Don't Miss!
- Sports
Ind Vs Aus Test : ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡೋದೆ ಅನುಮಾನ !
- Technology
ಗ್ರಾಹಕರೇ ಈ ಕಡಿಮೆ ಬೆಲೆಯ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೂ, ಉಚಿತ ಡೇಟಾ ಲಭ್ಯ!
- News
ಮೈಸೂರಿನ ಒಬ್ಬರಿಗೆ ಪದ್ಮಭೂಷಣ, ಇಬ್ಬರಿಗೆ ಪದ್ಮಶ್ರೀ ಪ್ರಶಸ್ತಿ, ಇಲ್ಲಿದೆ ನೋಡಿ ವಿವರ
- Automobiles
ವಿದೇಶದಲ್ಲಿ 20 ಲಕ್ಷವಿದ್ದ ಕಾರು ಭಾರತಕ್ಕೆ ಬಂದರೆ 50 ಲಕ್ಷ ರೂ. ದುಬಾರಿಯಾಗಲು ಕಾರಣವೇನು..?
- Finance
Padma Awards 2023: ವ್ಯಾಪಾರ ಕ್ಷೇತ್ರದಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರು ಯಾರು?
- Lifestyle
Horoscope Today 26 Jan 2023: ಗುರುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಕಿ ಭಾಯ್ ಎಷ್ಟು ಕೋಟಿಯ ಒಡೆಯ? ಯಶ್ ಬಳಿ ಬಂಗಲೆ, ಕಾರು, ತೋಟ ಏನೇನಿದೆ?
ಸ್ಯಾಂಡಲ್‌ವುಡ್‌ನ ಶ್ರೀಮಂತ ನಟರಲ್ಲಿ ರಾಕಿ ಭಾಯ್ ಉರ್ಫ್ ಯಶ್ ಕೂಡ ಇಬ್ಬರು. 'ಕೆಜಿಎಫ್' ಸಿನಿಮಾ ಬಳಿಕ ವಿಶ್ವದಾದ್ಯಂತ ಯಶ್ ಸದ್ದು ಮಾಡುತ್ತಿದ್ದಾರೆ. ಕೇವಲ ಕರ್ನಾಟಕ ಅಷ್ಟೇ ಅಲ್ಲ. ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ.
'ಕೆಜಿಎಫ್' ಕರಿಯರ್‌ಗೆ ಟರ್ನಿಂಗ್ ಪಾಯಿಂಟ್ ಕೊಟ್ಟ ಸಿನಿಮಾ. ಯಶ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾವೇ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಇನ್ನು 'ಕೆಜಿಎಫ್ 2' ಹೊಸ ದಾಖಲೆಯನ್ನೇ ಬರೆದಿತ್ತು. ಇಂದು(ಜನವರಿ 8) ಯಶ್ ಬರ್ತ್‌ಡೇ ಈ ಸಂದರ್ಭದಲ್ಲಿ ತಮ್ಮ 19ನೇ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿರುವ ಸಂಸ್ಥೆಯ ಹೆಸರು ರಿವೀಲ್ ಆಗಿದೆ.
ಕೆಜಿಎಫ್
2,
ಗಂಧದ
ಗುಡಿ,
ವಿಕ್ರಾಂತ್
ರೋಣ
ಟ್ರೈಲರ್
ದಾಖಲೆ
ಮುರಿದು
ನಂ.1
ಆಗುತ್ತಾ
ಕ್ರಾಂತಿ
ಟ್ರೈಲರ್?
ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಡಬಹುದು ಎಂದು ಯಶ್ ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಅದರಂತೆ ದುಬೈ ಪ್ರವಾಸದಲ್ಲಿ ಇದ್ದರೂ, ಅಭಿಮಾನಿಗಳಿಗೆ ನಿರಾಸೆ ಮಾಡಿಲ್ಲ. 'ಕೆಜಿಎಫ್' ಯಶಸ್ಸಿನ ಬಳಿಕ ಯಶ್ ಪಡೆಯುವ ಸಂಭಾವನೆ, ಆಸ್ತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಬಾಲಿವುಡ್ ಚರ್ಚೆ ಮಾಡುತ್ತಿದೆ.

'ಕೆಜಿಎಫ್' ಬಳಿಕ ಯಶ್ ಸಂಭಾವನೆ ಎಷ್ಟು?
'ಕೆಜಿಎಫ್' ಸಿನಿಮಾ ಯಶಸ್ಸಿನ ಬಳಿಕ ರಾಕಿ ಭಾಯ್ ರೇಂಜ್ ಬದಲಾಗಿದೆ. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಯಶ್‌ಗಾಗಿ ಕ್ಯೂ ನಿಂತಿದ್ದೂ ಇದೆ. ಆದರೆ, 'ಕೆಜಿಎಫ್' ಯಶಸ್ಸಿನ ಬಳಿಕವೇ ಸಂಭಾವನೆಯನ್ನು ಹೆಚ್ಚಿಕೊಂಡಿದ್ದಾರೆ ಅನ್ನೊ ಮಾತು ಚಿತ್ರರಂಗದಲ್ಲಿ ಕೇಳಿಬರುತ್ತಿವೆ. 'ಕೆಜಿಎಫ್ 2' ಯಶ್ ಬರೋಬ್ಬರಿ 30 ಕೋಟಿ ರೂ. ಸಂಭಾವನೆ ಹಾಗೂ ಲಾಭದಲ್ಲಿ ಶೇರ್ ಮಾಡಿದ್ದರು ಎಂದು ಝೂಮ್ ವರದಿ ಮಾಡಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸ್ವತ: ಯಶ್ ನಾನು 'ಕೆಜಿಎಫ್' ನಿರ್ಮಾಪಕ ಎಂದಿದ್ದರು.

