For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್, ಕುರುಕ್ಷೇತ್ರದ 'ಫಸ್ಟ್ ಡೇ' ಕಲೆಕ್ಷನ್ ದಾಖಲೆ ಮುರಿತಾ ಪೈಲ್ವಾನ್?

  |

  ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ತೆರೆಗೆ ಬಂದ ಸಿನಿಮಾಗಳು ಕೆಜಿಎಫ್, ಕುರುಕ್ಷೇತ್ರ ಮತ್ತು ಪೈಲ್ವಾನ್. ಈ ಮೂರು ಸಿನಿಮಾಗಳು ಗಡಿಗೂ ಮೀರಿ ಸದ್ದು ಮಾಡಿದ ಚಿತ್ರಗಳು. ಬೇರೆ ಬೇರೆ ಭಾಷೆಯಲ್ಲಿ ತೆರೆಗೆ ಬಂದ ಈ ಸಿನಿಮಾಗಳು ಮೊದಲ ದಿನ ಗಳಿಸಿದಷ್ಟು ಗೊತ್ತಾ?

  ಪೈಲ್ವಾನ್ ಸಿನಿಮಾ ಕೆಜಿಎಫ್ ಮತ್ತು ಕುರುಕ್ಷೇತ್ರ ಸಿನಿಮಾದ ನಡುವೆ ಗೆದ್ದು ಬೀಗಲೆ ಬೇಕಾದ ಒತ್ತಡದಲ್ಲಿತ್ತು. ಯಾಕಂದ್ರೆ ಕೆಜಿಎಫ್ ಮತ್ತು ಕುರುಕ್ಷೇತ್ರ ಸಿನಿಮಾ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುವ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿಯೂ ಉತ್ತಮ ಕಲೆಕ್ಷನ್ ಮಾಡಿತ್ತು. ಸದ್ಯ ರಿಲೀಸ್ ಆಗಿರುವ ಪೈಲ್ವಾನ್ ಸಿನಿಮಾಗೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಜೊತೆಗೆ ಕಲೆಕ್ಷನ್ ವಿಚಾರದಲ್ಲು ಹಿಂದೆ ಬಿದ್ದಿಲ್ಲ.

  ಕೆಜಿಎಫ್ ಮೊದಲ ದಿನದ ಕಲೆಕ್ಷನ್

  ಕೆಜಿಎಫ್ ಮೊದಲ ದಿನದ ಕಲೆಕ್ಷನ್

  ಕೆಜಿಎಫ್ ಇಡೀ ಭಾರತೀಯ ಚಿತ್ರರಂಗವೆ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಮೊದಲ ಬಾರಿಗೆ ಪ್ಯಾನ್ ಇಂಡಿಯ ಪರಿಕಲ್ಪನೆಯನ್ನು ಕನ್ನಡದಲ್ಲಿ ಪರಿಚಯಿಸಿದ ಕೆಜಿಎಫ್ ಗೆ ಎಲ್ಲಾ ಕಡೆಯಿಂದನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-1 ಮೊದಲ ದಿನ ಬರೋಬ್ಬರಿ 12.5 ಕೋಟಿ ಗಳಿಕೆ ಮಾಡಿತ್ತು. ಕರ್ನಾಟಕದಲ್ಲಿ ಸುಮಾರು 400ಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ಕೆಜಿಎಫ್ ತೆರೆಗೆ ಬಂದಿತ್ತು.

  ಕುರುಕ್ಷೇತ್ರ ಫಸ್ಟ್ ಡೇ ಕಲೆಕ್ಷನ್

  ಕುರುಕ್ಷೇತ್ರ ಫಸ್ಟ್ ಡೇ ಕಲೆಕ್ಷನ್

  ಪೌರಾಣಿಕ ಸಿನಿಮಾ ಕುರುಕ್ಷೇತ್ರ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ತೆರೆಗೆ ಬಂದಿದ್ದು. ಏಕಕಾಲಕ್ಕೆ ಬೇರೆ ಬೇರೆ ಭಾಷೆಯಲ್ಲಿ ತೆರೆಗೆ ಬಂದಿಲ್ಲವಾದ್ದರು ಐದು ಭಾಷೆಯಲ್ಲಿ ರಿಲೀಸ್ ಮಡಲು ಪ್ಲಾನ್ ಮಾಡಿತ್ತು ಚಿತ್ರತಂಡ. ದಕ್ಷಿಣ ಭಾರತೀಯ ಎಲ್ಲಾ ಭಾಷೆಯಲ್ಲು ಕುರುಕ್ಷೇತ್ರ ರಿಲೀಸ್ ಆಗಿದೆ. ದರ್ಶನ್ ಸೇರಿದಂತೆ ಸಾಕಷ್ಟು ದೊಡ್ಡ ದೊಡ್ಡ ಕಲಾವಿದರು ಅಭಿನಯಿಸಿರುವ ಕುರುಕ್ಷೇತ್ರ ಮೊದಲ ದಿನ 13 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಆದ್ರೆ ಈ ಬಗ್ಗೆ ಚಿತ್ರತಂಡ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ.

  ದಿ ವಿಲನ್ ಗಳಿಸಿದೆಷ್ಟು?

  ದಿ ವಿಲನ್ ಗಳಿಸಿದೆಷ್ಟು?

  ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಿಗೆ ಸುದ್ದು ಮಾಡಿದ ಚಿತ್ರ ದಿ ವಿಲನ್. ದಿ ವಿಲನ್ ಕನ್ನಡದಲ್ಲಿ ಮಾತ್ರ ತೆರೆಗೆ ಬಂದ ಸಿನಿಮಾ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಸುದೀಪ್ ಇಬ್ಬರು ಒಟ್ಟಿಗೆ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ದಿ ವಿಲನ್ ಮೊದಲ ದಿನ ಕರ್ನಾಟಕ ಮಾತ್ರವಲ್ಲದೆ ಓವರ್ ಸೀಸ್ ಎಲ್ಲಾ ಸೇರಿ 20 ಕೋಟಿ ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ.

  ಪೈಲ್ವಾನ್ ಮೊದಲ ದಿನದ ಕಲೆಕ್ಷನ್

  ಪೈಲ್ವಾನ್ ಮೊದಲ ದಿನದ ಕಲೆಕ್ಷನ್

  ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ನಿನ್ನೆ ತೆರೆಗೆ ಬಂದಿದೆ. ಪೈಲ್ವಾನ್ ಮೊದಲ ದಿನ ಕರ್ನಾಟಕದಲ್ಲಿ 10 ಕೋಟಿ ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ. ಪೈಲ್ವಾನ್ ಏಕಕಾಲಕ್ಕೆ ಐದು ಭಾಷೆಯಲ್ಲಿ ತೆರೆಗೆ ಬಂದ ಸಿನಿಮಾ. ಪೈಲ್ವಾನ್ ಸುಮಾರು 400ಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ.

  English summary
  KGF, Kurukshetra and The Villain movie First day box office collection.
  Friday, September 13, 2019, 14:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X