twitter
    For Quick Alerts
    ALLOW NOTIFICATIONS  
    For Daily Alerts

    ನೂರು ಕೋಟಿ ಕ್ಲಬ್ ಗೆ 'ಕೆಜಿಎಫ್': ಎಲ್ಲಿಂದ ಎಷ್ಟು ಹಣ ಬಂತು.?

    |

    Recommended Video

    KGF Kannada Movie: ನೂರು ಕೋಟಿ ಕ್ಲಬ್ ಗೆ 'ಕೆಜಿಎಫ್': ಎಲ್ಲಿಂದ ಎಷ್ಟು ಹಣ ಬಂತು.? | FILMIBEAT KANNADA

    ಕೆಜಿಎಫ್ ಸಿನಿಮಾ ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ ನೂರು ಕೋಟಿ ಗಳಿಸಿದೆಯಂತೆ. ಹೀಗಂತ ದಕ್ಷಿಣ ಭಾರತದ ಖ್ಯಾತ ವಿಶ್ಲೇಷಕ ರಮೇಶ್ ಬಾಲ ಟ್ವೀಟ್ ಮಾಡಿದ್ದಾರೆ. ಮೊದಲ ಮೂರು ದಿನಕ್ಕೆ 50 ಕೋಟಿ ಗಳಿಸಿದ್ದ ಕೆಜಿಎಫ್ ಸಿನಿಮಾ ಐದು ದಿನಗಳಲ್ಲಿ ನೂರು ಕೋಟಿ ಗಳಿಕೆ ಕಂಡಿದೆಯಂತೆ.

    ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಸಿನಿಮಾ ಒಟ್ಟಾರೆ ನೂರು ಕೋಟಿ ಗಳಿಸಿದೆ. ಈ ಮೂಲಕ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ನೂರು ಕೋಟಿ ಗಳಿಕೆ ಕಂಡ ಮೊದಲ ಸಿನಿಮಾ ಎಂಬ ದಾಖಲೆ ಮಾಡಿದೆ.

    'ಕ್ರಿಸ್ ಮಸ್' ಹಬ್ಬಕ್ಕೆ 'ಕೆಜಿಎಫ್' ದಾಖಲೆ: ಹಿಂದಿ ಬಾಕ್ಸ್ ಆಫೀಸ್ ಉಡೀಸ್.! 'ಕ್ರಿಸ್ ಮಸ್' ಹಬ್ಬಕ್ಕೆ 'ಕೆಜಿಎಫ್' ದಾಖಲೆ: ಹಿಂದಿ ಬಾಕ್ಸ್ ಆಫೀಸ್ ಉಡೀಸ್.!

    ಸರಿ, ಕೆಜಿಎಫ್ ನೂರು ಕೋಟಿ ಕಲೆಕ್ಷನ್ ಮಾಡಿದೆ. ಯಾವ ಭಾಷೆಯಲ್ಲಿ ಎಷ್ಟು ಕೋಟಿ ಗಳಿಸಿದೆ, ಯಾವ ರಾಜ್ಯದಲ್ಲಿ ಎಷ್ಟೆಷ್ಟು ಕೋಟಿ ಬಾಚಿಕೊಂಡಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ. ಮುಂದೆ ಓದಿ......

    ಕನ್ನಡ ಭಾಷೆಯ ಚಿತ್ರ ಎಷ್ಟು ಗಳಿಸಿದೆ

    ಕನ್ನಡ ಭಾಷೆಯ ಚಿತ್ರ ಎಷ್ಟು ಗಳಿಸಿದೆ

    ಕೆಜಿಎಫ್ ಮೂಲತಃ ಕನ್ನಡ ಸಿನಿಮಾ. ಕನ್ನಡದಲ್ಲಿ ತಾಯಾರಾಗಿದ್ದ ಈ ಚಿತ್ರದ ಮೊದಲ ಭಾರಿಗೆ ಪರಭಾಷೆಯಲ್ಲಿ ಡಬ್ ಆಗಿದೆ. ಹಾಗಾಗಿ, ಕನ್ನಡ ಬಾಕ್ಸ್ ಆಫೀಸ್ ಈ ಚಿತ್ರಕ್ಕೆ ಮುಖ್ಯ. ನಿರೀಕ್ಷೆಗೆ ತಕ್ಕಂತೆ ಕನ್ನಡ ಭಾಷೆಯ ಸಿನಿಮಾವೇ ಅತಿ ಹೆಚ್ಚು ಗಳಿಕೆ ಕಂಡಿದೆ. ಸದ್ಯದ ಮಾಹಿತಿ ಪ್ರಕಾರ, ಕೆಜಿಎಫ್ ಸಿನಿಮಾ ಕನ್ನಡ ಭಾಷೆಯಲ್ಲಿ 62 ಕೋಟಿ ಗಳಿಸಿದೆಯಂತೆ.

    'ಕೆಜಿಎಫ್'ಗೆ ಸಲಾಂ : 100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ 'ಕೆಜಿಎಫ್'ಗೆ ಸಲಾಂ : 100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ

    ತೆಲುಗಿನಲ್ಲಿ ಎಷ್ಟು ಬಾಚಿಕೊಂಡಿದೆ

    ತೆಲುಗಿನಲ್ಲಿ ಎಷ್ಟು ಬಾಚಿಕೊಂಡಿದೆ

    ಕನ್ನಡ ಬಿಟ್ಟರೇ, ತೆಲುಗಿನಲ್ಲಿ ಕೆಜಿಎಫ್ ಸಿನಿಮಾದ ಕ್ರೇಜ್ ಹೆಚ್ಚಿತ್ತು. ಅದರಂತೆ ಸಿನಿಮಾ ಬಿಡುಗಡೆ ಆದ್ಮೇಲೆ ತೆಲುಗು ಜನ ಚಿತ್ರವನ್ನ ಸ್ವೀಕರಿಸಿದರು. ಅದರ ಪರಿಣಾಮ ಟಾಲಿವುಡ್ ಬಾಕ್ಸ್ ಆಫೀಸ್ ನಲ್ಲೂ ಕೆಜಿಎಫ್ ಕಮಾಲ್ ಮಾಡಿದೆ. ತೆಲುಗಿನಲ್ಲಿ ಕೆಜಿಎಫ್ ಸಿನಿಮಾ 7.3 ಕೋಟಿ ಕಲೆಕ್ಷನ್ ಮಾಡಿದೆಯಂತೆ.

