For Quick Alerts
  ALLOW NOTIFICATIONS  
  For Daily Alerts

  50 ದಿನಗಳನ್ನು ಪೂರೈಸಿದ 'ಕೆ.ಜಿ.ಎಫ್': ಇಲ್ಲಿಯವರೆಗಿನ ಕಲೆಕ್ಷನ್ ಎಷ್ಟು.?

  |
  KGF Movie : ಯಶ್ ಕೆಜಿಎಫ್ 50 ದಿನಗಳನ್ನ ಪೂರೈಸಿ ಒಟ್ಟು ಕಲೆಕ್ಷನ್ ಎಷ್ಟು ಮಾಡಿದೆ

  ಇಡೀ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿದ ಸಿನಿಮಾ 'ಕೆ.ಜಿ.ಎಫ್'. ಇಡೀ ಭಾರತೀಯ ಚಿತ್ರರಂಗವನ್ನೇ ಗಾಂಧಿನಗರದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ 'ಕೆ.ಜಿ.ಎಫ್'. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ 'ಕೆ.ಜಿ.ಎಫ್' ಸಿನಿಮಾ ಸದ್ಯ ಐವತ್ತು ದಿನಗಳನ್ನು ಪೂರೈಸಿದೆ.

  ಕನ್ನಡ ಚಿತ್ರಗಳು ಮೂರ್ನಾಲ್ಕು ವಾರ ಓಡಿದರೆ ಹೆಚ್ಚು ಎನ್ನುವ ಕಾಲದಲ್ಲಿ 'ಕೆ.ಜಿ.ಎಫ್' ಸಿನಿಮಾ ಐವತ್ತು ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಸಾಲದಕ್ಕೆ ಕೋಟ್ಯಾಂತರ ರೂಪಾಯಿ ಕಲೆಕ್ಷನ್ ಮಾಡಿದೆ.

  ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಹೊಸ ದಾಖಲೆಗಳ ಮೈಲಿಗಲ್ಲುಗಳನ್ನು ಸೃಷ್ಟಿಸಿದ 'ಕೆ.ಜಿ.ಎಫ್' ಸಿನಿಮಾ ಐವತ್ತು ದಿನಗಳಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ ನಿಮಗೆ ಗೊತ್ತಾಗುತ್ತೆ.

  ಇಲ್ಲಿಯವರೆಗಿನ ಕಲೆಕ್ಷನ್ ಎಷ್ಟು.?

  ಇಲ್ಲಿಯವರೆಗಿನ ಕಲೆಕ್ಷನ್ ಎಷ್ಟು.?

  ಬಿಡುಗಡೆ ಆದ ಐವತ್ತು ದಿನಗಳಲ್ಲಿ 'ಕೆ.ಜಿ.ಎಫ್' ಸಿನಿಮಾ ವಿಶ್ವದಾದ್ಯಂತ 243.10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸ್ಯಾಂಡಲ್ ವುಡ್ ಮಟ್ಟಿಗೆ ಇದು ನೂತನ ರೆಕಾರ್ಡ್. ಇನ್ನೂ ಹಲವೆಡೆ ಪ್ರದರ್ಶನ ಕಾಣುತ್ತಿರುವ 'ಕೆ.ಜಿ.ಎಫ್' ಸಿನಿಮಾ ಸದ್ಯದಲ್ಲೇ 250 ಕೋಟಿ ಕಲೆಕ್ಷನ್ ಮಾಡಿದರೂ ಅಚ್ಚರಿ ಇಲ್ಲ.

  ಹಾಫ್ ಸೆಂಚುರಿ ಹೊಡೆದ ಯಶ್: 'ಚಾಪ್ಟರ್ 2' ಬಗ್ಗೆ ನಿರ್ಮಾಪಕರ ಟ್ವೀಟ್

  ಕರ್ನಾಟಕದಲ್ಲಿ ಕಲೆಕ್ಷನ್ ಎಷ್ಟು.?

  ಕರ್ನಾಟಕದಲ್ಲಿ ಕಲೆಕ್ಷನ್ ಎಷ್ಟು.?

  ಕರ್ನಾಟಕ ಮಾತ್ರದಲ್ಲೇ 'ಕೆ.ಜಿ.ಎಫ್' ಸಿನಿಮಾ 136.50 ಕೋಟಿ ಕಲೆಕ್ಷನ್ ಮಾಡಿದೆ. ಆ ಮೂಲಕ ಕರ್ನಾಟಕದಲ್ಲಿನ 'ಬಾಹುಬಲಿ-2' ಕಲೆಕ್ಷನ್ ರೆಕಾರ್ಡ್ ನ 'ಕೆ.ಜಿ.ಎಫ್' ಸಿನಿಮಾ ಬ್ರೇಕ್ ಮಾಡಿದೆ.

  ಯಾವ ಯಾವ ದೇಶಗಳಲ್ಲಿ 'ಕೆ.ಜಿ.ಎಫ್' ವಿಜಯ ಪತಾಕೆ ಹಾರಿಸಿದೆ ಗೊತ್ತಾ.?

  ಹಿಂದಿಯಲ್ಲೂ ದಾಖಲೆ

  ಹಿಂದಿಯಲ್ಲೂ ದಾಖಲೆ

  ಹಿಂದಿ ಭಾಷೆಗೆ ಡಬ್ ಆಗಿ ಬಿಡುಗಡೆ ಆಗಿದ್ದ 'ಕೆ.ಜಿ.ಎಫ್' ಸಿನಿಮಾ 44 ಕೋಟಿ ಕಲೆಕ್ಷನ್ ಮಾಡಿದೆ. ಇದು ಕೂಡ ಮತ್ತೊಂದು ದಾಖಲೆಯೇ.

  ವಿಶ್ವದ ಹಲವೆಡೆ ಮೆಚ್ಚುಗೆ

  ವಿಶ್ವದ ಹಲವೆಡೆ ಮೆಚ್ಚುಗೆ

  ಯಶ್, ಶ್ರೀನಿಧಿ ಶೆಟ್ಟಿ, ಅನಂತ್ ನಾಗ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ 'ಕೆ.ಜಿ.ಎಫ್' ಸಿನಿಮಾ ಕಳೆದ ವರ್ಷ ಡಿಸೆಂಬರ್ 21 ರಂದು ಬಿಡುಗಡೆ ಆಗಿತ್ತು. ಪಾಕಿಸ್ತಾನದಲ್ಲೂ ಭರ್ಜರಿ ಪ್ರದರ್ಶನ ಕಂಡ 'ಕೆ.ಜಿ.ಎಫ್' ವಿಶ್ವದ ಹಲವೆಡೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

  English summary
  Rocking Star Yash starrer KGF collects Rs 243.10 crore in 50 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X