For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2 ಚಿತ್ರದ ಖಡಕ್ ಲುಕ್ ಬಹಿರಂಗ: ರಾಕಿ ಭಾಯ್ ಕಟೌಟ್ ಇದೆ

  |
  ಯಶ್ ಗೋಸ್ಕರ ಅಭಿಮಾನಿಗಳು ಹೇಳಿದ ಡೈಲಾಗ್ಸ್ ಕೇಳಿ ಇಡೀ ಇಂಡಸ್ಟ್ರಿ ಶಾಕ್.

  ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ಭಾರಿ ಎತ್ತರದ ಕಟೌಟ್ ನಿಲ್ಲಿಸಲಾಗುತ್ತಿದೆ. ನಾಯಂಡಹಳ್ಳಿಯ ಬಳಿ ಇರುವ ನಂದಿ ಲಿಂಕ್ ಗ್ರೌಂಡ್ ನಲ್ಲಿ ಸುಮಾರು 216 ಅಡಿ ಎತ್ತರದ ಯಶ್ ಅವರ ಕಟೌಟ್ ನಿಲ್ಲಿಸಲಾಗುತ್ತಿದೆ.

  ಸುಮಾರು ಒಂದು ವಾರದಿಂದ ನಂದಿ ಲಿಂಕ್ ಮೈದಾನದಲ್ಲಿ ಕಟೌಟ್ ಗಾಗಿ ತಯಾರಿ ನಡೆಸುತ್ತಿದ್ದು, ಯಶ್ ಅವರ ಯಾವ ಪೋಸ್ಟರ್ ಕಟೌಟ್ ರೂಪ ತಾಳುತ್ತಿದೆ ಎಂಬ ಕುತೂಹಲ ಕಾಡುತ್ತಿತ್ತು.

  ಸಿದ್ಧಗೊಳ್ಳುತ್ತಿದೆ ಯಶ್ ದಾಖಲೆಯ ಕಟೌಟ್: ರಾಕಿ ಭಾಯ್ ಹುಟ್ಟುಹಬ್ಬದ ತಯಾರಿ ಹೇಗಿದೆ ಗೊತ್ತಾ?ಸಿದ್ಧಗೊಳ್ಳುತ್ತಿದೆ ಯಶ್ ದಾಖಲೆಯ ಕಟೌಟ್: ರಾಕಿ ಭಾಯ್ ಹುಟ್ಟುಹಬ್ಬದ ತಯಾರಿ ಹೇಗಿದೆ ಗೊತ್ತಾ?

  ಅಂತಿಮವಾಗಿ ಕಟೌಟ್ ನ ಫೋಟೋ ಬಹಿರಂಗವಾಗಿದೆ. ಕೈಯಲ್ಲಿ ಸುತ್ತಿಗೆ ಹಿಡಿದಿರುವ ಯಶ್ ಅವರ ಪೋಸ್ಟರ್ ಈಗ ಅಭಿಮಾನಿಗಳು ಥ್ರಿಲ್ ಹೆಚ್ಚಿಸುತ್ತಿದೆ. ಇದು ಕೆಜಿಎಫ್ ಚಾಪ್ಟರ್ 2 ಚಿತ್ರದ ಲುಕ್ ಎನ್ನುವುದು ಮತ್ತೊಂದು ವಿಶೇಷ.

  ಬರಿ ಕಟೌಟ್ ಮಾತ್ರವಲ್ಲ, 5 ಸಾವಿರ ಕೆ.ಜಿಯ ಕೇಕ್ ಕೂಡ ಕತ್ತರಿಸಿ ಸಂಭ್ರಮಿಸಲಾಗುತ್ತಿದೆ. ಗ್ರೌಂಡ್ ತುಂಬೆಲ್ಲ ಯಶ್ ಫೋಟೋ ಬ್ಯಾನರ್ ಗಳು ರಾರಾಜಿಸುತ್ತಿವೆ. ಕರ್ನಾಟಕದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ಅಭಿಮಾನಿಗಳು ಬೇರೆ ಬೇರೆ ರಾಜ್ಯಗಳಿಂದನೂ ಅಪಾರ ಸಂಖ್ಯೆಯಲ್ಲಿ ಬರುವ ಕಾರಣ ದೊಡ್ಡ ಗ್ರೌಂಡ್ ನಲ್ಲಿ ದೊಡ್ಡ ಮಟ್ಟಕ್ಕೆ ಹುಟ್ಟುಹಬ್ಬ ಆಚರಿಸಲಾಗುತ್ತಿದೆ.

  ಜಗತ್ತಿನ ಅತಿ ದೊಡ್ಡ ಕಟೌಟ್ ಕಿತ್ತೊಗೆದ ಅಧಿಕಾರಿಗಳುಜಗತ್ತಿನ ಅತಿ ದೊಡ್ಡ ಕಟೌಟ್ ಕಿತ್ತೊಗೆದ ಅಧಿಕಾರಿಗಳು

  ಈ ಹಿಂದೆ ತಮಿಳು ಸ್ಟಾರ್ ನಟ ಸೂರ್ಯ ಅವರ ಕಟೌಟ್ ವಿಶ್ವದಾಖಲೆ ಬರೆದಿತ್ತು. ಎನ್ ಜಿ ಕೆ ಸಿನಿಮಾ ಬಿಡುಗಡೆ ವೇಳೆ 215 ಅಡಿ ಎತ್ತರದ ಕಟೌಟ್ ಹಾಕಿದ್ದರು. ಬಳಿಕ, ಮುನ್ಸಿಪಾಲಿಟಿ ಅಧಿಕಾರಿಗಳು ಅನುಮತಿ ಇಲ್ಲ ಎಂದು ಕಾರಣ ಹೇಳಿ ಕಟೌಟ್ ನೆಲಸಮ ಮಾಡಿದ್ದರು.

  ಯಶ್ ಹುಟ್ಟುಹಬ್ಬದ ಪ್ರಯುಕ್ತ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆ.

  English summary
  Rocking star yash starrer KGF Chapter 2 movie new look revealed before birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X