4 ಕೋಟಿ ರೂ. ದುಬಾರಿ ಫ್ಲ್ಯಾಟ್
ರಾಕಿಂಗ್ ಸ್ಟಾರ್ ಯಶ್ ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಸಮೀಪ ಡ್ಯೂಪ್ಲೆಕ್ಸ್ ಫ್ಲ್ಯಾಟ್ ಅನ್ನು ಖರೀದಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಆ ಫ್ಲ್ಯಾಟ್‌ನ ಗೃಹಪ್ರವೇಶ ಕೂಡ ನಡೆದಿತ್ತು. ಈ ಡ್ಯೂಪ್ಲೆಕ್ಸ್ ಫ್ಲ್ಯಾಟ್‌ನ ಬೆಲೆ ಬರೋಬ್ಬರಿ 4 ಕೋಟಿ ರೂ. ಎಂದು ಜಿಕ್ಯೂ ಇಂಡಿಯಾ ವರದಿ ಮಾಡಿದೆ. ಹಲವು ಐಶಾರಾಮಿ ಸವಲತ್ತು ಈ ಫ್ಲ್ಯಾಟ್‌ನಲ್ಲಿ ಇದೆ ಎಂದು ಹೇಳಾಗಿದ್ದಾರೆ. 'ಕೆಜಿಎಫ್' ಸಿನಿಮಾ ಬಳಿಕ ಖರೀದಿ ಮಾಡಿದ್ದಾರೆ.

ಎಲ್ಲೆಲ್ಲಿ ಏನೇನಿದೆ?
ಬೆಂಗಳೂರಿನಲ್ಲಿ ಯಶ್ ಬೇರೆ ಬೇರೆ ಕಡೆ ಮನಯಿದೆ. ಪಿಇಎಸ್ ಕಾಲೇಜು ಸಮೀಪ ಭವ್ಯ ಬಂಗಲೆಯಿದೆ. ಇದರಲ್ಲಿ ಅವರ ತಂದೆ-ತಾಯಿ ವಾಸವಿದ್ದಾರೆ. 'ರಾಜಹುಲಿ' ಗೆದ್ದ ಸಂದರ್ಭದಲ್ಲಿ ಈ ಮನೆಯನ್ನು ಯಶ್ ಖರೀದಿ ಮಾಡಿದ್ದರು ಅನ್ನೋ ಮಾತು ಕೇಳಿಬಂದಿತ್ತು. ಹಾಗೇ ಹಾಸನದ ತಿಮ್ಮಲಾಪುರ ಸಮೀಪ ಯಶ್ ಜಮೀನನ್ನು ಖರೀದಿ ಮಾಡಿದ್ದು, ಅವರ ತಂದೆ-ತಾಯಿ ನೋಡಿಕೊಳ್ಳುತ್ತಿದ್ದಾರೆ.

ಒಟ್ಟು ಆಸ್ತಿ ಎಷ್ಟು?
ಯಶ್ ಹಲವು ಐಶಾರಾಮಿ ಕಾರುಗಳಿವೆ. ಮರ್ಸಿಡೀಸ್ ಬೆಜ್ಜ್‌ನಿಂದ ಹಿಡಿದು ಔಡಿ, ಬಿಎಂಡಬ್ಲ್ಯೂ ಸೇರಿದಂತೆ ಹಲವು ದುಬಾರಿ ಕಾರುಗಳು ರಾಕಿ ಭಾಯ್ ಬಳಿ ಇವೆ. ಪ್ರತಿಯೊಂದು ಜಾಹೀರಾತಿಗೂ ಯಶ್ 60 ರಿಂದ 70 ಲಕ್ಷ ಸಂಭಾವನೆ ಪಡೆಯುತ್ತಾರೆ. ಕೆಜಿಎಫ್ ಚಾಪ್ಟರ್ 1 ವರೆಗೆ ಯಶ್ ಒಟ್ಟು ಆಸ್ತಿ 53 ಕೋಟಿ ರೂ. ಎನ್ನಲಾಗಿತ್ತು. 'ಕೆಜಿಎಫ್ 2' ಬಳಿಕ ಇದು ಗಣನೀಯವಾಗಿ ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಬಾಲಿವುಡ್ ವೆಬ್‌ಸ್ಟೈಟ್‌ಗಳು ವರದಿ ಮಾಡಿದೆ.