್ನು ಕೆಜಿಎಫ್ 2 ಗಳಿಕೆ ಮಾಡುವ ನಿರೀಕ್ಷೆ ಇದೆ.

  English summary
  KGF Chapter 2 Day 30 Worldwide Box Office Collection Report Enters 1180 Crore, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion