For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಸರ್ವಶ್ರೇಷ್ಠ ದಾಖಲೆ: 100 ಮಿಲಿಯನ್ ವೀಕ್ಷಣೆ ಕಂಡ ಚಾಪ್ಟರ್ 2 ಟೀಸರ್

  |

  ಭಾರತೀಯ ಸಿನಿಮಾ ಜಗತ್ತಿನ ಸಾರ್ವಕಾಲಿಕ ದಾಖಲೆಗಳನ್ನೆಲ್ಲ ಪುಡಿ ಪುಡಿ ಮಾಡಿರುವ ಕೆಜಿಎಫ್ ಚಾಪ್ಟರ್ 2 ಟೀಸರ್ ಈಗ ಸರ್ವ ಶ್ರೇಷ್ಠ ದಾಖಲೆ ನಿರ್ಮಿಸಿದೆ. ರಿಲೀಸ್ ಆದ ಎರಡೇ ದಿನದಲ್ಲಿ 100 ಮಿಲಿಯನ್ ವೀಕ್ಷಣೆ ಕಂಡಿದೆ.

  ಸದ್ಯದಲ್ಲೆ ಮತ್ತೊಂದು ದೊಡ್ಡ ದಾಖಲೆಯನ್ನು ಮುರಿಯಲಿದೆ KGF 2 ಟೀಸರ್ | Yash | Prashanth Neel | Raja Mouli

  ಕೆಜಿಎಫ್ ಚಾಪ್ಟರ್ 2 ಟೀಸರ್ ಯ್ಯೂಟ್ಯೂಬ್‌ನಲ್ಲಿ 100 ಮಿಲಿಯನ್ ವೀಕ್ಷಣೆ ಕಂಡಿದೆ. ಈ ಸಂಖ್ಯೆ ಇನ್ನು ಹೆಚ್ಚಾಗುವ ಎಲ್ಲ ಸಾಧ್ಯತೆಗಳಿದೆ. ಟೀಸರ್ ನೂರು ಮಿಲಿಯನ್ ವೀಕ್ಷಣೆ ದಾಟುತ್ತಿದ್ದಂತೆ ಹೊಂಬಾಳೆ ಫಿಲಂಸ್ ಸಂತಸ ವ್ಯಕ್ತಪಡಿಸಿದೆ.

  100 ಮಿಲಿಯನ್ ಆಯ್ತು ಎಂದು ಸಣ್ಣದೊಂದು ವಿಡಿಯೋ ಹಂಚಿಕೊಂಡು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಭಾರತೀಯ ಸಿನಿ ಪ್ರಪಂಚದಲ್ಲಿ ಟೀಸರ್‌ವೊಂದು ಇಷ್ಟು ಬೇಗ ನೂರು ಮಿಲಿಯನ್ ವೀಕ್ಷಣೆ ಕಂಡಿರುವ ಉದಾಹರಣೆ ಇಲ್ಲ.

  ಕೆಜಿಎಫ್ ಟೀಸರ್ ಕಂಡು 'ವಾಹ್' ಎಂದ ಪರಭಾಷೆ ತಾರೆಯರು ಯಾರ್ ಯಾರು?

  ಎಸ್‌ಎಸ್‌ ರಾಜಮೌಳಿ ನಿರ್ದಶನದಲ್ಲಿ ಮೂಡಿ ಬಂದಿದ್ದ ಬಾಹುಬಲಿ 2 ಟ್ರೈಲರ್ 112 ಮಿಲಿಯನ್ ವೀಕ್ಷಣೆ ಕಂಡಿದೆ. ಬಹುಶಃ ಕೆಜಿಎಫ್ ಟೀಸರ್ ಈ ದಾಖಲೆಯನ್ನು ಸಹ ಮುರಿಯಲಿದೆ.

  ಕೆಜಿಎಫ್ ಆದ್ಮೇಲೆ ಯಶ್ ಮುಂದಿನ ಸಿನಿಮಾ ಯಾವುದು? ಡೈರೆಕ್ಟರ್ ಅವರೇನಾ?

  ಕೆಜಿಎಫ್ ಚಾಪ್ಟರ್ 2 ಟೀಸರ್ ಮಾಡಲು ದಿನಾಂಕ ನಿರ್ಧರಿಸಿದ್ದಕ್ಕಿಂತ ಮೊದಲೇ ಟೀಸರ್ ಲೀಕ್ ಆಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಚಿತ್ರತಂಡ ಮೊದಲೇ ನಿರ್ಧರಿಸಿದ ದಿನಾಂಕಕ್ಕಿಂತ ಮೊದಲೇ ಟೀಸರ್ ಅಧಿಕೃತವಾಗಿ ಬಿಡುಗಡೆ ಮಾಡಿದರು.

  ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಶೂಟಿಂಗ್ ಬಹುತೇಕ ಮುಕ್ತಾಯವಾಗಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ.

  English summary
  Rocking star Yash starrer KGF Chapter 2 movie teaser crossed 100 million views on Youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X