    ಕೇರಳದಲ್ಲಿ ಅತಿ ಕಡಿಮೆ

    ಕೇರಳದಲ್ಲಿ ಅತಿ ಕಡಿಮೆ

    ಕೆಜಿಎಫ್ ಚಿತ್ರದ ಗಳಿಕೆಯಲ್ಲಿ ಕೇರಳ ರಾಜ್ಯ ಕೊನೆಯಲ್ಲಿದೆ. ಸುಮಾರು 60 ಸ್ಕ್ರೀನ್ ನಲ್ಲಿ ಮಲಯಾಳಂ ಸಿನಿಮಾ ಬಿಡುಗಡೆಯಾಗಿತ್ತು. ಹಾಗಾಗಿ, ಕೇರಳದಲ್ಲಿ ಕೇವಲ 1.6 ಕೋಟಿ ಗಳಿಕೆ ಕಂಡಿದೆಯಂತೆ.

    ಕಲೆಕ್ಷನ್ ನಲ್ಲಿ ಇತಿಹಾಸ ನಿರ್ಮಿಸಿದ ಕೆಜಿಎಫ್: ಮೊದಲ ದಿನ 24 ಕೋಟಿ.! ಕಲೆಕ್ಷನ್ ನಲ್ಲಿ ಇತಿಹಾಸ ನಿರ್ಮಿಸಿದ ಕೆಜಿಎಫ್: ಮೊದಲ ದಿನ 24 ಕೋಟಿ.!

    ತಮಿಳುನಾಡಿನಲ್ಲಿ ಸಾಧಾರಣ

    ತಮಿಳುನಾಡಿನಲ್ಲಿ ಸಾಧಾರಣ

    ಇನ್ನು ತಮಿಳಿನಾಡಿನಲ್ಲಿ ವಿಶಾಲ್ ಫಿಲಂ ಫ್ಯಾಕ್ಟರಿ ಕೆಜಿಎಫ್ ಚಿತ್ರವನ್ನ ವಿತರಣೆ ಮಾಡಿತ್ತು. ಮೊದಲ ದಿನ ಸುಮಾರು 100 ಸ್ಕ್ರೀನ್ ನಲ್ಲಿ ಸಿನಿಮಾ ರಿಲೀಸ್ ಆಗಿತ್ತು. ನಂತರ ಚಿತ್ರದ ರೆಸ್ಪಾನ್ಸ್ ನೋಡಿ ಮೂರು ಪಟ್ಟು ಸ್ಕ್ರೀನ್ಸ್ ಹೆಚ್ಚಾಗಿತ್ತು. ಇದೀಗ, ತಮಿಳುನಾಡಿನಲ್ಲಿ 4.5 ಕೋಟಿ ಗಳಿಕೆ ಕಂಡಿದೆ.

    ಕೆಜಿಎಫ್ ಹಿಂದಿ ಕಲೆಕ್ಷನ್ ಬಹಿರಂಗ: ಗಳಿಕೆಯ ಅಂಕಿ ಅಂಶ ಅಚ್ಚರಿಯಾಗಿದೆ.! ಕೆಜಿಎಫ್ ಹಿಂದಿ ಕಲೆಕ್ಷನ್ ಬಹಿರಂಗ: ಗಳಿಕೆಯ ಅಂಕಿ ಅಂಶ ಅಚ್ಚರಿಯಾಗಿದೆ.!

    ಹೊರರಾಜ್ಯ ಮತ್ತು ಹೊರದೇಶಗಳಲ್ಲಿ.?

    ಹೊರರಾಜ್ಯ ಮತ್ತು ಹೊರದೇಶಗಳಲ್ಲಿ.?

    ಇನ್ನುಳಿದಂತೆ ದೇಶದ ಇತರೆ ಭಾಗಗಳಲ್ಲಿ ಕೆಜಿಎಫ್ ಸಿನಿಮಾದ ಕಲೆಕ್ಷನ್ 22 ಕೋಟಿ ಆಗಿದೆಯಂತೆ. ಇದರಲ್ಲಿ ಹಿಂದಿ ಕೆಜಿಎಫ್ ಚಿತ್ರ ಗಳಿಕೆಯೂ ಸೇರಿದೆ. ಹಿಂದಿ ವರ್ಷನ್ ನಲ್ಲಿ ಕೆಜಿಎಫ್ ಸಿನಿಮಾ ಐದು ದಿನಗಳಲ್ಲಿ 16.45 ಕೋಟಿ ಗಳಿಸಿದೆ. ಇನ್ನು ಯುಎಸ್, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಹೊರದೇಶದಲ್ಲಿ 4.5 ಕೋಟಿ ಬಾಚಿದೆ. ಇದೆಲ್ಲ ಸೇರಿ ಕೆಜಿಎಫ್ ನೂರು ಕೋಟಿ ಆಗಿದೆಯಂತೆ.

    English summary
    Rocking star Yash starrer kannada movie KGF crosses the ₹ 100 Cr Gross Mark at the worldwide box office.
    Thursday, December 27, 2018, 14:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X