For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಮತ್ತು ರಾಬರ್ಟ್ ತಂಡಕ್ಕೆ 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದೇನು?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಇಂದು (ಮಾರ್ಚ್ 11) ಕರ್ನಾಟಕ ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗಿದೆ. ಬೆಳ್ಳಂಬೆಳಗ್ಗೆ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಕ್ಯೂ ನಿಂತು ರಾಬರ್ಟ್ ನೋಡಿ ಸಂಭ್ರಮಿಸುತ್ತಿದ್ದಾರೆ.

  Recommended Video

  ರಾಕಿ ಭಾಯ್ ಹಿಂದೆ ಬಿದ್ದ ತೆಲುಗಿನ ನಿರ್ಮಾಪಕರು | Filmibeat Kannada

  ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿರುವ ರಾಬರ್ಟ್ ಸಿನಿಮಾಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡದ ಜೊತೆಗೆ ತೆಲುಗಿನಲ್ಲೂ ದೊಡ್ಡ ಮಟ್ಟದಲ್ಲಿ ತೆರೆಗೆ ಬಂದಿರುವ ರಾಬರ್ಟ್ ಚಿತ್ರಕ್ಕೆ ಅಭಿಮಾನಿಗಳು ಮಾತ್ರವಲ್ಲದೇ ಸಿನಿ ಗಣ್ಯರು ಸಹ ಶುಭಾಶಯ ತಿಳಿಸುತ್ತಿದ್ದಾರೆ.

  ಟ್ವಿಟ್ಟರ್ ವಿಮರ್ಶೆ: ರಾಬರ್ಟ್ ಚಿಂದಿ, ಉಮಾಪತಿ ಗಿಫ್ಟ್ ಇದು, ತರುಣ್‌ಗೆ ಕ್ರೆಡಿಟ್ಟ್ವಿಟ್ಟರ್ ವಿಮರ್ಶೆ: ರಾಬರ್ಟ್ ಚಿಂದಿ, ಉಮಾಪತಿ ಗಿಫ್ಟ್ ಇದು, ತರುಣ್‌ಗೆ ಕ್ರೆಡಿಟ್

  ಈಗಾಗಲೇ ಅನೇಕ ನಿರ್ದೇಶಕರು ಮತ್ತು ಕಲಾವಿದರು ರಾಬರ್ಟ್ ತಂಡಕ್ಕೆ ವಿಶ್ ಮಾಡಿದ್ದಾರೆ. ಇದೀಗ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಹ ರಾಬರ್ಟ್ ತಂಡಕ್ಕೆ ಶುಭ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಶಾಂತ್ ನೀಲ್, 'ರಾಬರ್ಟ್ ತಂಡಕ್ಕೆ ಒಳ್ಳೆಯದಾಗಲಿ. ದರ್ಶನ್ ಸರ್ ಅವರಿಗೆ ಅಭಿನಂದನೆಗಳು. ತರುಣ್ ಸುಧೀರ್ ಮತ್ತು ಉಮಾಪತಿ ಅವರಿಗೂ ಅಭಿನಂದನೆಗಳು. ರಾಬರ್ಟ್ ಗ್ರ್ಯಾಂಡ್ ಆಗಿ ತೆರೆಗೆ ಬಂದಿದೆ. ಇಂದು ಎರಡು ದೊಡ್ಡ ಹಬ್ಬ' ಎಂದು ಟ್ವೀಟ್ ಮಾಡಿದ್ದಾರೆ.

  ಪ್ರಶಾಂತ್ ನೀಲ್ ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಕೆಜಿಎಫ್-2 ಅಪ್ ಡೇಟ್ ಕೇಳಿ ಕಾಮೆಂಟ್ ಮಾಡುತ್ತಿದ್ದಾರೆ. ಮಾರ್ಚ್ 13ಕ್ಕೆ ಕೆಜಿಎಫ್-2 ಸಿನಿಮಾದ ಬಗ್ಗೆ ಮಾಹಿತಿ ನೀಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

  ಇನ್ನು ರಾಬರ್ಟ್ ಸಿನಿಮಾದ ಮೊದಲ ಪ್ರದರ್ಶನ ಈಗಾಗಲೇ ಮುಕ್ತಾಯವಾಗಿದೆ. ಬೆಳ್ಳಂಬೆಳಗ್ಗೆ ಸಿನಿಮಾ ನೋಡಿದ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೂಲಕ ದಾಖಲೆ ನಿರ್ಮಿಸಿದೆ.

  English summary
  KGF Director Prashant Neel Says all the best to Darshan's Roberrt Movie.
  Thursday, March 11, 2021, 15:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X